ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸರಕು ಸಾಗಣೆ ಸೇವೆ ಪ್ರಾರಂಭ; ರೈತರು ಮತ್ತು ಉದ್ಯಮಿಗಳಿಗೆ ಅನುಕೂಲ

ಉತ್ತರ ಕರ್ನಾಟಕದ ವ್ಯಾಪಾರಿಗಳ ಸಮುದಾಯಕ್ಕೆ ದೊಡ್ಡ ಉತ್ತೇಜನ ನೀಡಲು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಿಯಂತ್ರಕ ಪ್ರಾಧಿಕಾರದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ (ಬಿಸಿಎಎಸ್) ಅನುಮೋದನೆಯೊಂದಿಗೆ ಅಸ್ತಿತ್ವದಲ್ಲಿರುವ ಪ್ರಯಾಣಿಕರ ಟರ್ಮಿನಲ್ ಕಟ್ಟಡದಿಂದ ಸರಕುಗಳ ಹೊರ ಸಾಗಾಟ ಹಾಗೂ ಹೊರಗಿನಿಂದ ತರಿಸಿಕೊಳ್ಳುವ ಸೇವೆ ಪ್ರಾರಂಭಿಸಿದೆ.

Published: 15th March 2021 11:56 AM  |   Last Updated: 15th March 2021 01:06 PM   |  A+A-


ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸರಕು ಸಾಗಣೆ ಸೇವೆ ಪ್ರಾರಂಭ

Posted By : Raghavendra Adiga
Source : The New Indian Express

ಹುಬ್ಬಳ್ಳಿ: ಉತ್ತರ ಕರ್ನಾಟಕದ ವ್ಯಾಪಾರಿಗಳ ಸಮುದಾಯಕ್ಕೆ ದೊಡ್ಡ ಉತ್ತೇಜನ ನೀಡಲು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಿಯಂತ್ರಕ ಪ್ರಾಧಿಕಾರದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ (ಬಿಸಿಎಎಸ್) ಅನುಮೋದನೆಯೊಂದಿಗೆ ಅಸ್ತಿತ್ವದಲ್ಲಿರುವ ಪ್ರಯಾಣಿಕರ ಟರ್ಮಿನಲ್ ಕಟ್ಟಡದಿಂದ ಸರಕುಗಳ ಹೊರ ಸಾಗಾಟ ಹಾಗೂ ಹೊರಗಿನಿಂದ ತರಿಸಿಕೊಳ್ಳುವ ಸೇವೆ ಪ್ರಾರಂಭಿಸಿದೆ.

ವಿಮಾನ ನಿಲ್ದಾಣದಲ್ಲಿ ಹೊರಗಿನಿಂದ ಸರಕುಗಳನ್ನು ತರಿಸಿಕೊಳ್ಳುವ ಸೇವೆ ಇತ್ತು. ಆದರೆ ವಿಮಾನ ನಿಲ್ದಾಣದಿಂದ ಇತರೆಡೆಗೆ ಸರಕುಗಳನ್ನು ಕಳಿಸುವ ಸೇವೆ ಇರಲಿಲ್ಲ.ಅಗತ್ಯ ಕಚೇರಿಯಿಂದ ಸಂಬಂಧಿತ ಅನುಮೋದನೆಗಳನ್ನು ಪಡೆದ ನಂತರ, ವಿಮಾನ ನಿಲ್ದಾಣವು ಸರಕು ಸೇವೆಯನ್ನು ಪ್ರಾರಂಭಿಸಿತು. ಮೊಟ್ಟ ಮೊದಲನೆಯದಾಗಿ ಇಂಡಿಗೊ ವಿಮಾನಯಾನ ಸಂಸ್ಥೆ ಶನಿವಾರ ಸಂಜೆ ಸರಕುಗಳನ್ನು ಬೆಂಗಳೂರಿಗೆ ಸಾಗಿಸಿತು.

ಹಳೆಯ ಟರ್ಮಿನಲ್ ಕಟ್ಟಡವನ್ನು ಇತ್ತೀಚೆಗೆ 60 ಲಕ್ಷ ರೂ.ಗಳ ವೆಚ್ಚದಲ್ಲಿ ಸರಕು ಸೇವಾ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಕೆಲವು ಅಂತಿಮ ಅನುಮೋದನೆಗಳನ್ನು ಪಡೆದ ನಂತರ ಏಪ್ರಿಲ್ ತಿಂಗಳಲ್ಲಿ ಇದನ್ನು ಉದ್ಘಾಟಿಸುವ ನಿರೀಕ್ಷೆಯಿದೆ.

ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್ ಕುಮಾರ್ ಠಾಕ್ರೆ ಮಾತನಾಡಿ, ಉತ್ತರ ಕರ್ನಾಟಕದ ಮೊಟ್ಟ ಮೊದಲ ಮೀಸಲು ದೇಶೀ ವಾಯು ಸರಕು ಸೇವೆಗಳ ಟರ್ಮಿನಲ್ ಕೆಲಸ ಪೂರ್ಣಗೊಂಡಿದೆ. ಟರ್ಮಿನಲ್‌ನ ಅಂತಿಮ ತಪಾಸಣೆ ಮಾರ್ಚ್ 17 ರಂದು ಪ್ರಾದೇಶಿಕ ನಿರ್ದೇಶಕ ಬಿಸಿಎಎಸ್ ಬೆಂಗಳೂರು ನೇತೃತ್ವದ ಸ್ಥಾಯಿ ಸಮಿತಿಯಿಂದ ನಡೆಯಲಿದೆ ಎಂದರು. “700 ಚದರ ಅಡಿ ಸರಕು ಟರ್ಮಿನಲ್‌ನಲ್ಲಿ ಭದ್ರತಾ ಸಾಧನಗಳ ಸ್ಥಾಪನೆ ಮಾಡಲಾಗಿದ್ದು  ಬಿಸಿಎಎಸ್ ಅಧಿಕಾರಿಗಳ ಪರಿಶೀಲನೆಯ ನಂತರ, ಏಪ್ರಿಲ್‌ನಲ್ಲಿ ಸೇವೆಗಳನ್ನು ಪ್ರಾರಂಭಿಸಲು ಅಂತಿಮ ಅನುಮೋದನೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ, ”ಎಂದು ಅವರು ತಿಳಿಸಿದರು.

ಮುಂಬೈ, ಚೆನ್ನೈ ಮತ್ತು ಬೆಂಗಳೂರು ಪ್ರಮುಖ ಕೈಗಾರಿಕಾ ಕೇಂದ್ರಗಳಾಗಿದ್ದು ಇದಾಗಲೇ ಈ ನಗರಗಳು ಹಿಬ್ಬಳ್ಳಿಯೊಂದಿಗೆ ವೈಮಾನಿಕ ಸಂಪರ್ಕ ಹೊಂದಿದೆ.ಈ ಪ್ರಮುಖ ವ್ಯಾಪಾರ ಕೇಂದ್ರಗಳಿಗೆ ಇಲ್ಲಿಂದ ಸರಕುಗಳನ್ನು ಸಾಗಿಸಲು ಅನುಕೂಲವಾಗುವಂತೆ ಸರಕು ಸೇವೆಯು ಉತ್ತರ ಕರ್ನಾಟಕ ಪ್ರದೇಶದ ಅನೇಕ ಉದ್ಯಮಿಗಳಿಗೆ ಸಹಾಯ ಆಗಲಿದೆ. ಸಧ್ಯ ಅವರೆಲ್ಲಾ ಈ ಸೇವೆಗಾಗಿ ಗೋವಾ ವಿಮಾನ ನಿಲ್ದಾಣವನ್ನು ಅವಲಂಬಿಸಿದ್ದಾರೆ.ಈಗಿನಂತೆ, ಇಂಡಿಗೊ ಈ ಎಲ್ಲಾ ಪ್ರಮುಖ ವ್ಯಾಪಾರ ಕೇಂದ್ರಗಳಿಗೆ ಸರಕು ಸಾಗಣೆ ಸೇವೆ ನೀಡುತ್ತಿದೆ. 

ಹುಬ್ಬಳ್ಳಿ ಮತ್ತು ಸುತ್ತಮುತ್ತ ಅನೇಕ ಕೈಗಾರಿಕೆಗಳಿವೆ ಮತ್ತು ಸರಕು ಸಾಗಾಟ ಸೇವೆ ಅಂತಹಾ ಕೈಗಾರಿಕೆಗಳಿಗೆ ತಮ್ಮ ಉತ್ಪನ್ನಗಳನ್ನು ವೇಗವಾಗಿ ಕಳುಹಿಸಲು ಸಹಾಯವಾಗಲಿದೆ ಎಂದು ನಗರದ ಉದ್ಯಮಿ ಸುನಿಲ್ ನಲವಾಡೆ ಹೇಳಿದ್ದಾರೆ. 

ರೈತರಿಗೆ ಸಹ ಈ ಸರಕು ಸೇವೆ ದೂರದ ಊರುಗಳಿಗೆ ತಮ್ಮ ಉತ್ಪನ್ನಗಳನ್ನು ಕಳುಹಿಸಲು ನೆರವಾಗಲಿದೆ. ವಿಶೇಷವಾಗಿ ಮಾವಿನ ಹಣ್ಣುಗಳನ್ನು ಮೆಟ್ರೋ ನಗರಗಳಿಗೆ ತಲುಪಿಸಲು ಇದು ಸಹಾಯವಾಗುತ್ತದೆ. ಧಾರವಾಡ ಹಾಗೂ ಹಾವೇರಿ ಮಾವಿನ ಉತ್ಪಾದನೆಗೆ ಹೆಸರುವಾಸಿಯಾಗಿದೆ. "ಆದಾಗ್ಯೂ, ಸಂಬಂಧಪಟ್ಟ ಸೇವಾ ಪೂರೈಕೆದಾರರು ಉತ್ತರ ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಜನರನ್ನು ತಲುಪಲು ಸರಕು ಸೇವೆಯ ಬಗ್ಗೆ ಜಾಗೃತಿ ಮೂಡಿಸಬೇಕು" ಎಂದು ಅವರು ಹೇಳಿದರು.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp