ಕೋವಿಡ್ ಲಸಿಕೆ ಸುರಕ್ಷಿತ, ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾರ್ಗ- ತಜ್ಞರ ಹೇಳಿಕೆ

 ಕೋವಿಡ್-19 ವಿರುದ್ಧದ ಲಸಿಕೆ ಸುರಕ್ಷಿತವಾಗಿದೆ. ಜನರು ತ್ವರಿತಗತಿಯಲ್ಲಿ ಚುಚ್ಚುಮದ್ದು ತೆಗೆದುಕೊಳ್ಳುತ್ತಿದ್ದು, ರೋಗ ನಿರೋಧ ಶಕ್ತಿಯಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ ಎಂದು ಹಿರಿಯ ವೈದ್ಯರು ಹೇಳಿದ್ದಾರೆ.

Published: 14th March 2021 09:39 AM  |   Last Updated: 14th March 2021 09:39 AM   |  A+A-


Casual_Photo1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಬೆಂಗಳೂರು: ಕೋವಿಡ್-19 ವಿರುದ್ಧದ ಲಸಿಕೆ ಸುರಕ್ಷಿತವಾಗಿದೆ. ಜನರು ತ್ವರಿತಗತಿಯಲ್ಲಿ ಚುಚ್ಚುಮದ್ದು ತೆಗೆದುಕೊಳ್ಳುತ್ತಿದ್ದು, ರೋಗ ನಿರೋಧ ಶಕ್ತಿಯಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ ಎಂದು ಹಿರಿಯ ವೈದ್ಯರು ಹೇಳಿದ್ದಾರೆ. ಲಸಿಕೆಯು ರೋಗ ನಿರೋಧಕ ಶಕ್ತಿ ವೃದ್ಧಿಸುವ ಪ್ರಕ್ರಿಯೆಯಾಗಿದೆ ಎಂದು ಎಸಿಇ - ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಜಗದೀಶ್ ಹಿರೇಮಠ್ ಹೇಳಿದ್ದಾರೆ. ಆದರೆ, ಇದು ಸಮಯ ತೆಗೆದುಕೊಳ್ಳಲಿದೆ ಮತ್ತು ಲಸಿಕೆ ಪಡೆಯಲು ಶೇ. 70 ರಷ್ಟು ಜನರ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಜನರು ಲಸಿಕೆಯ ಪ್ರಯೋಜನ ಪಡೆದುಕೊಳ್ಳಬೇಕು ಮತ್ತು ಚುಚ್ಚು ಮದ್ದು ಪಡೆಯುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇದು ಜನರಿಗೆ ತಲುಪಬೇಕಾದದ್ದು ಪ್ರಮುಖವಾಗಿದೆ ಎಂದು ಸ್ಟೇಟ್ ಕ್ರಿಟಿಕಲ್ ಕೇರ್ ಸಪೋರ್ಟ್ ಟೀಮ್ ಸದಸ್ಯ ಡಾ. ಅನೂಫ್ ಅಮರನಾಥ್ ಹೇಳಿದ್ದಾರೆ.

ಕೋವಾಕ್ಸಿನ್ ಲಸಿಕೆಯ ದಕ್ಷತೆ ಪ್ರಮಾಣದ ಮಾಹಿತಿ ಇತ್ತೀಚಿಗೆ ಬಿಡುಗಡೆಯಾದ ನಂತರ ಅದನ್ನು ತೆಗೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡಾ ಕೋವಾಕ್ಸಿನ್ ಲಸಿಕೆ ಪಡೆದಿದ್ದಾರೆ. ಇದೇ ರೀತಿಯಲ್ಲಿ ಹೆಚ್ಚಿನ ಜನರು ಲಸಿಕೆ ಪಡೆಯಬೇಕಾಗಿದೆ. ಒಂದು ಬಾರಿ ಲಸಿಕೆ ಪಡೆದ ನಂತರ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆ. ಇದರಿಂದಾಗಿ ಕೋವಿಡ್ ನ್ನು ತಡೆಗಟ್ಟಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿರಿಯ ನಾಗರಿಕರು ಮತ್ತು ದುರ್ಬಲರು ಎರಡು ತಿಂಗಳೊಳಗೆ  ಲಸಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ. ಇದರಿಂದಾಗಿ ಅವರು ಸುರಕ್ಷಿತರಾಗಬಹುದಾಗಿದೆ. ತೀವ್ರ ಸೋಂಕು ಇಳಿಕೆಯಾಗಲಿದೆ ಎಂದು ಕೋವಿಡ್ ಕುರಿತ ರಾಜ್ಯ ತಜ್ಞರ ಸಮಿತಿ ಸದಸ್ಯ ಡಾ. ಗಿರಿಧರ ಬಾಬು ಹೇಳಿದ್ದಾರೆ.

ಲಸಿಕೆ ಕೋವಿಡ್ ನಿಂದ ರಕ್ಷಣೆ ನೀಡುವುದು ಮಾತ್ರವಲ್ಲದೇ, ಸಮುದಾಯದಲ್ಲಿ ಸೋಂಕು ಹರಡದಂತೆ ತಡೆಗಟ್ಟಲಿದೆ. ಇದು ಹಿರಿಯ ನಾಗರಿಕರನ್ನು ರಕ್ಷಿಸಲಿದೆ ಎಂದು ಮಣಿಪಾಲ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಸಮಾಲೋಚಕ ಡಾ. ರಂಜಿತ್ ಮೋಹನ್ ತಿಳಿಸಿದ್ದಾರೆ. 

ಅರ್ಹ ಎಲ್ಲ ಜನರು ಲಸಿಕೆ ಪಡೆಯಬೇಕು ಇದರಿಂದ ಮಾತ್ರ ಕೋವಿಡ್-19 ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಸಲಿದೆ ಎಂದು ಬಿಬಿಎಂಪಿ ಆಯುಕ್ತ ಎನ್ . ಮಂಜುನಾಥ್ ಪ್ರಸಾದ್ ಮನವಿ ಮಾಡಿದ್ದಾರೆ. ಲಸಿಕೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸುವುದಾಗಿ ಹೇಳಿದ್ದಾರೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp