ಮಹದಾಯಿ ವಿವಾದ: ಕಣಕುಂಬಿಗೆ ಜಂಟಿ ಪರಿಶೀಲನಾ ಸಮಿತಿ ಭೇಟಿ, ಪರಿಶೀಲನೆ

ಸರ್ವೋಚ್ಛ ನ್ಯಾಯಾಲಯದ ಸೂಚನೆಯಂತೆ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಜಂಟಿ ಪರಿಶೀಲನಾ ಸಮಿತಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಗ್ರಾಮದಲ್ಲಿ ರಾಜ್ಯ ಸರ್ಕಾರದಿಂದ ಕೈಗೆತ್ತಿಕೊಂಡಿರುವ ಕಳಸಾ ಕಾಲುವೆಯ ಸದ್ಯದ ಪರಿಸ್ಥಿತಿ ಪರಿಶೀಲನೆ ನಡೆಸಿತು.

Published: 20th March 2021 08:49 AM  |   Last Updated: 20th March 2021 10:24 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಳಗಾವಿ: ಸರ್ವೋಚ್ಛ ನ್ಯಾಯಾಲಯದ ಸೂಚನೆಯಂತೆ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಜಂಟಿ ಪರಿಶೀಲನಾ ಸಮಿತಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಗ್ರಾಮದಲ್ಲಿ ರಾಜ್ಯ ಸರ್ಕಾರದಿಂದ ಕೈಗೆತ್ತಿಕೊಂಡಿರುವ ಕಳಸಾ ಕಾಲುವೆಯ ಸದ್ಯದ ಪರಿಸ್ಥಿತಿ ಪರಿಶೀಲನೆ ನಡೆಸಿತು.

ಈ ವೇಳೆ ಮಾಧ್ಯಮದವರನ್ನೂ ಹಾಗೂ ಇತರೆ ಸಿಬ್ಬಂದಿಗಳನ್ನು ದೂರ ಇಡಲಾಗಿತ್ತು. ಭೇಟಿಯಾಗಿರುವ ಕುರಿತು ಯಾವುದೇ ವಿಡಿಯೋವಾಗಲೀ ಅಥವಾ ಫೋಟೋವನ್ನಾಗಲೀ ತೆಗೆಯದಂತೆ ಕಟ್ಟೆಚ್ಚರವಹಿಸಲಾಗಿತ್ತು.

ಕರ್ನಾಟಕ-ಗೋವಾ ರಾಜ್ಯಗಳ ನಡುವೆ ಉದ್ಭವಿಸಿರುವ ಮಹದಾಯಿ ಜಲವಿವಾದದ ಹಿನ್ನೆಲೆಯಲ್ಲಿ ಮಲಪ್ರಭಾ ನದಿಗೆ ಮಹದಾಯಿ ನದಿ ಮತ್ತು ಕಳಸಾ ಹಳ್ಳದಿಂದ ನೀರು ಹಂಚಿಕೆಯ ಕುರಿತು ಸರ್ವೋಚ್ಛ ನ್ಯಾಯಾಲಯ ಇತ್ತೀಚೆಗೆ ಸಮಿತಿ ರಚಿಸಿ ಆದೇಶಿಸಿತ್ತು.

ಅದರಂತೆ ಅಂತರ್ ರಾಜ್ಯ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದಿಂದ ನವಿಲು ತೀರ್ಥ ಜಲಾಶಯ ಅಧೀಕ್ಷಕ ಇಂಜಿನಿಯರ್ ಕೃಷ್ಣೋಜಿರಾವ್, ಗೋವಾ ರಾಜ್ಯದಿಂದ ಪಣಜಿ ಜಿಲ್ಲೆಯ ಅಧೀಕ್ಷಕ ಇಂಜಿನಿಯರ್ ಎಂ.ಕೆ.ಪ್ರಸಾದ ಮತ್ತು ಮಹಾರಾಷ್ಟ್ರ ರಾಜ್ಯದಿಂದ ಕೊಲ್ಲಾಪುರದ ಅಧೀಕ್ಷಕ ಇಂಜಿನಿಯರ್ ವಿಜಯಕುಮಾರ್ ಥೋರಟ್ ಅವರನ್ನೊಳಗೊಂಡ ಜಂಟಿ ಸಮಿತಿಯು ಕಣಕುಂಬಿ ಭೇಟಿ ಮಹತ್ವ ಪಡೆದಿದೆ.

ಸಮಿತಿ ಮಹದಾಯಿ, ಕಳಸಾ ಯೋಜನೆಯ ಕಾಮಗಾರಿ ಕುರಿತಾದ ಅಗತ್ಯ ಮಾಹಿತಿ ನೀಡಲಾಗಿದೆ. ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ಸೂಚನೆಯಂತೆ ಜಂಟಿ ಸಮಿತಿಯ ಸದಸ್ಯರ ಭೇಟಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ನಾಟಕವು ಈಗಾಗಲೇ ಮಹದಾಯಿ ನೀರನ್ನು ತಿರುಗಿಸಿಕೊಂಡಿದೆ ಎಂಬ ಗೋವಾದ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೂರು ರಾಜ್ಯಗಳ ಜಂಟಿ ಪರಿಶೀಲನೆಗೆ ಆದೇಶಿಸಿತ್ತು. ಮಾತ್ರವಲ್ಲ, ಕೇವಲ ನಾಲ್ಕು ವಾರಗಳಲ್ಲಿ ಪರಿಶೀಲನೆ ವರದಿಯನ್ನೂ ನೀಡುವಂತೆ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು.

ಏಪ್ರಿಲ್ 4ರಂದು ಸುಪ್ರೀಂಕೋರ್ಟ್ ಈ ಸಂಬಂಧ ವಿಚಾರಣೆ ನಡೆಸಲಿದೆ. ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧವಾಗಿದ್ದರಿಂದ ಯಾವುದೇ ಅಧಿಕಾರಿಗಳು ಭೇಟಿಯ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿರಲಿಲ್ಲ. ಜೊತೆಗೆ ಭೇಟಿಯಾಗಿರುವ ಕುರಿತು ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ.

ಜಂಟಿ ಸಮನ್ವಯ ಸಮಿತಿ ಕಣಕುಂಬಿ ಪ್ರವಾಸಿ ಮಂದಿರದ ಹಿಂಭಾಗದಲ್ಲಿ ಮತ್ತು ಕಣಕುಂಬಿ ಮಾವುಲಿ ದೇವಸ್ಥಾನದ ಮುಂಭಾಗದಲ್ಲಿ ಕರ್ನಾಟಕ ಸರ್ಕಾರದಿಂದ ಕೈಗೊಳ್ಳಲಾದ ಕಳಸಾ ತಿರುವು ಕಾಲುವೆಯನ್ನು ವೀಕ್ಷಿಸಿತು. ಬಳಿಕ ಪ್ರವಾಸಿ ಮಂದಿರಲ್ಲಿ ಮಹದಾಯಿ ಮತ್ತು ಕಳಸಾ ಯೋಜನೆಗಳ ಬಗ್ಗೆ ನಿರಾವರಿ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು.


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp