ರಾಮನಗರದಲ್ಲಿ ಕೊಲೆ ಆರೋಪಿ ಅನುಮಾನಾಸ್ಪದ ಸಾವು, ಸಿಒಡಿ ತನಿಖೆ ಪ್ರಾರಂಭ

ಕೊಲೆ ಆರೋಪಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

Published: 14th March 2021 02:48 PM  |   Last Updated: 14th March 2021 02:48 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : Online Desk

ರಾಮನಗರ: ಕೊಲೆ ಆರೋಪಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಸೀಗೆಕೋಟೆ ಭದ್ರಾಚಾರಿ  ಎಂಬ ಕೊಲೆ ಆರೋಪಿ ಪೆನಾಯಿಲ್ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.ಈತ  ಕನಕಪುರ ಗ್ರಾಮಾಂತರ ಠಾಣೆಯ ಹಳ್ಳಿಮಾರನಹಳ್ಳಿ ನಾಗರಾಜು ಎಂಬುವವರ ಕೊಲೆ ಮಾಡಿದ್ದ ಆರೋಪ ಇತ್ತು. ಪೋಲೀಸ್ ತನಿಖೆ ನಡೆದಿದ್ದು ಹಣದ ವಿಚಾರವಾಗಿ ಕೊಲೆ ನಡೆದಿರುವುದು ಖಚಿತವಾಗಿದ್ದ ಹಿನ್ನೆಲೆ ಭದ್ರಾಚಾರಿಯನ್ನು  ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಮೂರು ದಿನಗಳಿಂಡ ವಿಚಾರಣೆ ನಡೆದಿದ್ದು ಆರೋಪಿ ಕಳೆದ ರಾತ್ರಿ ಪೋಲೀಸ್ ಠಾಣೆಯಲ್ಲೇ ಪೆನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಭದ್ರಾಚಾರಿ  ಮೃತಪಟ್ಟಿದ್ದಾನೆ. 

ಭದ್ರಾಚಾರಿ ಸಾವಿಗೆ ಪೋಲೀಸರು ಕಾರಣವೆಂದು ಮೃತನ ಸಂಬಂಧಿಗಳು ದೂರಿದ್ದು ಇದೀಗ ಪ್ರಕರಣವನ್ನು  ಸಿಒಡಿ ತನಿಖೆಗೆ ವಹಿಸಲಾಗಿದೆ ಎಂದು ರಾಮನಗರ ಎಸ್​ಪಿ ಗಿರೀಶ್ ತಿಳಿಸಿದ್ದಾರೆ.


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp