ಮಹಾಶಿವರಾತ್ರಿ: ದೇವಾಲಯಗಳಲ್ಲಿ ಮಾರ್ಷಲ್'ಗಳ ಕಣ್ಗಾವಲು

ನಗರದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಹೆಚ್ಚಾಗುತ್ತಿದ್ದು ನಿರ್ದಿಷ್ಟ ಪ್ರದೇಶಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಿವರಾತ್ರಿ ಸಂದರ್ಭದಲ್ಲಿ ಕೊರೋನಾ ಸೋಂಕು ಹೆಚ್ಚು ಹರಡದಂತೆ ತಡೆಯಲು ಬಿಬಿಎಂಪಿ ಕ್ರಮಗಳನ್ನು ಕೈಗೊಂಡಿದೆ.

Published: 12th March 2021 09:03 AM  |   Last Updated: 12th March 2021 01:05 PM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ನಗರದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಹೆಚ್ಚಾಗುತ್ತಿದ್ದು ನಿರ್ದಿಷ್ಟ ಪ್ರದೇಶಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಿವರಾತ್ರಿ ಸಂದರ್ಭದಲ್ಲಿ ಕೊರೋನಾ ಸೋಂಕು ಹೆಚ್ಚು ಹರಡದಂತೆ ತಡೆಯಲು ಬಿಬಿಎಂಪಿ ಕ್ರಮಗಳನ್ನು ಕೈಗೊಂಡಿದೆ. 

ಹಬ್ಬದ ಪ್ರಯುಕ್ತ ನಗರದ ದೇವಸ್ಥಾನಗಳಲ್ಲಿ ಆಯೋಜಿಸಲಾಗಿರುವ ವಿಶೇಷ ಪೂಜೆ ಸಂದರ್ಭದಲ್ಲಿ ಹೆಚ್ಚೆಚ್ಚು ಜನರು ಗುಂಪುಗೂಡದಂತೆ, ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಪಾಲಿಕೆ ಮಾರ್ಷಲ್'ಗಳನ್ನು ನಿಯೋಜಿಸಿದೆ. 

ಈ ಮಾರ್ಷಲ್ ಗಳು ದೇವಸ್ಥಾನಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ಸಾಗಿ ದೇವರ ಮೂರ್ತಿ ದರ್ಶನ ಪಡೆಯುವಂತೆ ನೋಡಿಕೊಂಡರು. ಈ ವೇಳೆ ಮಾಸ್ಕ್ ಧರಿಸುವಂತೆ ಹಾಗೂ ಕೊರೋನಾ ನಿಯಮಗಳನ್ನು ಪಾಲನೆ ಮಾಡುವಂತೆ ಸೂಚನೆ ನೀಡಿದರು. ಈ ನಡುವೆ ಕೊರೋನಾ ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನಗಳಲ್ಲಿ ಭಕ್ತರ ದೇಹದ ಉಷ್ಣಾಂಶ ಪರಿಶೀಲಿಸುವ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. 

ನಗರದ ಒಂದೊಂದು ದೇವಾಲಯಗಳಿಗೂ 3-4 ಮಾರ್ಷಲ್ ಗಳನ್ನು ನೇಮಿಸಲಾಗಿತ್ತು. ವಿಶ್ವೇಶ್ವರ ಶಿವ ದೇವಾಲಯ, ಸೋಮೇಶ್ವರ ದೇವಾಲಯ, ಮಹದೇಶ್ವರ ಸ್ವಾಮಿ ದೇವಸ್ಥಾನ, ನೀಲಕಂಠೇಶ್ವರ ದೇವಾಲಯ, ನಾಗೇಶ್ವರ ದೇವಾಲಯ ಮತ್ತು ಅಮೃತೇಶ್ವರ ದೇವಾಲಯ ಸೇರಿ ಒಟ್ಟು 35 ದೇವಸ್ಥಾನಗಳಿಗೆ ಮಾರ್ಷಲ್ ಗಳನ್ನು ನೇಮಿಸಲಾಗಿತ್ತು ಎಂದು ಬಿಬಿಎಂಪಿ ಮಾಹಿತಿ ನೀಡಿದೆ. 

ಬಿಬಿಎಂಪಿ ಮಾರ್ಷಲ್ ಗಳ ಮುಖ್ಯಸ್ಥ ರಾಜ್ಬೀರ್ ಅವರು ಮಾತನಾಡಿ, ಜನರಲ್ಲಿ ಜಾಗೃತಿ ಮೂಡಿಸುವಂತೆ ಹಾಗೂ ಯಾರಿಗೂ ದಂಡ ಹಾಕದಂತೆ ಸೂಚಿಸಲಾಗಿತ್ತು. ಕರ್ತವ್ಯದ ವೇಳೆ ಧಾರ್ಮಿಕ ಭಾವನೆಗಳಿಗೆ ಯಾವುದೇ ರೀತಿಯ ನೋವುಗಳಾಗದಂತೆ ನೋಡಿಕೊಳ್ಳುವಂತೆಯೂ ಮಾರ್ಷಲ್ ಗಳಿಗೆ ಸೂಚನೆ ನೀಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ. 


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp