ಕೊಡಗು: ನಿವಾಸಿಗಳ ಅಂತಕಕ್ಕೆ ಕಾರಣವಾಗಿದ್ದ ನರಭಕ್ಷಕ ವ್ಯಾಘ್ರ ಸಾವು; ಪೊನ್ನಂಪೇಟೆ ಬಳಿ ಗಂಡು ಹುಲಿ ಶವ ಪತ್ತೆ

ಕೊಡಗಿನ ಪೊನ್ನಂಪೇಟೆ ನಿವಾಸಿಗಳ ಆತಂಕಕ್ಕೆ ಕಾರಣವಾಗಿದ್ದ ನರಭಕ್ಷಕ ಹುಲಿಯ ಆತಂಕ ನಿವಾರಣೆಯಾಗಿದ್ದು, ನರಭಕ್ಷಕ ಹುಲಿಯ ಮೃತದೇಹ ಪೊನ್ನಂಪೇಟೆ ಬಳಿ ಪತ್ತೆಯಾಗಿದೆ.

Published: 19th March 2021 03:53 PM  |   Last Updated: 19th March 2021 04:05 PM   |  A+A-


tiger carcass found

ಪತ್ತೆಯಾದ ಹುಲಿ ಕಳೇಬರ

The New Indian Express

ಕೊಡಗು: ಕೊಡಗಿನ ಪೊನ್ನಂಪೇಟೆ ನಿವಾಸಿಗಳ ಆತಂಕಕ್ಕೆ ಕಾರಣವಾಗಿದ್ದ ನರಭಕ್ಷಕ ಹುಲಿಯ ಆತಂಕ ನಿವಾರಣೆಯಾಗಿದ್ದು, ನರಭಕ್ಷಕ ಹುಲಿಯ ಮೃತದೇಹ ಪೊನ್ನಂಪೇಟೆ ಬಳಿ ಪತ್ತೆಯಾಗಿದೆ.

ಮಡಿಕೇರಿಯ ಪೊನ್ನಂಪೇಟೆ ತಾಲ್ಲೂಕಿನ ನಾಲ್ಕೇರಿಯ ಕೋತೂರು ಗ್ರಾಮದ ಲಕ್ಕುಂದ ಎಂಬಲ್ಲಿ ಹುಲಿಯ ಕಳೇಬರ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದ್ದು, ಈ ಹಿಂದೆ ಜನ ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡಿದ್ದ ಹುಲಿ ಇದೇ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.  

ಹುಲಿ ಪತ್ತೆಯಾದ ಮಾಹಿತಿ ದೊರೆತ ಬೆನ್ನಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು ಮತ್ತು ವನ್ಯಜೀವ ತಜ್ಞರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಹುಲಿ ಕಳೇಬರ ಪತ್ತೆಯಾಗಿತ್ತು. ಕ್ಯಾಮೆರಾ ಟ್ರ್ಯಾಪ್ ಚಿತ್ರಗಳನ್ನು ಪರಿಶೀಲಿಸಿದ ಅಧಿಕಾರಿಗಳು ಈ ಹಿಂದೆ ಮೂವರ ಸಾವಿಗೆ ಕಾರಣವಾಗಿದ್ದ ಹುಲಿ ಇದೇ ಎಂದು ಸ್ಪಷ್ಟಪಡಿಸಿದ್ದಾರೆ. 

ಈ ಕುರಿತಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ್ದು, ಸಿಬ್ಬಂದಿಗಳು ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. ಹುಲಿ ಹೇಗೆ ಸಾಯಿತು ಎಂಬುದರ ಕುರಿತು ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. 

ಮೂರು ಜನರನ್ನು ಕೊಂದಿದ್ದ ಹುಲಿ
ಇನ್ನು ಈ ಹುಲಿ ಈ ಹಿಂದೆ ಪೊನ್ನಂಪೇಟೆಯ ಸುತ್ತಮುತ್ತ ಮೂರು ಜನರನ್ನು ಕೊಂದಿತ್ತು. ಅಂತೆಯೇ ಓರ್ವ ಇದೇ ಹುಲಿಯಿಂದ ಗಾಯಗೊಂಡಿದ್ದರು. ಅಲ್ಲದೆ ಹಲವು ಜಾನುವಾರುಗಳನ್ನು ಹುಲಿ ಕೊಂದು ಹಾಕಿತ್ತು. ಇದರಿಂದ ತೀವ್ರ ಭಯಭೀತಗೊಂಡಿದ್ದ ಸ್ಥಳೀಯರು ಕಳೆದ 20 ದಿನಗಳಿಂದ ಪ್ರಾಣವನ್ನು ಕೈಯಲ್ಲಿ ಹಿಡಿದು ಓಡಾಡುತ್ತಿದ್ದರು.  ಹುಲಿಯನ್ನು ಸೆರೆ ಹಿಡಿಯಲು ಅಥವಾ ಗುಂಡು ಹಾರಿಸಿ ಅದನ್ನು ಕೊಲ್ಲಲು ಸರ್ಕಾರ ಸಿದ್ಧವಿತ್ತು. ಇದಕ್ಕಾಗಿ ಅರಣ್ಯ ಪ್ರದೇಶ ಮತ್ತು ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಹುಲಿಯನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ಸುಮಾರು 150 ಜನರ ತಂಡವನ್ನು ರಚಿಸಿತ್ತು. ಈ ತಂಡದಲ್ಲಿ, ಶಾರ್ಪ್ ಶೂಟರ್ ಗಳು, ಪಶುವೈದ್ಯರು ಮತ್ತು ಟ್ರ್ಯಾಕರ್‌ ಸಿಬ್ಬಂದಿಗಳನ್ನು ನಿಯೋಜಿಸಿತ್ತು. ಹುಲಿಯನ್ನು ಪತ್ತೆಹಚ್ಚಲು ಮತ್ತು ಹಿಡಿಯಲು ಐದು ಸೊಲಿಗಾ ಬುಡಕಟ್ಟು ಜನಾಂಗದವರ ತಂಡವನ್ನು ಸಹ ಕರೆತರಲಾಗಿತ್ತು.

ಸ್ಥಳೀಯರಿಂದ ಪ್ರತಿಭಟನೆ
ಮೂವರನ್ನು ಕೊಂದು ಮುಗಿಸಿದ್ದ ಹುಲಿ ಹಲವು ಜಾನುವಾರಗಳನ್ನು ಬಲಿ ಪಡೆದಿತ್ತು. ಹೀಗಾಗಿ ಸ್ಥಳೀಯರು ಹುಲಿಯನ್ನು ಸೆರೆ ಹಿಡಿಯಲು ಅಥವಾ ಕೊಂದುಹಾಕಲು ಇಲಾಖೆ ಮೇಲೆ ಒತ್ತಡ ಹೇರಿದ್ದರು. ಅಲ್ಲದೆ ಪ್ರತಿಭಟನೆಗಳನ್ನೂ ಕೂಡ ಮಾಡಿದ್ದರು. ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಸಚಿವ ಅರವಿಂದ ಲಿಂಬಾವಳಿ ಅವರು ಹುಲಿಯನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಲು ಆದೇಶ ನೀಡಿದ್ದೇವೆ. ಹೀಗಾಗಿ ಸ್ಥಳೀಯರು ಆತಂಕ ಪಡುವುದು ಬೇಡ ಎಂದು ವಿಧಾನಸಭೆಯಲ್ಲಿ ಹೇಳಿದ್ದರು. 

ಅಪಾಯಕಾರಿ ಹುಲಿಗೆ ತಗುಲಿತ್ತೇ ಗುಂಡೇಟು?
ಕಳೆದ ವಾರ ಮಧ್ಯಾಹ್ನದ ಪೊನ್ನಂಪೇಟೆಯ ಕಾಫಿ ತೋಟದಲ್ಲಿ ಹುಲಿಯೊಂದು ಕಾಣಿಸಿಕೊಂಡಿತ್ತು. ಆಗ, ಸ್ಥಳದಲ್ಲಿದ್ದ ಶಾರ್ಪ್‌ಶೂಟರ್ ಹಾಗೂ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೂರು ಬಾರಿ ಗುಂಡು ಹಾರಿಸಿದ್ದರು. ಹುಲಿಗೆ ಗುಂಡು ತಗುಲಿದ್ದು, ಕೆಲವೇ ಕ್ಷಣದಲ್ಲಿ ಕಾರ್ಯಾಚರಣೆ ಯಶಸ್ವಿಯಾಗಲಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದರು. ಆದರೆ, ಹುಲಿ ಮಾತ್ರ ಸಿಕ್ಕಿರಲಿಲ್ಲ. ಇದೀಗ ಕಳೇಬರ ಸಿಕ್ಕಿದೆ.  

‘ಸ್ಥಳದಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾದ ಹುಲಿಯ ದೃಶ್ಯಕ್ಕೂ, ಹುಲಿಯ ಕಳೇಬರಕ್ಕೂ ಹೊಂದಾಣಿಕೆ ಆಗುತ್ತಿದೆ. ಬಹುತೇಕ ಇದೇ ಹುಲಿಗೆ (ಯು285) ನಾವು ಕಾರ್ಯಾಚರಣೆ ನಡೆಸುತ್ತಿದ್ದೆವು. ವೈದ್ಯ, ಉನ್ನತಾಧಿಕಾರಿಗಳು ಖಚಿತಪಡಿಸಲಿದ್ದಾರೆ’ ಎಂದು ಕಾರ್ಯಾಚರಣೆ ತಂಡದಲ್ಲಿರುವ ಡಿಸಿಎಫ್‌ ಮಾಹಿತಿ ನೀಡಿದ್ದಾರೆ. 
 


Stay up to date on all the latest ರಾಜ್ಯ news
Poll
Priyanka Gandhi

ಪ್ರಿಯಾಂಕಾ ಗಾಂಧಿ ಚುನಾವಣೆಗೆ ಸ್ಪರ್ಧಿಸುವುದರಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಭವಿಷ್ಯ ಸುಧಾರಿಸುತ್ತದೆ ಎಂದು ನೀವು ಭಾವಿಸುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp