ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ಸಾಕ್ಸ್‌ಗಳಲ್ಲಿ ಚಿನ್ನವನ್ನು ಸಾಗಿಸುತ್ತಿದ್ದ ಮಹಿಳೆ ಸೇರಿ ಇಬ್ಬರು ಸೆರೆ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರಾಂತ್ಯದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ದುಬೈನ ಮಹಿಳಾ ಪ್ರಯಾಣಿಕರು ಸೇರಿದಂತೆ ಇಬ್ಬರು ಸಿಕ್ಕಿಬಿದ್ದಿದ್ದು, 76.75 ಲಕ್ಷ ರೂ.ಗಳ ಮೌಲ್ಯದ 1.63 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ.  ವಿಮಾನ ನಿಲ್ದಾಣ ಕಸ್ಟಮ್ಸ್ ಅಧಿಕಾರಿಗಳು ಈ ಚಿನ್ನ ಕಳ್ಳಸಾಗಣೆ ಪತ್ತೆ ಮಾಡಿದೆ.

Published: 15th March 2021 10:38 AM  |   Last Updated: 15th March 2021 01:05 PM   |  A+A-


ಮಹಿಳೆಯಿಂದ ವಶಕ್ಕೆ ಪಡೆಯಲಾದ ಚಿನ್ನ

Posted By : Raghavendra Adiga
Source : The New Indian Express

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರಾಂತ್ಯದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ದುಬೈನ ಮಹಿಳಾ ಪ್ರಯಾಣಿಕರು ಸೇರಿದಂತೆ ಇಬ್ಬರು ಸಿಕ್ಕಿಬಿದ್ದಿದ್ದು, 76.75 ಲಕ್ಷ ರೂ.ಗಳ ಮೌಲ್ಯದ 1.63 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ. ವಿಮಾನ ನಿಲ್ದಾಣ ಕಸ್ಟಮ್ಸ್ ಅಧಿಕಾರಿಗಳು ಈ ಚಿನ್ನ ಕಳ್ಳಸಾಗಣೆ ಪತ್ತೆ ಮಾಡಿದೆ.

ಶನಿವಾರ, ಎಮಿರೇಟ್ಸ್ ವಿಮಾನದಲ್ಲಿ(EK-564) ) ಆಗಮಿಸಿದ ಪ್ರಯಾಣಿಕ ಮಹಿಳೆ ತನ್ನೊಂದಿಗೆ 1.3 ಕೆಜಿ ಚಿನ್ನವನ್ನು ತಂದಿದ್ದಳು. ಅವಳು ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ, ಅವಳ ಒಳ ಉಡುಪುಗಳಲ್ಲಿ ಹಾಗೂ ಅವಳು ಧರಿಸಿದ್ದ ಜೋಡಿ ಸಾಕ್ಸ್‌ಗಳಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡಿದ್ದಳು.ಬೆಳಿಗ್ಗೆ 8: 50 ಕ್ಕೆ ವಿಮಾನ ಬಂದಿದ್ದು, ನಿಯಮಿತ ಪ್ರೊಫೈಲಿಂಗ್ ಮತ್ತು ಫ್ರಿಸ್ಕಿಂಗ್‌ನಿಂದಾಗಿ ಮುಂಬೈ ಮೂಲದ 38 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು  ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಪ್ಲಾಸ್ಟಿಕ್ ಹಾಳೆಗಳನ್ನು ತೆಗೆದ ನಂತರ 62,57,102 ರೂ.ಗಳ ಮೌಲ್ಯದ 1,333 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ. ಸೆಕ್ಷನ್ 115 ರ ಅಡಿಯಲ್ಲಿ ವಿಮಾನ ನಿಲ್ದಾಣದ ಹೊರಗೆ ಆಕೆಗಾಗಿ ಕಾಯುತ್ತಿದ್ದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ. "ಅವಳನ್ನು ಕರೆದೊಯ್ಯಲು ಬಂದಿದ್ದ ಚಾಲಕ / ಮಾಲೀಕನನ್ನು ಸಹ ಬಂಧಿಸಲಾಯಿತು, ಆದರೆ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು" ಎಂದು ಅವರು ಹೇಳಿದರು.

ಭಾನುವಾರ ಮುಂಜಾನೆ ನಡೆದ ಇನ್ನೊಂದು ಘಟನೆಯಲ್ಲಿ ಬಾಯಿಯೊಳಗೆ ಚಿನ್ನವನ್ನು ಮರೆಮಾಚಿದ್ದ ಪುರುಷ ಪ್ರಯಾಣಿಕನನ್ನು ಬಂಧಿಸಲಾಗಿದೆ. 50 ವರ್ಷದ ಚೆನ್ನೈ ಮೂಲದವ ಇಂಡಿಗೊ ವಿಮಾನ(6E 096) ಮೂಲಕ ಬೆಳಿಗ್ಗೆ 12.10 ಕ್ಕೆ ಆಗಮಿಸಿದ್ದ. ಪ್ರಯಾಣಿಕನಿಂದ ವಶಪಡಿಸಿಕೊಂಡ ಚಿನ್ನದ ಪ್ರಮಾಣ 305 ಗ್ರಾಂ ಆಗಿದ್ದು, ಇದರ ಮೌಲ್ಯ 14,18, 815 ರೂ. ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೀವಂತ ಗುಂಡುಗಳೊಂದಿಗೆ ಬಂದಿದ್ದ ಪ್ರಯಾಣಿಕ ಸೆರೆ

ಜೀವಂತ ಗುಂಡುಗಳನ್ನಿಟ್ಟುಕೊಂಡು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕನನ್ನು ಸಿಐಎಸ್ಎಫ್ ಭಾನುವಾರ ವಶಕ್ಕೆ ತೆಗೆದುಕೊಂಡಿದೆ. ಆರೋಪಿಯು ತನ್ನ ಕೈಚೀಲದಲ್ಲಿ ಜೀವಂತ ಮದ್ದುಗುಂಡುಗಳನ್ನು ಸಾಗಿಸುತ್ತಿದ್ದನು, ಆದರೆ ಗುಂಡು ಹೇಗೆ ತನ್ನ ಬಳಿ ಬಂದಿದೆ ಎನ್ನುವ ಬಗ್ಗೆ ತನಗೆ ತಿಳಿದಿಲ್ಲ ಎಂದು ಆತ ವಿಚಾರಣೆಯ ವೇಳೆ ಹೇಳಿದ್ದಾನೆ.

ಆರೋಪಿ ಪ್ರಯಾಣಿಕನನ್ನು ಕಾರ್ತಿಕೇಯ್ ಭಾರದ್ವಾಜ್ ಎಂದು ಗುರುತಿಸಲಾಗಿದ್ದು ಈತ ಸ್ಪೈಸ್ ಜೆಟ್ ವಿಮಾನ(SG 198)  ಮೂಲಕ ನವದೆಹಲಿಗೆ ತೆರಳಬೇಕಾಗಿತ್ತು. ಈ ವಿಮಾನ ರಾತ್ರಿ 8.25 ಕ್ಕೆ ಹೊರಡುವುದಿತ್ತು.

"ದೇಶೀಯ ಪ್ರಯಾಣಕ್ಕಾಗಿ ಭದ್ರತಾ ಪರಿಶೀಲನೆ ನಡೆಯುತ್ತಿರುವಾಗ,ಪ್ರಯಾಣಿಕ 7.65 ಕೆಎಫ್ ಮಾರ್ಕ್ ಮದ್ದುಗುಂಡುಗಳನ್ನು ಹೊಂದಿರುವುದು ಕಂಡುಬಂದಿದೆ ... ಪ್ರಯಾಣಿಕನು ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ದೆಹಲಿಗೆ ಹಿಂದಿರುಗುತ್ತಿದ್ದನು" ಎಂದು ಅಧಿಕಾರಿ ಹೇಳಿದರು. ಮದ್ದುಗುಂಡುಗಳನ್ನು ಸಾಗಿಸಲು ಅವನ ಬಳಿ ಮಾನ್ಯ ಪರವಾನಗಿ ಅಥವಾ ದಾಖಲೆ ಇಲ್ಲದ ಕಾರಣ, ಮುಂದಿನ ಕ್ರಮಕ್ಕಾಗಿ ಅವರನ್ನು ವಿಮಾನ ನಿಲ್ದಾಣ ಪೊಲೀಸರಿಗೆ ಹಸ್ತಾಂತರಿಸಲಾಯಿತು.
 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp