ಸೆಕ್ಸ್ ಸಿಡಿ ಹಗರಣ: ಎಸ್ ಐಟಿಗೆ ನೀಡುವ ದೂರಿನಲ್ಲಿ ಇಬ್ಬರು ರಾಜಕಾರಣಿಗಳ ಹೆಸರು ದಾಖಲಿಸಲು ರಮೇಶ್ ಜಾರಕಿಹೊಳಿ ಚಿಂತನೆ?

ರಾಜಕೀಯ ಶತ್ರುಗಳು ಎನ್ನಲಾದ ಇಬ್ಬರು ಉನ್ನತ ಮಟ್ಟದ ರಾಜಕಾರಣಿಗಳು ಸೆಕ್ಸ್ ಸಿಡಿ ಹಗರಣದಲ್ಲಿ ಭಾಗಿಯಾಗಿದ್ದು ಇದರಿಂದಾಗಿ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜಕೀಯ ವೃತ್ತಿ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿದೆ ಎಂದು ಹೇಳಲಾಗುತ್ತಿದೆ.

Published: 13th March 2021 08:40 AM  |   Last Updated: 13th March 2021 01:31 PM   |  A+A-


Ramesh Jarakiholi

ರಮೇಶ್ ಜಾರಕಿಹೊಳಿ

Posted By : Sumana Upadhyaya
Source : The New Indian Express

ಬೆಳಗಾವಿ: ರಾಜಕೀಯ ಶತ್ರುಗಳು ಎನ್ನಲಾದ ಇಬ್ಬರು ಉನ್ನತ ಮಟ್ಟದ ರಾಜಕಾರಣಿಗಳು ಸೆಕ್ಸ್ ಸಿಡಿ ಹಗರಣದಲ್ಲಿ ಭಾಗಿಯಾಗಿದ್ದು ಇದರಿಂದಾಗಿ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜಕೀಯ ವೃತ್ತಿ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿದೆ ಎಂದು ಹೇಳಲಾಗುತ್ತಿದೆ.

ನಿನ್ನೆ ವಿಶೇಷ ತನಿಖಾ ತಂಡ ಯುವತಿ ಸೇರಿದಂತೆ ಐವರನ್ನು ವಶಕ್ಕೆ ಪಡೆದಿದ್ದು ಇವರು ಸೆಕ್ಸ್ ಸಿಡಿ ಬಹಿರಂಗ ಹಿಂದಿನ ಪ್ರಮುಖ ರೂವಾರಿಗಳು ಎಂದು ಹೇಳಲಾಗುತ್ತಿದೆ. ಈ ಐದೂ ಮಂದಿ ಪ್ರಮುಖ ರಾಜಕಾರಣಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕಳೆದ ಕೆಲ ವರ್ಷಗಳಿಂದ ಹಲವು ಸಂದರ್ಭಗಳಲ್ಲಿ ಇವರೊಂದಿಗೆ ಕಾಣಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಈ ಐವರಲ್ಲಿ ಒಬ್ಬರು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಗಾಗಿ ಪ್ರಯತ್ನಿಸುತ್ತಿದ್ದರು, ಅವರು ಈ ರಾಜಕಾರಣಿಯ ಸಹಾಯವನ್ನು ಪಡೆಯುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ನಾಡಿದ್ದು ಸೋಮವಾರ ರಮೇಶ್ ಜಾರಕಿಹೊಳಿಯವರು ವಿಶೇಷ ತನಿಖಾ ತಂಡದ ಮುಂದೆ ಅಧಿಕೃತ ದೂರನ್ನು ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಮಾಹಿತಿ ನೀಡಿದ ಸುಪ್ರೀಂ ಕೋರ್ಟ್ ಅಡ್ವೊಕೇಟ್ ಕೆ ವಿ ಧನಂಜಯ್, ವಿಶೇಷ ತನಿಖಾ ತಂಡ ಒಂದು ಬಾರಿ ದೂರು ಸ್ವೀಕರಿಸಿದ ನಂತರ ಎಫ್ಐಆರ್ ದಾಖಲಿಸಲಿದೆ. ಆಗ ಎಸ್ ಐಟಿಗೆ ತನಿಖೆ ಮಾಡಲು ವಿಶೇಷ ಅಧಿಕಾರ ಸಿಗುತ್ತದೆ. ಸ್ಥಳೀಯ ಪೊಲೀಸ್ ಅಧಿಕಾರ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸಲಿದ್ದಾರೆ.

ರಮೇಶ್ ಜಾರಕಿಹೊಳಿ ಇಬ್ಬರು ಪ್ರಮುಖ ರಾಜಕಾರಣಿಗಳನ್ನು ದೂರಿನಲ್ಲಿ ದಾಖಲಿಸುವ ಸಾಧ್ಯತೆಯಿದೆ. ಸ್ಥಳೀಯ ವಿಷಯಗಳಲ್ಲಿ ರಮೇಶ್ ಜಾರಕಿಹೊಳಿಗೆ ಈ ಇಬ್ಬರು ನಾಯಕರ ಜೊತೆ ಭಿನ್ನಾಭಿಪ್ರಾಯವಿದೆ ಎಂದು ಹೇಳಲಾಗುತ್ತಿದೆ.

ರಮೇಶ್ ಜಾರಕಿಹೊಳಿ ಮತ್ತು ಕರ್ನಾಟಕ ಹಾಲು ಒಕ್ಕೂಟ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಎಫ್ಐಆರ್ ದಾಖಲಾದ ನಂತರ ಸೋಮವಾರ ಮಾಧ್ಯಮದ ಮುಂದೆ ಎಲ್ಲವನ್ನೂ ಬಹಿರಂಗಪಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈ ಬಗ್ಗೆ ಪ್ರತಿಕ್ರಿಯಿಸಿ, ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸುವ ಸರ್ಕಾರದ ನಿರ್ಧಾರವು ನ್ಯಾಯಯುತವಾಗಿದೆ, ಆದರೆ ಸಿಡಿ ಹಗರಣದಲ್ಲಿ ಭಾಗಿಯಾದವರಿಗೆ ಎಫ್ಐಆರ್ ಸಲ್ಲಿಸಿದರೆ ಮಾತ್ರ ಶಿಕ್ಷೆಯಾಗುತ್ತದೆ. ಈ ಘಟನೆಯ ಬಗ್ಗೆ ನ್ಯಾಯಯುತ ವಿಚಾರಣೆ ನಡೆಸಬೇಕು. ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯ ಕುಟುಂಬವನ್ನು ಭೇಟಿಯಾಗಲು ತಾನು ನಿಡಗುಂಡಿ ಗ್ರಾಮಕ್ಕೆ ಹೋಗಿದ್ದನ್ನು ನಿರಾಕರಿಸಿದ ಅವರು ಅದು ಮಾಧ್ಯಮಗಳ ಸೃಷ್ಟಿಯಷ್ಟೆ ಎಂದಿದ್ದಾರೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp