ಬೆಂಗಳೂರು: ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ ರೈಲ್ವೆ ಟರ್ಮಿನಲ್ ಸಾರ್ವಜನಿಕ ಬಳಕೆಗೆ ಸಿದ್ದ!

ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ ರೈಲ್ವೆ ಟರ್ಮಿನಲ್ - ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ 1.2 ಕಿ.ಮೀ ದೂರದಲ್ಲಿರುವ ಅತ್ಯಾಧುನಿಕ ಸರ್ ಎಂ.ವಿ. ವಿಶ್ವೇಶ್ವರಯ್ಯ ಟರ್ಮಿನಲ್ ಸಾರ್ವಜನಿಕರಿಗೆ ಮುಕ್ತವಾಗಲು ಸಿದ್ದವಾಗಿದೆ.  

Published: 15th March 2021 09:33 AM  |   Last Updated: 15th March 2021 09:33 AM   |  A+A-


ಸರ್ ಎಂ.ವಿ. ವಿಶ್ವೇಶ್ವರಯ್ಯ ಟರ್ಮಿನಲ್

Posted By : Raghavendra Adiga
Source : The New Indian Express

ಬೆಂಗಳೂರು: ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ ರೈಲ್ವೆ ಟರ್ಮಿನಲ್ - ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ 1.2 ಕಿ.ಮೀ ದೂರದಲ್ಲಿರುವ ಅತ್ಯಾಧುನಿಕ ಸರ್ ಎಂ.ವಿ. ವಿಶ್ವೇಶ್ವರಯ್ಯ ಟರ್ಮಿನಲ್ ಸಾರ್ವಜನಿಕರಿಗೆ ಮುಕ್ತವಾಗಲು ಸಿದ್ದವಾಗಿದೆ.  314 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಟರ್ಮಿನಲ್ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿದೆ.

ಸುಂದರವಾದ ಹುಲ್ಲುಹಾಸುಗಳು ಭಾರತ ರತ್ನ ಸರ್ ಎಂ ವಿಶ್ವೇಶ್ವರಯ ಅವರ ಭವ್ಯವಾದ ಪ್ರತಿಮೆ ಜತೆಗೆ ಕಾರಂಜಿ ಕೂಡ ಇಲ್ಲಿದೆ.ಜತೆಗೆ ಇಲ್ಲಿ ಒಂದು ಸೆಲ್ಫಿ ತಾಣವನ್ನೂ ನಿರ್ಮಿಸಲಾಗಿದ್ದು ಈಗಾಗಲೇ ಸಾರ್ವಜನಿಕರ ಆಕರ್ಷಣಾ ಕೇಂದ್ರವಾಗಿದೆ.

"ನಾನು ಇಂಟೀರಿಯರ್ ನಲ್ಲಿ ಆಸಕ್ತಿ ಹೊಂದಿದ್ದೇನೆ, ಇನ್ ಸ್ಟಾಲೇಷನ್ ಗಳು ಖಂಡಿತವಾಗಿಯೂ ಉತ್ತಮವಾಗಿವೆ" ಎಂದು ರಾಜ್ ಆನಂದ್ ವಿಕ್ಟರ್ ಹೇಳಿದ್ದಾರೆ. ಅವರು  ತಮ್ಮಿಬ್ಬರು ಹೆಣ್ಣುಮಕ್ಕಳೊಂದಿಗೆ ಅಲ್ಲಿಗೆ ಬಂದಿದ್ದರು. ಟರ್ಮಿನಲ್ ಗೆ  ನಾಲ್ಕು ಎಕರೆ ಭೂಮಿಯನ್ನು ಸೇರಿಸಲಾಗುತ್ತಿದ್ದು ಇದರಲ್ಲಿ ಸ್ಥಳೀಯ ವಿವಿಧ ಜಾತಿಯ ಸಸ್ಯಗಳನ್ನು ನೆಡಲಾಗುತ್ತದೆ. "ನೀರು ವಿತರಿಸುವ ಘಟಕಗಳು ಪ್ಲಾಂಟರ್‌ಗಳಿಗೆ (ಹೂಕುಂಡಗಳು)ಜೋಡಿಸಲ್ಪಟ್ಟಿವೆ, ಅದರ ಒಳಾಂಗಣ ಸಸ್ಯಗಳು, ಶೌಚಾಲಯ ಜತೆಗೆ ಏಳು ಪ್ಲಾಟ್‌ಫಾರ್ಮ್ ಸ್ಥಾಪಿಸುವ ಅವಕಾಶವಿದೆ" ಎಂದು ಟರ್ಮಿನಲ್ ಅನ್ನು ವಿನ್ಯಾಸಗೊಳಿಸಿದ ಆರ್ಆರ್ ಆರ್ಕಿಟೆಕ್ಟ್ಸ್ ಮತ್ತು ಅಸೋಸಿಯೇಟ್ಸ್‌ನ ರೂಪಕಲಾ ಡಿಎಸ್ ವಿವರಿಸುತ್ತಾರೆ.

ಯುಬಿ ಪೋರ್ಟ್ ಗೆ ಚಾರ್ಜಿಂಗ್ ಪಾಯಿಂಟ್ ಮತ್ತು ನಿರೀಕ್ಷಣಾ ಪ್ರದೇಶದ ಆಸನಗಳ ಬಳಿ ವಿಶೇಷ ರಚನೆಗಳನ್ನು ಮಾಡಲಾಗಿದೆ. ರಬ್ಬರ್ ಬೋರ್ಡ್ ಬೆಂಚುಗಳನ್ನು ಸ್ಥಾಪಿಸಲಾಗಿದೆ, ಆದಾಗ್ಯೂ, ಸಂಪೂರ್ಣ ರೈಲು ಸೇವೆಗಳು ಪುನರಾರಂಭಗೊಳ್ಳುವ ಮೊದಲು ನಾಗರಿಕ ಮತ್ತು ಮೂಲಸೌಕರ್ಯ ಏಜೆನ್ಸಿಗಳು ತಮ್ಮ ಕೆಲಸ ಪೂರ್ಣಗೊಳಿಸಬೇಕು ಅಲ್ಲದೆ ಅಂತರ-ಸಾರಿಗೆ ಸಂಪರ್ಕವನ್ನು ಕಲ್ಪಿಸುವುದು ಬಹಳ ಮುಖ್ಯ, ಇದರಿಂದ ಪ್ರಯಾಣಿಕರು ಅದರ ವೈಶಿಷ್ಟ್ಯಗಳನ್ನು ಹೆಚ್ಚು ಉತ್ತಮವಾಗಿ ಬಳಕೆ ಮಾಡಿಕೊಳ್ಲಬಹುದು.

ಟರ್ಮಿನಲ್ ಉದ್ಘಾಟನೆಗೆ ಪ್ರಧಾನಿ ಮೋದಿ 

ಇದೀಗ ಸಂಪೂರ್ಣವಾಗಿ ಸಿದ್ಧವಾಗಿರುವ ಟರ್ಮಿನಲ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವವರಿದ್ದು ಪ್ರಧಾನ ಮಂತ್ರಿ ಕಚೇರಿಯ ದಿನಾಂಕಗಳ ಹೊಂದಾಣಿಕೆ ಇನ್ನಷ್ಟೇ ಆಗಬೇಕಿದೆ. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp