ಬೆಲೆ ಏರಿಕೆ: ಎಲ್‌ಪಿಜಿ ಬಿಟ್ಟು ಮತ್ತೆ ಕಟ್ಟಿಗೆ, ಸಾಂಪ್ರದಾಯಿಕ ಇಂಧನ ಮೊರೆಹೋದ ಗ್ರಾಮೀಣ ಜನತೆ

2015 ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಮರದ ಕಟ್ಟಿಗೆಯಂತಹಾ ಸಾಂಪ್ರದಾಯಿಕ ಅಡುಗೆ ಇಂಧನಗಳಿಗೆ ವಿದಾಯ ಹೇಳಿದ್ದ , ಹೊಗೆ ರಹಿತವಾಗಿದ್ದ ಗ್ರಾಮ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಚಕುರಹಳ್ಳಿಯಲ್ಲೀಗ ಆರು ವರ್ಷಗಳ ತರುವಾಯ ಮತ್ತೆ ಸಾಂಪ್ರದಾಯಿಕ ಇಂಧನ, ಕಟ್ಟಿಗೆ ಒಲೆ ಉರಿಸಲು ಜನ ಸಿದ್ದವಾಗಿದ್ದಾರೆ. 

Published: 15th March 2021 08:58 AM  |   Last Updated: 15th March 2021 08:58 AM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : The New Indian Express

ಬೆಂಗಳೂರು: 2015 ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಮರದ ಕಟ್ಟಿಗೆಯಂತಹಾ ಸಾಂಪ್ರದಾಯಿಕ ಅಡುಗೆ ಇಂಧನಗಳಿಗೆ ವಿದಾಯ ಹೇಳಿದ್ದ , ಹೊಗೆ ರಹಿತವಾಗಿದ್ದ ಗ್ರಾಮ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಚಕುರಹಳ್ಳಿಯಲ್ಲೀಗ ಆರು ವರ್ಷಗಳ ತರುವಾಯ ಮತ್ತೆ ಸಾಂಪ್ರದಾಯಿಕ ಇಂಧನ, ಕಟ್ಟಿಗೆ ಒಲೆ ಉರಿಸಲು ಜನ ಸಿದ್ದವಾಗಿದ್ದಾರೆ. ಎಲ್‌ಪಿಜಿ ಬೆಲೆ ಗಗನಕ್ಕೇರಿರುವುದರಿಂದ ಗ್ಯಾಸ್ ಸ್ಟೌವ್‌ಗಳ ಬದಲಿಗೆ ಉರುವಲು ಅಥವಾ ಕಲ್ಲಿದ್ದಲು ಬಳಸಿ ಅಡುಗೆ  ತಯಾರಿಗೆ ಇಲ್ಲಿನ ನೂರಾರು ಮನೆಗಳು ಯೋಜಿಸುತ್ತಿದೆ. 

ಅತಿ ಹೆಚ್ಚು ಜನಪ್ರಿಯವಾದ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ, ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ಸಿಗುತ್ತದೆ ಮತ್ತು ಹಳ್ಳಿಗಳನ್ನು ಹೊಗೆ ಮುಕ್ತವಾಗಿಸಲು ಅನಾರೋಗ್ಯಕರ ಅಡುಗೆ ಇಂಧನಗಳಿಂದ ದೂರವಿರಿಸಲು ಸಬ್ಸಿಡಿ ನೀಡಲಾಗುತ್ತದೆ. 

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್‌ನ ಪ್ರಕಟಣೆ ಹೇಳುವಂತೆ ಡಿಸೆಂಬರ್ 2020 ಮತ್ತು ಫೆಬ್ರವರಿ 2021 ರ ನಡುವೆ ಒಟ್ಟಾರೆ ಎಲ್‌ಪಿಜಿ ಬಳಕೆಯಲ್ಲಿ ಶೇಕಡಾ 7.3 ರಷ್ಟು ಹೆಚ್ಚಳವಾಗಿದೆ ಎಂದಿದ್ದರೂ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ರಿಯಾಲಿಟಿ ಚೆಕ್ ಬೇರೆಯದೇ ಕಥೆ ಹೇಳಿದೆ. 

ಮೈಸೂರು, ಕಲಬುರಗಿ, ಚಿಕ್ಕಬಳ್ಳಾಪುರ, ,ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತಿತರೆ ಜಿಲ್ಲೆಗಳಲ್ಲಿ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ, ಅನೇಕ ಮನೆಗಳು ಎಲ್‌ಪಿಜಿಯನ್ನು ತುರ್ತು ಬಳಕೆಗಾಗಿ ಮಾತ್ರ ಬಳಸುತ್ತಿವೆ ಮತ್ತು ಕಳೆದ ಹಲವು ತಿಂಗಳುಗಳಿಂದ ರೀಫಿಲ್ ಮಾಡಿಸಿಕೊಂಡಿಲ್ಲ.

ಯಾವ ಉಜ್ವಲವೂ ಇಲ್ಲ, ಎಲ್ಲೆಡೆ ಕತ್ತಲೆ ಕವಿದಿದೆ: ಕೊಪ್ಪಳ ಗ್ರಾಮಸ್ಥರ ಆಕ್ರೋಶ

"ನನ್ನ ಮನೆಯಲ್ಲಿ ಸಿಲಿಂಡರ್ ಇದೆ. ಇದು ಒಂದೆರಡು ವಾರಗಳಲ್ಲಿ ಮುಗಿಯುತ್ತದೆ ಮತ್ತು ನಮ್ಮ ಹಳ್ಳಿಯಲ್ಲಿ ಸಿಲಿಂಡರ್‌ಗೆ 980 ರೂ ಕೊಡಬೇಕಿದೆ. ಹಾಗಾಗಿ ನಾನು ಅದನ್ನು ಪುನಃ ತುಂಬಿಸುವುದಿಲ್ಲ. ನಮ್ಮದು ಒಂದು ದೊಡ್ಡ ಕುಟುಂಬ ಮತ್ತು ನಾವು ಪ್ರತಿ ತಿಂಗಳು ಅಂತಹ ದುಬಾರಿ ವೆಚ್ಚವನ್ನು ಭರಿಸಲಾಗುವುದಿಲ್ಲ. ನಾವು ಅಡುಗೆಗಾಗಿ ಕಟ್ಟಿಗೆ ಒಲೆ ಬಳಸಲು ಮತ್ತೆ ಪ್ರಾರಂಭಿಸಿದ್ದೇವೆ."ಎಂದು ಬಾಗಲಕೋಟೆ ಜಿಲ್ಲೆ ಐಹೊಳೆ ಗ್ರಾಮದ ಕೂಲಿ ಕಾರ್ಮಿಕರ ಸಂಘದ ಕಾರ್ಯಕರ್ತ ಮಹಂತೇಶ್ ರಾಮಪ್ಪ ಹೊಸಮನಿ ಹೇಳಿದ್ದಾರೆ.

"ಇದು ನಮ್ಮ ಮನೆ ಕಥೆ ಮಾತ್ರವಲ್ಲ, ನಮ್ಮ ಹಳ್ಳಿಯ ಪ್ರತಿಯೊಂದು ಮನೆಯವರು ಮತ್ತು ಹುನಗುಂದ ತಾಲ್ಲೂಕಿನಲ್ಲಿರುವವರು ಬೆಲೆ ಏರಿಕೆಯ ನಂತರ ಎಲ್‌ಪಿಜಿ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ" ಎಂದು ಅವರು ಹೇಳಿದರು. ಕಳೆದ ಮೂರು ತಿಂಗಳಲ್ಲಿ ಸಿಲಿಂಡರ್‌ನ ಬೆಲೆ 175 ರೂ.ಗಳಷ್ಟು ಏರಿಕೆಯಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ 800 ರಿಂದ 980 ರೂ. ಬೆಲೆ ನಿಗದಿಯಾಗಿದೆ. 

"ಯಾವ ಉಜ್ವಲವೂ ಇಲ್ಲ, ಇಲ್ಲಿ ಎಲ್ಲೆಡೆ ಕತ್ತಲಾವರಿಸಿದೆ.ಪೆಟ್ರೋಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳಂತಹ ಅಗತ್ಯ ವಸ್ತುಗಳು ತುಂಬಾ ದುಬಾರಿಯಾದರೆ, ನಾವು ಹೇಗೆ ಬದುಕುಳಿಯಬೇಕು? ಬಹಳ ಕಷ್ಟದಿಂದ, ನಾನು ನನ್ನ ಕುಟುಂಬವನ್ನು ಕಟ್ಟಿಗೆ ಒಲೆಯಿಂದ ಎಲ್‌ಪಿಜಿ ಸ್ಟೌವ್‌ಗೆ ಬದಲಾಯಿಸುವಂತೆ ಮನವರಿಕೆ ಮಾಡಿದ್ದೆ. ಆದರೆ  ಈಗ, ನಮ್ಮಲ್ಲಿ ಸಿಲಿಂಡರ್‌ಗಳನ್ನು ಪುನಃ ಭರ್ತಿ ಮಾಡಲು ಹಣವಿಲ್ಲ.ನಾವು ಉರುವಲು ತರಲು ಸಾಧ್ಯವಿಲ್ಲ ಮತ್ತು ಸರ್ಕಾರ ನಮಗೆ ಸೀಮೆಎಣ್ಣೆ ನೀಡುವುದಿಲ್ಲ. ನಾವು ಏನು ಮಾಡಬೇಕು "ಎಂದು ಕೊಪ್ಪಳದ ಲಕ್ಷ್ಮಮ್ಮ ಜಿ ಕೇಳಿದರು.

ಕಟ್ಟಿಗೆ ಒಲೆಗಳ ಬಳಕೆಯಿಂದಾಗಿ ಆರೋಗ್ಯದ ತೀವ್ರ ಪರಿಣಾಮಗಳ ಬಗ್ಗೆ ವೈದ್ಯರು ಎಚ್ಚರಿಸಿದ್ದಾರೆ  ಡಾ. ಸಿಲ್ವಿಯಾ ಕರ್ಪಗಮ್ ಹೇಳಿದಂತೆ "ಕೋವಿಡ್ ಮತ್ತು ಇತರ ಉಸಿರಾಟ ಸಮಸ್ಯೆಯ ಸ್ಥಿತಿಯಲ್ಲಿ ಕಳಪೆ ಫಲಿತಾಂಶಗಳಿಗೆ ಕಾರಣವಾಗುವ ಪ್ರಮುಖ ಕೊಮೊರ್ಬಿಡಿಟಿಗಳಿಗೆ ಕಾರಣವಾಗುವುದು ಮೀಣ ಪ್ರದೇಶದ ಮಹಿಳೆಯರು ಉರುವಲಿನಂತಹ ಹೊಗೆ-ಪ್ರಚೋದಿಸುವ ಇಂಧನಗಳನ್ನು ಬಳಸುವುದರಿಂದ ಉಸಿರಾಟದ ಸಮಸ್ಯೆ ಹೆಚ್ಚುತ್ತದೆ." ಮನೆಯೊಳಗಿನ ವಾಯು ಮಾಲಿನ್ಯಕ್ಕೆ ಕಟ್ಟಿಗೆ ಅಥವಾ ಕಲ್ಲಿದ್ದಲು ಸ್ಟೌವ್‌ಗಳನ್ನು ಬಳಸುವುದು ಪ್ರಮುಖ ಕಾರಣವಾಗಿದೆ, ಇದು ಹೆಚ್ಚಿನ ಗ್ರಾಮೀಣ ಮನೆಗಳಲ್ಲಿನ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ಡಾ.ಗಿರಿಧರ ಬಾಬು ಆರ್ ಹೇಳಿದರು. "ಎಲ್ಪಿಜಿಯಲ್ಲಿನ ಬೆಲೆ ಏರಿಕೆಯು ಗ್ರಾಮೀಣ ಪ್ರದೇಶದ ಅನೇಕ ಬಡ ಜನರು ಮತ್ತು ನಗರ ಕೊಳೆಗೇರಿಗಳ ಜನ ಸಾಂಪ್ರದಾಯಿಕ ಇಂಧನ ಮೂಲಗಳಿಗೆ ಮರಳುವಂತೆ ಮಾಡಿದೆ.ಅವರು ಚಿಮಣಿ ಅಥವಾ ಸರಿಯಾದ ವಾತಾಯನವಿಲ್ಲದೆ ಒಲೆಗಳನ್ನು ಬಳಸುತ್ತಾರೆ. ಕೆಲವು ಸ್ಥಳಗಳಲ್ಲಿ ಜನರು ಖಾಲಿ ಸಿಮೆಂಟ್ ಚೀಲಗಳು, ಕಾಗದ ಮತ್ತು ಇತರ ವಸ್ತುಗಳನ್ನು ಸಹ ಬಳಸುತ್ತಾರೆ ಅವರ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ.ದುರ್ಬಲ ವರ್ಗಗಳನ್ನು ಸರ್ಕಾರ ನೋಡಿಕೊಳ್ಳಬೇಕು "ಎಂದು ಅವರು ಹೇಳಿದರು.

ಅಲ್ಲದೆ, ಅನೇಕ ಗ್ರಾಮಸ್ಥರು ಎಲ್ಪಿಜಿ ಸಹಾಯಧನವನ್ನು ಹಲವು ತಿಂಗಳುಗಳಿಂದ ಸ್ವೀಕರಿಸಿಲ್ಲ, "ನಾವು ಯಾವುದೇ ಯೋಜನೆಯಡಿ ಸಬ್ಸಿಡಿಗಳನ್ನು ಸ್ವೀಕರಿಸಿಲ್ಲ. ನಾವು ಈ ಮೊದಲು ಸಿಲಿಂಡರ್‌ಗೆ 830 ರೂ. ಪಾವತಿಸಿಸಬ್ಸಿಡಿಯಾಗಿ ಸುಮಾರು 180 ರೂಗಳನ್ನು ಪಡೆದುಕೊಂಡಿದ್ದೆವು. ಆದರೆ ಕಳೆದ 10 ತಿಂಗಳುಗಳಿಂದ ನಮಗೆ ಸಬ್ಸಿಡಿ ದೊರೆತಿಲ್ಲ" ಎಂದು ಎಚ್‌ಡಿ ಕೋಟೆಯ ಸಾಮಾಜಿಕ ಕಾರ್ಯಕರ್ತ ಮಹಂತೇಶ್ ಹೇಳಿದ್ದಾರೆ 

ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯವು ಕೊಪ್ಪಳದಲ್ಲಿ ಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ಸರಾಸರಿ ಗ್ರಾಮೀಣ ಕುಟುಂಬಕ್ಕೆ ಒಂದು ವರ್ಷದ ಅಡುಗೆ ಅಗತ್ಯಗಳನ್ನು ಪೂರೈಸಲು 14.2 ಕೆಜಿ ತೂಕದ ಅ ಕನಿಷ್ಠ 10 ಸಿಲಿಂಡರ್‌ಗಳುಅಗತ್ಯವಿದೆ. ಆದರೆ ಉಜ್ವಲ ಯೋಜನೆಯಡಿ ಮಹಿಳೆಯರು ನಾಲ್ಕು ರೀಫಿಲ್ ಗಿಂತ ಕಡಿಮೆ ಸ್ಸಿಲಿಂಡರ್ ಪಡೆಯುತ್ತಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ  "ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನನಗೆ ತಿಳಿದಿದೆ. ನಾನು ದೆಹಲಿಯಲ್ಲಿದ್ದೇನೆ ಮತ್ತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರೊಂದಿಗೆ ಮಾತನಾಡುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ" ಎಂದು ಹೇಳಿದರು.


Stay up to date on all the latest ರಾಜ್ಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp