ಕೋವಿಡ್ ಲಸಿಕೆ ಪಡೆದ ಯಡಿಯೂರಪ್ಪ: ಯಾವುದೇ ಅಡ್ಡ ಪರಿಣಾಮ ಕಾಣದೆ ಆರಾಮಾಗಿರುವ ಮುಖ್ಯಮಂತ್ರಿಗಳು!

ಕಳೆದ ಶುಕ್ರವಾರ ಕೊವಾಕ್ಸಿನ್ ಲಸಿಕೆ ಪಡೆದ ನಂತರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಯಾವುದೇ ಅಡ್ಡ ಪರಿಣಾಮ ಇದುವರೆಗೆ ಕಂಡುಬಂದಿಲ್ಲ. ಆರೋಗ್ಯ ಸಚಿವ ಡಾ ಕೆ ಸುಧಾಕರ್ ಕೂಡ ಕೊವಾಕ್ಸಿನ್ ಲಸಿಕೆ ಪಡೆದುಕೊಂಡಿದ್ದು ಮೊನ್ನೆ ಶನಿವಾರ ಅವರ ದೇಹದಲ್ಲಿ ಸಣ್ಣ ಮಟ್ಟಿಗೆ ತಾಪಮಾನ ಕಂಡುಬಂದಿತ್ತು.

Published: 15th March 2021 08:22 AM  |   Last Updated: 15th March 2021 01:02 PM   |  A+A-


CM BS Yediyurappa takes a jab of COVID-19 vaccine.

ಕೋವಿಡ್ ಲಸಿಕೆ ಪಡೆದ ಸಿಎಂ ಬಿ ಎಸ್ ಯಡಿಯೂರಪ್ಪ

Posted By : Sumana Upadhyaya
Source : The New Indian Express

ಬೆಂಗಳೂರು: ಕಳೆದ ಶುಕ್ರವಾರ ಕೊವಾಕ್ಸಿನ್ ಲಸಿಕೆ ಪಡೆದ ನಂತರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಯಾವುದೇ ಅಡ್ಡ ಪರಿಣಾಮ ಇದುವರೆಗೆ ಕಂಡುಬಂದಿಲ್ಲ. ಆರೋಗ್ಯ ಸಚಿವ ಡಾ ಕೆ ಸುಧಾಕರ್ ಕೂಡ ಕೊವಾಕ್ಸಿನ್ ಲಸಿಕೆ ಪಡೆದುಕೊಂಡಿದ್ದು ಮೊನ್ನೆ ಶನಿವಾರ ಅವರ ದೇಹದಲ್ಲಿ ಸಣ್ಣ ಮಟ್ಟಿಗೆ ತಾಪಮಾನ ಕಂಡುಬಂದಿತ್ತು.

ಮುಖ್ಯಮಂತ್ರಿಗಳು ಯಾವುದೇ ಸಮಸ್ಯೆಗಳಿಲ್ಲದೆ ಆರಾಮಾಗಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದ ಯಡಿಯೂರಪ್ಪನವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಒಂದು ವಾರವಿದ್ದು, ನಂತರ ಒಂದು ವಾರ ಮನೆಯಲ್ಲಿ ಹೋಂ ಕ್ವಾರಂಟೈನ್ ಆಗಿದ್ದರು.

ಯಡಿಯೂರಪ್ಪನವರ ದೇಹದಲ್ಲಿ ರೋಗನಿರೋಧಕ ಶಕ್ತಿ ಚೆನ್ನಾಗಿದ್ದು ಹೀಗಾಗಿ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಕಂಡುಬಂದಿಲ್ಲ. ಕೋವಿಡ್ ಟಾಸ್ಕ್ ಫೋರ್ಸ್ ನ ಭಾಗವಾಗಿರುವ ಮಣಿಪಾಲ ಆಸ್ಪತ್ರೆಯ ಡಾ ಸುದರ್ಶನ್ ಬಲ್ಲಾಳ್, ಲಸಿಕೆ ಪಡೆದುಕೊಂಡ ನಂತರ ಬಹುತೇಕ ಮಂದಿ ಯಾವುದೇ ಅಡ್ಡ ಪರಿಣಾಮದ ಲಕ್ಷಣಗಳು ಹೊಂದುವುದಿಲ್ಲ. ತಾವು ಕೋವಿಡ್ ನ ಎರಡೂ ಡೋಸ್ ಪಡೆದಿದ್ದು ಯಾವುದೇ ಸಮಸ್ಯೆಯುಂಟಾಗಿಲ್ಲ ಎಂದು  ಹೇಳಿದರು.

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಇಂದು ಸಂಜೆ 4 ಗಂಟೆ ಸುಮಾರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆಯಲಿದ್ದಾರೆ ಎಂದು ಆಸ್ಪತ್ರೆ ನಿರ್ದೇಶಕಿ ಡಾ ಜಯಂತಿ ಹೇಳುತ್ತಾರೆ. ಸಿದ್ದರಾಮಯ್ಯನವರು ಕೂಡ ಕಳೆದ ಆಗಸ್ಟ್ ನಲ್ಲಿ ಕೋವಿಡ್ ಬಂದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು.

ಹಲವರು ಕೋವಿಡ್ ಲಸಿಕೆ ಪಡೆದ ನಂತರ ದೇಹದ ಉಷ್ಣತೆಯಲ್ಲಿ ಏರಿಕೆಯಾಗುತ್ತದೆ ಎಂದು ಹೇಳುತ್ತಾರೆ, ಈ ಬಗ್ಗೆ ಪರಿಶೀಲನೆ ಮಾಡಬೇಕಿದೆ ಎಂದು ಡಾ ಜಯಂತಿ ತಿಳಿಸಿದ್ದಾರೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp