ಐಎಂಎ ಬಹುಕೋಟಿ ಹಗರಣ: ಹೈಕೋರ್ಟ್ ಕ್ಲೀನ್ ಚಿಟ್; ಐಪಿಎಸ್ ಅಧಿಕಾರಿ ನಿಂಬಾಳ್ಕರ್​ಗೆ ಬಿಗ್​ ರಿಲೀಫ್​​!

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಐಜಿಪಿ ಹೇಮಂತ್ ನಿಂಬಾಳ್ಕರ್‌ಗೆ ಬಿಗ್ ರಿಲೀಫ್ ಸಿಕ್ಕಿದೆ.    

Published: 20th March 2021 09:10 AM  |   Last Updated: 20th March 2021 01:06 PM   |  A+A-


Hemanth Nimbalkar

ಹೇಮಂತ್ ನಿಂಬಾಳ್ಕರ್

Posted By : Manjula VN
Source : Online Desk

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಐಜಿಪಿ ಹೇಮಂತ್ ನಿಂಬಾಳ್ಕರ್‌ಗೆ ಬಿಗ್ ರಿಲೀಫ್ ಸಿಕ್ಕಿದೆ.    

ಹೇಮಂತ್ ನಿಂಬಾಳ್ಕರ್ ವಿರುದ್ಧ ಸಿಬಿಐ ದಾಖಲಿಸಿರುವ ಎಫ್ಐಆರ್ ಮತ್ತು ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ರದ್ದುಪಡಿಸಿ ಹೈಕೋರ್ಟ್ ತೀರ್ಪು ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಹೆಚ್ಚುವರಿ ದೋಷಾರೋಪ ಪಟ್ಟಿ ಹಾಗೂ ಅದನ್ನು ಆಧರಿಸಿ ಸಿಬಿಐ ವಿಶೇಷ ನ್ಯಾಯಾಲಯ ತೆಗೆದುಕೊಂಡಕ್ಕಾಗಿ ಜೆನ್ಸ್ ಮತ್ತು ಪ್ರಾಸಿಕ್ಯೂಷನ್ ಗಾಗಿ ರಾಜ್ಯ ಸರ್ಕಾರ ನೀಡಿದ ಪೂರ್ವಾನುಮತಿ ರದ್ದುಪಡಿಸುವಂತೆ ಕೋರಿ ಹೇಮಂತ್ ನಿಂಬಾಳ್ಕರ್ ಹೈಕೋರ್ಟ್'ಗೆ ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರು ಶುಕ್ರವಾರ ಪ್ರಕಟಿಸಿದರು.

ಐಎಂಎ ಸಂಸ್ಥೆ ಸಾರ್ವಜನಿಕ ಠೇವಣಿ ಸಂಗ್ರಹಿಸಿದ ಬಗ್ಗೆ ಕರ್ಷಿಯಲ್ ಸ್ಟ್ರೀಟ್ ಠಾಣಾ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಇ.ಬಿ.ಶ್ರೀಧರ್ ನೀಡಿದ್ದ ವಿಚಾರಣಾ ವರದಿಯನ್ನು ಸಿಐಡಿ ಡಿಸಿಬಿ ಆಗಿದ್ದ ನಿಂಬಾಳ್ಕರ್ ಅವರು ರಾಜ್ಯ ಡಿಜಿ-ಐಜಿಪಿಗೆ ರವಾನಿಸಿದ್ದಾರೆ. ಐಎಂಎ ಸಂಸ್ಥೆ ಯಾವುದೇ ತಪ್ಪು ಮಾಡಿಲ್ಲ. ಆದರ ಮುಖ್ಯಸ್ಥ ಮತ್ತು ನಿರ್ದೇಶಕರ ವಿರುದ್ಧ ಕ್ರಮ ಜರುಗಿಸುವ ಅಗತ್ಯವಿಲ್ಲ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಆರ್'ಬಿಐ ಮನವಿ ಹೊರತಾಗಿಯೂ ಬಿ.ಇ.ಶ್ರೀಧರ್ ನೀಡಿದ್ದ ವರದಿ ಮರು ಪರಿಶೀಲಿಸಿಲ್ಲ ಎಂಬ ಕಾರಣಕ್ಕೆ ನಿಂಬಾಳ್ಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಆದರೆ, ವಿಚಾರಣೆ ವರದಿ ರವಾನಿಸಿದ ಮತ್ತು ಬಿ.ಇ.ಶ್ರೀಧರ್ ನೀಡಿದ್ದ ವರದಿ ಮರುಪರಿಶೀಲಿಸದ ಕಾರಣಕ್ಕೆ ಅರ್ಜಿದಾರರು ಸುಳ್ಳು ವರದಿ ಸಲ್ಲಿಸಿದ್ದಾರೆ.

ಅಧಿಕಾರ ದುರ್ಬಳಕೆ ಮಾಡಿಕೊಂಡು ಐಎಂಎ ಸಂಸ್ಥೆಗೆ ನೆರವು ನೀಡಿದ್ದಾರೆ. ಅದರ ಪ್ರತಿಫಲವಾಗಿ ಕಾನೂನು ಬಾಹಿರವಾಗಿ ಹಣ ಮತ್ತು ಚಿನ್ನಾಭರಣ ಪಡೆದಿದ್ದಾರೆ ಎಂಬ ಅಭಿಪ್ರಾಯಕ್ಕೆ ನ್ಯಾಯಾಲಯ ಬರಲು ಸಾಧ್ಯವಿಲ್ಲ. ಮೇಲಾಗಿ ಅರ್ಜಿದಾರರ ವಿರುದ್ಧ ಆರೋಪ ಸಾಬೀತುಪಡಿಸುವಂತಹ ಸೂಕ್ತ ಸಾಕ್ಷ್ಯಾಧಾರ ಇಲ್ಲ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸದೆ. ಪ್ರಾಸಿಕ್ಯೂಷನ್'ಗೆ ಸರ್ಕಾರ ನೀಡಿದ ಪೂರ್ವಾನುಮತಿಯನ್ನೂ ರದ್ದುಪಡಿಸಿ ಅದೇಶಿಸಿದೆ.


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp