ಹೆಚ್ಚಿದ ಪರೀಕ್ಷಾ ಒತ್ತಡ: ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣದಲ್ಲಿ ಏರಿಕೆ!

ತಮ್ಮ ಸ್ನೇಹಿತರು ಹೆಚ್ಚು ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. 

Published: 18th March 2021 11:24 AM  |   Last Updated: 18th March 2021 11:24 AM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : The New Indian Express

ಬೆಂಗಳೂರು: ತಮ್ಮ ಸ್ನೇಹಿತರು ಹೆಚ್ಚು ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ವರ್ಷದ ಅಂತ್ಯದಲ್ಲಿ ಬರುವ ಪರೀಕ್ಷೆಗಖ ಕಾರಣ ವಿಶೇಷವಾಗಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಒತ್ತಡವನ್ನು ಅನುಭವಿಸಲು ಪ್ರಾರಂಭಿಸಿದ್ದಾರೆ. ಪ್ರಶಾಂತ್ (ಹೆಸರು ಬದಲಾಯಿಸಲಾಗಿದೆ), ಕಾಲೇಜಿನಲ್ಲಿ ಎಂಜಿನಿಯರಿಂಗ್ ಕೋರ್ಸ್‌ನ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆಗೆ ಶರಣಾದರು ಎಂದು ಅವರು ಪತ್ರಿಕೆಗೆ ತಿಳಿಸಿದರು. ಜನವರಿಯಿಂದ ಆಫ್‌ಲೈನ್ ತರಗತಿಗಳು ನಡೆಯುತ್ತಿಲ್ಲ ಕೇವಲ ಲ್ಯಾಬ್ ತರಗತಿಗಳನ್ನು ಮಾತ್ರ ನಡೆಸಲಾಗುತ್ತಿದೆ.

ಕಲಿಕೆಯ ಅಂತರದಿಂದಾಗಿ, ಅವರು ಒತ್ತಡವಿಲ್ಲದೆ ಪರೀಕ್ಷೆಯನ್ನು ಬರೆಯಲು ಸಾಧ್ಯವಿಲ್ಲ ಎನ್ನುವ ಪ್ರಶಾಂತ್ ಅಂತಿಮ ವರ್ಷದ ಪರೀಕ್ಷೆಗಳು 10 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಪ್ರಾರಂಭವಾಗಲಿವೆ ಎಂದರು. ಅವರು ತಮ್ಮ ಸಿದ್ಧತೆಗಾಗಿ ಯೂಟ್ಯೂಬ್ ಅನ್ನು ಅವಲಂಬಿಸಿದ್ದಾರೆ, ಆದರೆ ತರಗತಿಯ ನೋಟ್ಸ್ ಗಳು ಮತ್ತು ಉಪನ್ಯಾಸಗಳ ಆಧಾರದ ಮೇಲೆ ರ್ಯಾಂಕಿಂಗ್ ಗೆ ಅದು ಸಾಕಾಗುವುದಿಲ್ಲ.

ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿದ್ಯಾರ್ಥಿಯು ಪತ್ರಿಕೆಯೊಡನೆ ಮಾತನಾಡಿದ್ದು ಆನ್‌ಲೈನ್ ತರಗತಿಗಳನ್ನು ಉಪನ್ಯಾಸಕರು ತಮ್ಮ ಕೋವಿಡ್ ಕರ್ತವ್ಯದ ನಡುವೆ ಉತ್ತಮವಾಗಿ ನಡೆಸುತ್ತಿದ್ದರೂ, ಇಂಟರ್ನೆಟ್ ಸಂಪರ್ಕದ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ಅದನ್ನು ತಲುಪಲು ಸಾಧ್ಯವಾಗುತ್ತಿಲ್ಲ.ಆಫ್‌ಲೈನ್ ತರಗತಿಗಳನ್ನು ಕೋರಿಕೆಯ ಮೇರೆಗೆ ಮಾತ್ರ ನಡೆಸಲಾಗುತ್ತಿದೆ. ಅದು ಅಧಿಕೃತವಾಗಿ ಇರುವುದಿಲ್ಲ.’ ಪರೀಕ್ಷೆಗಳ ನಡುವೆ ಸಾಕಷ್ಟು ಅಂತರವಿಲ್ಲ. ಪಠ್ಯಕ್ರಮವನ್ನು ಕಡಿತ ಮಾಡಿಲ್ಲ, ಇದು ಒತ್ತಡವನ್ನು ಹೆಚ್ಚಿಸುತ್ತದೆ, ”ಎಂದು ಅವರು ಹೇಳಿದರು.

ಭವಿಷ್ಯದ ಬಗ್ಗೆ ಅನಿಶ್ಚಿತತೆ ಮತ್ತು ನಿರುದ್ಯೋಗದ ಭಯ ಈಗಾಗಲೇ ಇದೆ. ಆದರೆ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯಾ ಪ್ರವೃತ್ತಿ ಹೆಚ್ಚುತ್ತಿರುವ ವಿದ್ಯಮಾನ ಆತಂಕಕಾರಿಯಾಗಿದೆ ಎಂದು ಅಖಿಲ ಭಾರತ ಡೆಮಾಕ್ರಾಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್‌ಒ) ಗೆ ಸಂಬಂಧಿಸಿದ ವಿದ್ಯಾರ್ಥಿಗಳು ಗಮನಸೆಳೆದಿದ್ದಾರೆ. ಸಂಘಟನೆಯ ಪದಾಧಿಕಾರಿ ವಿನಯ್ ಚಂದ್ರ, “ರಾಜ್ಯಾದ್ಯಂತ ಅನೇಕ ವಿದ್ಯಾರ್ಥಿಗಳೊಂದಿಗೆ ಮತ್ತು ಆತ್ಮಹತ್ಯೆ ಮಾಡಿಕೊಂಡ ಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಸ್ನೇಹಿತರೊಂದಿಗೆ ಮಾತನಾಡುವಾಗ, ಜಿಲ್ಲೆಗಳ ಅನೇಕ ಹಾಸ್ಟೆಲ್‌ಗಳಲ್ಲಿ, ಪರೀಕ್ಷೆಗಳ ಒತ್ತಡವು ಸ್ಪಷ್ಟವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ” ಎಂದು ಹೇಳಿದರು. ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆಗಳು, ಅವರು ಎದುರಿಸಿದ ಆರ್ಥಿಕ ಬಿಕ್ಕಟ್ಟು ಮತ್ತು ಮಾನಸಿಕ ಒತ್ತಡಗಳನ್ನು ಗಮನದಲ್ಲಿಟ್ಟುಕೊಂಡು ಶೈಕ್ಷಣಿಕ ವೇಳಾಪಟ್ಟಿಯನ್ನು ಪರಿಷ್ಕರಿಸುವ ಬೇಡಿಕೆ ಇದೆ ಎಂದು ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದ್ದಾರೆ. ಆದರೆ ಸರ್ಕಾರ ಈ ಬೇಡಿಕೆಗಳಿಗೆ ಕಿವಿಗೊಟ್ಟಿಲ್ಲ.

“ರಾಜ್ಯಾದ್ಯಂತ ಸಾವಿರಾರು ವಿದ್ಯಾರ್ಥಿಗಳು ತೀವ್ರ ಒತ್ತಡದಿಂದ ಬಳಲುತ್ತಿದ್ದಾರೆ. ಹಲವಾರು ವಿದ್ಯಾರ್ಥಿಗಳು ಖಿನ್ನತೆಯಿಂದ ಬಳಲುತ್ತಿದ್ದಾರೆ ಅಥವಾ ಆ ಹಂತವನ್ನು ತಲುಪುತ್ತಿದ್ದಾರೆ ಎಂದು ಅನೇಕ ತಜ್ಞರು ಮತ್ತು ಶಿಕ್ಷಕರು ಭಾವಿಸುತ್ತಾರೆ. ಆದರೆ ಅವರ ಈ ಸಮಸ್ಯೆಯನ್ನು ನಿವಾರಿಸಲು ಯಾವುದೂ ದೃಢವಾದ ಕ್ರಮಗಳಿಲ್ಲ ”ಎಂದು AIDSOರಾಜ್ಯ ಅಧ್ಯಕ್ಷೆ ಅಶ್ವಿನಿ ಕೆ ಎಸ್ ಹೇಳಿದರು. ಕಳೆದ ಒಂದು ತಿಂಗಳಲ್ಲಿ ರಾಜ್ಯಕ್ಕೆ ಕನಿಷ್ಠ ಮೂರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದು ಪರೀಕ್ಷೆಗಳಿಗೆ ಸಂಬಂಧಿಸಿದ ಎರಡು ಪ್ರಕರಣಗಳು ದಾಖಲಾಗಿವೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp