ನಿತ್ಯವೂ ಪತಿಯ ಕಿರುಕುಳ: ಕಲಬುರಗಿಯಲ್ಲಿ 9 ವರ್ಷದ ಮಗನನ್ನು ಕೊಂದು ಗೃಹಿಣಿ ಆತ್ಮಹತ್ಯೆ

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ಒಂಬತ್ತು ವರ್ಷದ ಮಗನೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.

Published: 12th March 2021 08:37 AM  |   Last Updated: 12th March 2021 08:37 AM   |  A+A-


Representational iimage

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಕಲಬುರಗಿ: ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ಒಂಬತ್ತು ವರ್ಷದ ಮಗನೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.

ಮೃತರನ್ನು ಸುಚಿತ್ರಾ (34 ವ), ಮತ್ತವರ ಮಗ ವಿನೀತ್ (9) ಎಂದು ಗುರುತಿಸಲಾಗಿದೆ.

ಓಂ ನಗರದಲ್ಲಿರುವ ಅಪಾರ್ಟ್‌ಮೆಂಟ್ ನಲ್ಲಿರುವ ಈ ದುರಂತ ನಡೆದಿದ್ದು, ಇಬ್ಬರೂ ಒಂದೇ ಫ್ಯಾನ್ ಗೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ. ಸುಚಿತ್ರಾ ಪತಿ ಜಗದೀಶ್ ಕಾಂಬಳೆ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ.

ಕಾಳಗಿ ಪಟ್ಟಣದ ಬ್ಯಾಂಕ್ ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿರುವ ಜಗದೀಶ್ ಕಾಂಬಳೆ, ಸುಚಿತ್ರಾಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ.  ಮಾನಸಿಕ ಅಸ್ವಸ್ಥ ಮಗುವಿನ ಕಾರಣವಾಗಿ ದಿನವೂ ದಂಪತಿ ಜಗಳವಾಡುತ್ತಿದ್ದರು. ಇದೇ ವಿಷಯವಾಗಿ ಆಗಾಗ್ಗೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗುವಿನೊಂದಿಗೆ ಸುಚಿತ್ರಾ ನೇಣು ಬಿಗಿದುಕೊಂಡಿದ್ದಾರೆ.

ರಾತ್ರಿ 9 ಗಂಟೆಗೆ ಆಗಮಿಸಿದ ಜಗದೀಶ್ ಮನೆಯಲ್ಲಿ ಹೆಂಡತಿ ಮಗ ನೇಣು ಬಿಗಿದುಕೊಂಡಿರುವುದನ್ನು ನೋಡಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಸುಚಿತ್ರಾ ಪೋಷಕರು ಬೆಳಗಾವಿಯಲ್ಲಿ ನೆಲೆಸಿದ್ದು, ವಿಷಯ ತಿಳಿದು ಅವರು ನಗರಕ್ಕೆ ಈಗಾಗಲೇ ಆಗಮಿಸಿದ್ದಾರೆ.‌ ಸುಚಿತ್ರಾ ಮತ್ತು ಬಾಲಕನ ಸಾವಿನ ಬಗ್ಗೆ ಆಕೆಯ ತಂದೆ ನೀಡಿರುವ ದೂರಿನ ಮೇರೆಗೆ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದದ್ದು ಜಗದೀಶ್ ಕಾಂಬಳೆಯನ್ನು ವಶಕ್ಕೆ ಪಡೆಯಲಾಗಿದೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp