ಲಸಿಕೆ ಹಾಕಲು ಪ್ರತಿದಿನ 10 ಹಿರಿಯ ನಾಗರಿಕರನ್ನು ಹಿಡಿದು ತನ್ನಿ: 'ಆಶಾ' ಕಾರ್ಯಕರ್ತೆಯರಿಗೆ ಟಾರ್ಗೆಟ್

ಖಾಸಗಿ ವಲಯದಲ್ಲಿ ಟಾರ್ಗೆಟ್ ಅಥವಾ ಡೆಡ್ ಲೈನ್ ಸಾಮಾನ್ಯವಾಗಿ ಕಂಡು ಬರುತ್ತದೆ, ಆದರೆ ಸದ್ಯ ಸರ್ಕಾರದ ಇಲಾಖೆಗಳಲ್ಲು ಇದೇ ನಿಯಮ ಅನುಸರಿಸಲಾಗುತ್ತಿದೆ.

Published: 15th March 2021 12:17 PM  |   Last Updated: 15th March 2021 01:06 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : Online Desk

ಮೈಸೂರು: ಖಾಸಗಿ ವಲಯದಲ್ಲಿ ಟಾರ್ಗೆಟ್ ಅಥವಾ ಡೆಡ್ ಲೈನ್ ಸಾಮಾನ್ಯವಾಗಿ ಕಂಡು ಬರುತ್ತದೆ, ಆದರೆ ಸದ್ಯ ಸರ್ಕಾರದ ಇಲಾಖೆಗಳಲ್ಲು ಇದೇ ನಿಯಮ ಅನುಸರಿಸಲಾಗುತ್ತಿದೆ.

ಕೋವಿಡ್ ಲಸಿಕೆ ಹಾಕಲು ಪ್ರತಿದಿನ 10 ಹಿರಿಯ ನಾಗರಿಕರು ಅಥವಾ 45 ವರ್ಷ ಮೇಲ್ಪಟ್ಟವರನ್ನು ಕರೆದು ತರುವಂತೆ ಆಶಾ ಕಾರ್ಯಕರ್ತೆಯರಿಗೆ, ಬಿಲ್ ಕಲೆಕ್ಟರ್ ಗಳಿಗೆ ಮತ್ತು ಗ್ರಾಮ ಸೇವಕರಿಗೆ ಟಾರ್ಗೆಟ್ ನೀಡಲಾಗಿದೆ.

ಟಾರ್ಗೆಟ್ ನೀಡಿರುವವರ ಕಾರ್ಯಕ್ಷಮತೆಯನ್ನು ಮೇಲಧಿಕಾರಿಗಳು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಎಂದು ಸಿಬ್ಬಂದಿಗೆ ತಿಳಿಸಲಾಗಿದೆ.  ಮೂರನೇ ಹಂತದ ಲಸಿಕಾ ಅಭಿಯಾನ ಇನ್ನೂ ಸರಿಯಾದ ವೇಗ ಪಡೆದುಕೊಳ್ಳದ ಕಾರಣ ಈ ನಿರ್ಧಾರ ಮಾಡಲಾಗಿದೆ.

ವಿಶೇಷ ಸೌಲಭ್ಯ ಕಲ್ಪಿಸಿದ್ದರೂ ಹಳ್ಳಿಗಾಡು ಮತ್ತು ಒಳನಾಡಿನಲ್ಲಿ ಹಿರಿಯ ನಾಗರಿಕರು  ಲಸಿಕೆ ಪಡೆಯಲು ಮುಂದೆ ಬಾರದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮೈಸೂರಿನಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ 1,879 ವ್ಯಕ್ತಿಗಳಿಗೆ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ 14,515 ಜನರಿಗೆ ಲಸಿಕೆ ನೀಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನಗರ ಪ್ರದೇಶದವರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ  4.5 ರಿಂದ 5 ಲಕ್ಷಕ್ಕೂ ಹೆಚ್ಚು ಜನರು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ ಎಂದು ಅಂದಾಜುಗಳು ತಿಳಿಸಿವೆ,  ಆದರೆ ಯಾರೂ ಶೀಘ್ರವಾಗಿ ಬಂದು ಲಸಿಕೆ ಪಡೆಯುತ್ತಿಲ್ಲ, ಇದರಿಂದಾಗಿ ಆಶಾ ಕಾರ್ಯಕರ್ತೆಯರು ಆತಂಕಕ್ಕೊಳಗಾಗಿದ್ದಾರೆ.

ಈಗಾಗಲೇ ಸಮೀಕ್ಷೆ ಸೇರಿದಂತೆ ಹಲವು ಕೆಲಸಗಳಿಂದಾಗಿ ಕಾರ್ಯಕರ್ತೆಯರ ಮೇಲೆ ಕೆಲಸದ ಹೊರೆ ಬಿದ್ದಿದೆ, ಇದರ ಜೊತೆಗೆ ಆ್ಯಪ್ ಗೆ ಹಲವು ವಿಷಯಗಳನ್ನು ಅಪ್ ಲೋಡ್ ಮಾಡಬೇಕು, ಇಷ್ಟೊಂದು ಕೆಲಸದ ಜೊತೆಗೆ ಈ ಕೆಲಸವನ್ನು ನಾವು ಹೇಗೆ ಮಾಡಬಹುದು, ಅದರಲ್ಲೂ ವಿಶೇಷವಾಗಿ ಜನರ ಮನವೊಲಿಸುವುದು, ಅದರಲ್ಲೂ ಹಳ್ಳಿ ಜನ ಮನವೊಲಿಕೆ ಅಸಾಧ್ಯ ಎಂದು ಹೆಸರು ಹೇಳಲು ಇಚ್ಚಿಸದ  ಆಶಾ ಕಾರ್ಯಕರ್ತೆಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಮ್ಮ ಗೌರವಧನವನ್ನು ಎರಡು ತಿಂಗಳುಗಳಿಂದ ವಿಳಂಬಗೊಳಿಸಲಾಗುತ್ತಿದೆ. ಇದರಿಂದ ಅವರ ಸಂಕಷ್ಟಗಳನ್ನು ಹೆಚ್ಚಿಸಿದೆ. ಆದರೆ ಇದು ಆಶಾ ಕಾರ್ಯಕರತೆಯರ ಕೆಲಸವಲ್ಲ ಎಂದು ಕೆಲವರು ಹೇಳಿದ್ದಾರೆ.


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp