ಕಾಲೇಜುಗಳಿಗೆ ರಜೆ ಘೋಷಣೆ ಸುಳ್ಳು, ನಕಲಿ ಸುದ್ದಿ ನಂಬಬೇಡಿ: ಆಯುಕ್ತರ ಸ್ಪಷ್ಟನೆ

ಕೊರೋನಾ ಹೆಚ್ಚಳದ ಕಾರಣ ನಾಳೆಯಿಂದ ಹದಿನೈದು ದಿನಗಳ ಕಾಲ ಸರ್ಕಾರಿ, ಅನುದಾನಿತ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ನಕಲಿ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ಇದೊಂದು ಸುಳ್ಳು ಸುದ್ದಿ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

Published: 14th March 2021 04:24 PM  |   Last Updated: 14th March 2021 04:24 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : Online Desk

ಬೆಂಗಳೂರು: ಕೊರೋನಾ ಹೆಚ್ಚಳದ ಕಾರಣ ನಾಳೆಯಿಂದ ಹದಿನೈದು ದಿನಗಳ ಕಾಲ ಸರ್ಕಾರಿ, ಅನುದಾನಿತ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ನಕಲಿ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ಇದೊಂದು ಸುಳ್ಳು ಸುದ್ದಿ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಈ ಸಂಬಂಧ ಸ್ಪಷ್ಟನೆ ನೀಡಿದ್ದು ನಕಲಿ ಸುತ್ತೋಲೆಯನ್ನು ವೈರಲ್ ಮಾಡಿದವರ ವಿರುದ್ಧ ಸೈಬರ್ ಪೋಲೀಸರಿಗೆ ದೂರು ನೀಡಿ ಕ್ರಮ ತೆಗೆದುಕೊಳ್ಲಲಾಗುವುದು ಎಂದಿದ್ದಾರೆ.

ಇದಕ್ಕೆ ಮುನ್ನ ಸಹ ಇಂತಹೇ ಕಿಡಿಗೇಡಿ ಕೃತ್ಯ ನಡೆದಿತ್ತು. ಇಂದು ಇನ್ನೊಮ್ಮೆ ಅಂತಹದೇ ನಕಲಿ ಸುತ್ತೋಲೆ ಸೃಷ್ಟಿಸಲಾಗಿದೆ. ಸರ್ಕಾರದ ಹಳೇ ಆದೇಶ ಪ್ರತಿಯನ್ನು ಎಡಿಟ್ ಮಾಡುವ ಮೂಲಕ ಈ ನಕಲಿ ಸುತ್ತೋಲೆ ಸೃಷ್ಟಿಸಲಾಗಿದೆ ಎಂದು ಆಯುಕ್ತರು ಹೇಳಿದ್ದು ವಿದ್ಯಾರ್ಥಿಗಳು ಯಾರೂ ಈ ಸುತ್ತೋಲೆಯಲ್ಲಿರುವ ಸುದ್ದಿಯನ್ನು ನಂಬಬಾರದೆಂದು ಮನವಿ ಮಾಡಿದ್ದಾರೆ. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp