ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷಾಚಾರ: ವಿಧಾನಸಭೆಯಲ್ಲಿ ಕೆಲಕಾಲ ಗಭೀರ ಚರ್ಚೆ ನಡೆಸಿದ ಶಾಸಕರು

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಪಕ್ಷಭೇದ ಮರೆತ ಶಾಸಕರು ನ್ಯಾಯಾಂಗ ವ್ಯವಸ್ಥೆಯ ಭ್ರಷ್ಟಾಚಾರದ ಕುರಿತು ಗಂಭೀರ ಸ್ವರೂಪದ ಚರ್ಚೆ ನಡೆಸಿದರು.

Published: 20th March 2021 10:02 AM  |   Last Updated: 20th March 2021 01:09 PM   |  A+A-


Home Minister Basavaraj Bommai

ಗೃಹ ಸಚಿವ ಬಸವರಾಜ ಬೊಮ್ಮಾಯಿ

Posted By : Manjula VN
Source : The New Indian Express

ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಪಕ್ಷಭೇದ ಮರೆತ ಶಾಸಕರು ನ್ಯಾಯಾಂಗ ವ್ಯವಸ್ಥೆಯ ಭ್ರಷ್ಟಾಚಾರದ ಕುರಿತು ಗಂಭೀರ ಸ್ವರೂಪದ ಚರ್ಚೆ ನಡೆಸಿದರು.

ವಿಧಾನಸಭೆಯಲ್ಲಿ 2021-22ನೆ ಸಾಲಿನ ಆಯವ್ಯಯದ ಮೇಲೆ ಮಾತನಾಡುತ್ತಿದ್ದ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು, ‘ಶಾಸಕಾಂಗದ ಕಾರ್ಯನಿರ್ವಹಣೆ ಕುಸಿದ ಸಂದರ್ಭದಲ್ಲಿ ಕಾರ್ಯಾಂಗ ಹೊಣೆಗಾರಿಕೆ ಮರೆತರೆ ನ್ಯಾಯಾಂಗ ಕ್ರಿಯಾಶೀಲವಾಗುತ್ತದೆ. ನ್ಯಾಯಾಲಯದ ಕಡೆಗೆ ಸಾಮಾನ್ಯ ಜನ ನ್ಯಾಯಕ್ಕಾಗಿ ದೃಷ್ಟಿ ನೆಟ್ಟಿದ್ದಾರೆ. ಆದರೆ, ನ್ಯಾಯದಾನದ ದೀಪ ಆರಿ ಹೋಗುವ ಆತಂಕವಿದ್ದು, ಅಮಾವಾಸ್ಯೆ ಕತ್ತಲು ಆವರಿಸಲಿದೆ' ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾಗೇರಿಯವರು, ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳ್ಳದ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಬಾಕಿ ಉಳಿದಿವೆ. ಈ ವಿಚಾರದಲ್ಲಿ ಶಾಸಕಾಂಗ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲವೆ? ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್ ಅವರು, ನ್ಯಾಯದಾನವನ್ನು ಪ್ರಶ್ನಿಸುವ ಅಧಿಕಾರ ನಮಗಿದೆ ಎಂದು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿಯವರು, ನ್ಯಾಯಾಂಗವು ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ಹಸ್ತಕ್ಷೇಪ ಮಾಡುವ ಪ್ರವೃತ್ತಿ 1970ರ ದಶಕದಲ್ಲಿ ಆರಂಭವಾಯಿತು. 72 ವರ್ಷಗಳ ಪ್ರಜಾತಂತ್ರದ ಪಯಣದಲ್ಲಿ ಇದನ್ನು ಪದೇ ಪದೇ ನೋಡುತ್ತಿದ್ದೇವೆ. ನಾವು ಶಾಸನ ರಚಿಸುವವರು. ಸಾಮಾನ್ಯವಾಗಿ ಕಾನೂನುಗಳು ಅಸ್ಪಷ್ಟವಾಗಿರುತ್ತವೆ. ಅವುಗಳನ್ನು ವಿಭಿನ್ನವಾಗಿಯೂ ವ್ಯಾಖ್ಯಾನಿಸಲಾಗುತ್ತದೆ. ನಾವು(ಶಾಸಕಾಂಗ) ಈ ಅಸ್ಪಷ್ಟತೆಯನ್ನು ಸರಿಪಡಿಸಿದಾಗ, ನ್ಯಾಯಾಂಗಕ್ಕೆ ಮೂಗು ತೂರಿಸಲು ಅವಕಾಶವೇ ಸಿಗುವುದಿಲ್ಲ ಎಂದು ಹೇಳಿದರು.

ಬಳಿಕ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ ಅವರು, ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಅಪಾರವಾದ ಗೌರವವಿದೆ. ಸುಪ್ರೀಂಕೋರ್ಟ್'ನ ಸಾಕಷ್ಟು ನ್ಯಾಯಾಮೂರ್ತಿಗಳು ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರದ ಕುರಿತು ಮಾತನಾಡಿದ್ದಾರೆ. ಇದು ಸಾಕಷ್ಟು ಬೇಸರದ ವಿಚಾರ. ಆದರೆ, ನ್ಯಾಯಾಂಗ ನಿಂದನೆ ಭಯದಿಂದ ಈ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ ಎಂದು ಹೇಳಿದರು.

ಶಾಸಕರ ಅರಗ ಜ್ಞಾನೇಂದ್ರ ಮಾತನಾಡಿ, ಸ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ, ಶಾಸಕರೊಂದಿಗೆ ನ್ಯಾಯಾಧೀಶರು ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ನಿರಾಕರಿಸುತ್ತಾರೆ. ಆದರೆ, ನಾವು ಅವರಿಗೆ ಮೂಲಸೌಲಭ್ಯ ಕಲ್ಪಿಸುವುದು ಸೇರಿದಂತೆ ವೇತನ ನೀಡಲು ಒಪ್ಪಿಗೆ ನೀಡಬೇಕು. ನಮ್ನ್ನು ಕಳ್ಳರಂತೆ ನೋಡುವ ಅವರು(ನ್ಯಾಯಾಧೀಶರು) ವೇದಿಕೆ ಹಂಚಿಕೊಂಡರೆ ಅವರು ಕಳ್ಳರಾಗುವ ಭಯವೇ?ಎಂದು ಪ್ರಶ್ನಿಸಿದರು.


Stay up to date on all the latest ರಾಜ್ಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp