ರಾಮ ಮಂದಿರ ನಿಧಿ ಸಮರ್ಪಣ ಸಮಯದಲ್ಲಿ 12.5 ಕೋಟಿ ಜನರನ್ನು ಸಂಪರ್ಕಿಸಲಾಗಿದೆ: ಆರ್‌ಎಸ್‌ಎಸ್‌

ಆರ್‌ಎಸ್‌ಎಸ್‌ನ ಪಾಲಿನ ಉನ್ನತ ನಿರ್ಧಾರ ತೆಗೆದುಕೊಳ್ಳಬೇಕಾದ ಅಖಿಲ ಭಾರತೀಯ ಪ್ರತೀದಿ ಸಭೆ ಶುಕ್ರವಾರದಿಂದ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಸಮಾವೇಶ ಪ್ರಾರಂಭವಾಗಿದೆ. 

Published: 20th March 2021 08:50 AM  |   Last Updated: 20th March 2021 01:05 PM   |  A+A-


ಬೆಂಗಳೂರಿನಲ್ಲಿ ಆರ್‌ಎಸ್‌ಎಸ್ ಸಮಾವೇಶ

Posted By : Raghavendra Adiga
Source : The New Indian Express

ಬೆಂಗಳೂರು: ಆರ್‌ಎಸ್‌ಎಸ್‌ನ ಪಾಲಿನ ಉನ್ನತ ನಿರ್ಧಾರ ತೆಗೆದುಕೊಳ್ಲಬೇಕಾದ ಅಖಿಲ ಭಾರತೀಯ ಪ್ರತೀದಿ ಸಭೆ ಶುಕ್ರವಾರದಿಂದ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಸಮಾವೇಶ ಪ್ರಾರಂಭವಾಗಿದೆ. ಶನಿವಾರ ನೂತನ ಪ್ರಧಾನ ಕಾರ್ಯದರ್ಶಿಯ ಆಯ್ಕೆ ನಡೆಯಲಿದೆ. ಸುಮಾರು 1,500 ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುವ ಪದ್ದತಿ ಇದ್ದರೂ ಸಹ ಈ ಭಾರಿ ಕೊರೋನಾ ಕಾರಣದಿಂದ ಐನೂರಕ್ಕಿಂತ ಕಡಿಮೆ ಸಂಖ್ಯೆಯ ಪ್ರತಿನಿಧಿಗಳು ಇದ್ದಾರೆ.ಅತಿ ಹೆಚ್ಚಿನ ಸಂಖ್ಯೆಯ ಪ್ರತಿನಿಧಿಗಳು ಆನ್‌ಲೈನ್‌ನ ಮೂಲಕ ಸಭೆಗೆ ಹಾಜರಾಗುತ್ತಿದ್ದಾರೆ.

ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಪ್ರತಿನಿಧಿ ಸಭೆ ರದ್ದಾಗಿತ್ತು.ಈ ವರ್ಷ ಇದನ್ನು ನಾಗ್ಪುರದ ಬದಲು ಬೆಂಗಳೂರಿನಲ್ಲಿ ನಡೆಸುತ್ತಿರುವುದಕ್ಕೂ ಕೊರೋನಾ ಸೋಂಕಿನ ಹೆಚ್ಚಳವೇ ಕಾರಣವಾಗಿದೆ. . "ಸಭೆ ಪ್ರತಿ ವರ್ಷ ನಡೆಯುತ್ತದೆ, ಅಲ್ಲಿ ನಾವು ಕಳೆದೊಂದು ವರ್ಷದ ಆಗುಹೋಗುಗಳೊಂದಿಗೆ ಮುಂದಿನ ಮೂರು ವರ್ಷಗಳ ಯೋಜನೆ ಬಗ್ಗೆ ಸಮಾಲೋಚಿಸುತ್ತೇವೆ." ಆರ್‌ಎಸ್‌ಎಸ್ ಸಹ ಪ್ರಧಾನ ಮನಮೋಹನ್ ವೈದ್ಯ ಹೇಳಿದ್ದಾರೆ.

ರಾಮ ಮಂದಿರ ನಿಧಿ ಸಮರ್ಪಣ ಅಭಿಯಾನದ ಅಂಗವಾಗಿ ಸುಮಾರು 20 ಲಕ್ಷ ಆರ್‌ಎಸ್‌ಎಸ್ ಕಾರ್ಯಕರ್ತರು 5,45,737 ಪ್ರದೇಶಗಳಿಗೆ ತಲುಪಿ 12,47,21,000 ಜನರನ್ನು ಸಂಪರ್ಕಿಸಿದ್ದಾರೆ ಎಂದು ಅವರು ಹೇಳಿದರು. ಈ ಸಭೆಯು ಅಭಿಯಾನದ ಸಂದರ್ಭದಲ್ಲಿ ದೇಶದಲ್ಲಿ ವ್ಯಕ್ತವಾದ  ಏಕತೆಯ ಬಗ್ಗೆ ನಿರ್ಣಯವನ್ನು ಅಂಗೀಕರಿಸಲಿದೆ ಪ್ರತಿನಿಧಿ ಸಭೆಯಲ್ಲಿ  ನಡೆದ ಚರ್ಚೆಗಳ ಸ್ವರೂಪದಲ್ಲಿ ಯಾವುದೇ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. "ಆರ್‌ಎಸ್‌ಎಸ್‌ನ ಯಾವುದೇ ಚಟುವಟಿಕೆ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಆದೇಶಿಸಿದಂತೆಯೇ ಇರುತ್ತದೆ"

ರಾಮ ಮಂದಿರಕ್ಕಾಗಿ ದೇಣಿಗೆ ನೀಡದ ಜನರ ಮನೆಗಳನ್ನು ಗುರುತಿಸಲಾಗಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ ವೈದ್ಯ ಅಂತಹಾ ಯಾವ ಗುರುತಿಸುವಿಕೆ ನಡೆದಿಲ್ಲ, ಆರೋಪಗಳು ಆಧಾರರಹಿತವಾಗಿವೆ ಎಂದಿದ್ದಾರೆ.

"ಆರ್‌ಎಸ್‌ಎಸ್ ಸ್ವಯಂ ಸೇವಕರು ಲಾಕ್ ಡೌನನ ದಿನಗಳಲ್ಲಿ ಸಕ್ರಿಯರಾಗಿ ಜನರಿಗೆ ಸಹಾಯ ಮಾಡಿದರು. ಸೋಂಕಿನ ಭೀತಿಯ ಹೊರತಾಗಿಯೂ, ಸುಮಾರು 5.7 ಲಕ್ಷ ಆರ್‌ಎಸ್‌ಎಸ್ ಕಾರ್ಯಕರ್ತರು ದೇಶಾದ್ಯಂತ 92,656 ಸ್ಥಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸುಮಾರು 73 ಲಕ್ಷ ನಿರ್ಗತಿಕರಿಗೆ ಪಡಿತರ ವಿತರಿಸಲಾಗಿದ್ದು, 4.5 ಕೋಟಿ ಜನರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು. ಸುಮಾರು 90 ಲಕ್ಷ ಮಾಸ್ಕ್ ಗಳನ್ನು ವಿತರಿಸಲಾಯಿತು ಮತ್ತು 60,000 ಕ್ಕೂ ಹೆಚ್ಚು ಯುನಿಟ್ ರಕ್ತವನ್ನು ದಾನ ಮಾಡಲಾಯಿತು. ಸ್ವಯಂಸೇವಕರು 20 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ." ವೈದ್ಯ ಹೇಳಿದ್ದಾರೆ.

ಸಾಂಕ್ರಾಮಿಕದ ಕಾರಣ ಕಳೆದ ವರ್ಷ ಮಾರ್ಚ್ ನಿಂದ ಜೂನ್ ವರೆಗೆ ಆರ್‌ಎಸ್‌ಎಸ್ ಶಾಖಾಗಳು ಮತ್ತು ಇತರ ಸಂಘಟನಾ ಚಟುವಟಿಕೆಗಳು ಸಂಪೂರ್ಣ ಸ್ಥಬ್ದವಾಗಿದ್ದವು. ಆದರೆ ಜುಲೈನ ನಂತರದಲ್ಲಿ ಶಾಳೆಗಳು ನಿಧಾನವಾಗಿ ಕಾರ್ಯಚಟುವಟಿಕೆ ಪುನಾರಂಬ ಮಾಡಿವೆ. ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ, ಹೆಚ್ಚಿನ ಶಾಖೆಗಳು ಮತ್ತೆ ಸಕ್ರಿಯವಾಗಿವೆ. ಒಟ್ಟಾರೆಯಾಗಿ, ಶೇಕಡಾ 89 ರಷ್ಟು ಶಾಳೆಗಳು ಪುನರಾರಂಭಗೊಂಡಿವೆ ಮತ್ತು ಉಳಿದವು ಕ್ರಮೇಣ ಪುನರಾರಂಭಗೊಳ್ಳುತ್ತವೆ.ಎಲ್ಲಾ ಜಿಲ್ಲೆಗಳಲ್ಲಿ ಮತ್ತು ಸುಮಾರು 6,495 ತಾಲ್ಲೂಕುಗಳಲ್ಲಿ ಶಾಳೆಗಳಿದೆ. ಸಂಘದ ಜಾಲವು ಸ್ತರಿಸುತ್ತಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಸಂಘವು ದೇಶದ ಎಲ್ಲಾ ಮಂಡಲಗಳನ್ನು ತಲುಪುವ ಗುರಿ ಹೊಂದಿದೆ ಎಂದು ಅವರು ಹೇಳಿದರು.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp