ಗ್ರಾಮ ಪಂಚಾಯತಿಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭಿಸಲು ಶಾಸಕರ ಒಕ್ಕೊರಲ ಒತ್ತಾಯ
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರವು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಬೇಕು, ಇದರಿಂದಾಗಿ ಪೋಷಕರ ಮೇಲೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂದು ಶಾಸಕರು ಮಂಗಳವಾರ ವಿಧಾನಸಭೆಯಲ್ಲಿ ಒತ್ತಾಯಿಸಿದರು.
Published: 17th March 2021 08:40 AM | Last Updated: 17th March 2021 12:37 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರವು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಬೇಕು, ಇದರಿಂದಾಗಿ ಪೋಷಕರ ಮೇಲೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂದು ಶಾಸಕರು ಮಂಗಳವಾರ ವಿಧಾನಸಭೆಯಲ್ಲಿ ಒತ್ತಾಯಿಸಿದರು. ಅರಸೀಕೆರೆಯ ಜೆಡಿಎಸ್ ಶಾಸಕ ಶಿವಲಿಂಗೇಗೌಡ, "ಶಿಕ್ಷಣ ವ್ಯವಹಾರವಾಗಿ ಬದಲಾಗಿದೆ.ಪೋಷಕರು ತಮ್ಮ ಮಕ್ಕಳ ಶುಲ್ಕವನ್ನು ಪಾವತಿಸಲು ಬ್ಲಾಂಕ್ ಚೆಕ್ ನೀಡುತ್ತಿದ್ದಾರೆ" ಎಂದರು.
“ಕೆಲವು ಪ್ರದೇಶಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ವ್ಯಾನ್ಗಳಲ್ಲಿ 20 ಕಿ.ಮೀ ದೂರದಲ್ಲಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಾರೆ. ಮಕ್ಕಳನ್ನು ವಾಹನದಲ್ಲಿ ಕುರಿಗಳಂತೆ ತುಂಬಿಸಿಕೊಂಡು ಹೋಗಲಾಗುತ್ತದೆ" ಅವರು ಹೇಳಿದ್ದಾರೆ.
ಅದೇ ಸಮಯದಲ್ಲಿ, ಕೆಲವು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ಕಳಪೆ ದಾಖಲಾತಿಯನ್ನು ಕಾಣುತ್ತಿದೆ. ಅವು ಮುಚ್ಚುವ ಹಂತದಲ್ಲಿದೆ. “ಶಾಲೆಗಳನ್ನು ಮುಚ್ಚುವ ಬದಲು, ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಬಹುದು ಮತ್ತು ಇಂಗ್ಲಿಷ್ ಕಲಿಸುವ ಸರ್ಕಾರಿ ಶಾಲೆಗಳನ್ನು ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಪ್ರಾರಂಭಿಸಬಹುದು. ಇದು ಶಾಲೆಗಳಿಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸಲು ಕಾರಣವಾಗುತ್ತದೆ" ಶಾಸಕರು ಹೇಳಿದ್ದಾರೆ.
ಶಾಸಕ ಶಿವಲಿಂಗೇಗೌಡದ ಈ ಪ್ರಸ್ತಾವನೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ನ ಹಲವು ಶಾಸಕರು ಬೆಂಬಲಿಸಿದ್ದಲ್ಲದೆ ಗ್ರಾಮ ಪಂಚಾಯತ್ ಮಿತಿಯಲ್ಲಿ ಸರ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯಬೇಕೆಂದು ಒತ್ತಾಯಿಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಣ ಸಚಿವರಾಗಿದ್ದಾಗ ಕಳಪೆ ದಾಖಲಾತಿ ಇರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಪ್ರಸ್ತಾಪವಿತ್ತು, ಆದರೆ ಪಟ್ಟಭದ್ರ ಹಿತಾಸಕ್ತಿಳು ಈ ಈ ಕ್ರಮವನ್ನು "ಕನ್ನಡ ವಿರೋಧಿ" ಮತ್ತು "ಸರ್ಕಾರಿ ಶಾಲಾ ವಿರೋಧಿ" ಎಂದು ಕೈಬಿಡುವಂತೆ ಮಾಡಿದೆ.