ಮೈಸೂರು: ಸತ್ತು 36 ದಿನಗಳಾದರೂ ವ್ಯಕ್ತಿ ಮೃತದೇಹದಲ್ಲಿ ಕೊರೋನಾ ಪತ್ತೆ!

ದಿನಕಳೆದಂತೆ ಮಹಾಮಾರಿ ಕೊರೋನಾ ವೈರಸ್ ಹೊಸ ರೂಪ ಪಡೆದುಕೊಳ್ಳುತ್ತಿರುವುದು ಆತಂಕ ಸೃಷ್ಟಿಮಾಡಿದ್ದು. ಈ ನಡುವಲ್ಲೇ ವೈದ್ಯಕೀಯ ಲೋಕಕ್ಕೆ ಅಚ್ಚರಿ ಮೂಡಿಸುವ ಪ್ರಕರಣವೊಂದು ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

Published: 20th March 2021 01:53 PM  |   Last Updated: 20th March 2021 02:38 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಮೈಸೂರು: ದಿನಕಳೆದಂತೆ ಮಹಾಮಾರಿ ಕೊರೋನಾ ವೈರಸ್ ಹೊಸ ರೂಪ ಪಡೆದುಕೊಳ್ಳುತ್ತಿರುವುದು ಆತಂಕ ಸೃಷ್ಟಿಮಾಡಿದ್ದು. ಈ ನಡುವಲ್ಲೇ ವೈದ್ಯಕೀಯ ಲೋಕಕ್ಕೆ ಅಚ್ಚರಿ ಮೂಡಿಸುವ ಪ್ರಕರಣವೊಂದು ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

ಸತ್ತು 36 ದಿನ ಕಳೆದರೂ ವ್ಯಕ್ತಿಯ ಮೃತದೇಹದಲ್ಲಿ ಕೊರೋನಾ ವೈರಸ್ ಪತ್ತೆಯಾಗಿರುವುದು ವೈದ್ಯ ಲೋಕದಲ್ಲಿ ಅಚ್ಚರಿ ಮೂಡಿಸಿದೆ.

ಹೆಚ್'ಡಿ ಕೋಟೆ ತಾಲೂಕಿನ ಆಸ್ಪತ್ರೆಯಲ್ಲಿ 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಪಾಸಿಟಿವ್ ಬಂದಿತ್ತು. ನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ಅಧಿಕಾರಿಗಳು ಸೂಚಿಸಿದ್ದರು. ಆದರೆ, ಅಧಿಕಾರಿಗಳ ಮಾತು ಕೇಳದ ವ್ಯಕ್ತಿ ಮನೆಗೆ ತೆರಳಿದ್ದರು.

ಸೋಂಕಿತ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದ ಆರೋಗ್ಯಾಧಿಕಾರಿಗಳಿಗೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದಿದೆ. ಆದರೆ, ವ್ಯಕ್ತಿಗೆ ಕೊರೋನಾ ಇರುವ ವಿಚಾರ ತಿಳಿಯದ ಕುಟುಂಬಸ್ಥರು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಆತ್ಮಹತ್ಯೆ ಪ್ರಕರಣವಾಗಿದ್ದ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರು ವ್ಯಕ್ತಿ ಸತ್ತ 16ನೇ ದಿನದಂದು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಾದರಿಯು 20 ದಿನಗಳ ಬಳಿಕ ಸಿಎಫ್‌ಟಿಆರ್‌ಐ ಕೋವಿಡ್ ಪರೀಕ್ಷಾ ಪ್ರಯೋಗಾಲಯವನ್ನು ತಲುಪಿದೆ. ವ್ಯಕ್ತಿ ಸತ್ತು 36 ದಿನಗಳಾದರೂ ಕೊರೋನಾ ಪಾಸಿಟಿವ್ ಬಂದಿದ್ದು, ಈ ಪ್ರಕರಣ ಇದೀಗ ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದೆ. ಪ್ರಕರಣ ಬೆನ್ನಲ್ಲೇ ಕೊರೋನಾ ವೈರಸ್ ಕುರಿತು ಮತ್ತಷ್ಟು ಅಧ್ಯಯನಗಳು ನಡೆಸಲು ವಿಜ್ಞಾನಿಗಳು ಮುಂದಾಗಿದ್ದಾರೆ.

ಮೈಸೂರು ಜಿಲ್ಲಾ ಕೋವಿಡ್ ಆಸ್ಪತ್ರೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ಮತ್ತು ಸಿಎಸ್‌ಐಆರ್ ವಿಜ್ಞಾನಿಗಳ ತಂಡ ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಸಿಎಫ್‌ಟಿಆರ್‌ಐ ಕೋವಿಡ್ -19 ಪರೀಕ್ಷಾ ಕೇಂದ್ರದ ಉಸ್ತುವಾರಿ ಸಂಯೋಜಕರಾದ ಡಾ. ಪಿ ವಿ ರವೀಂದ್ರ ಅವರು ಮಾತನಾಡಿ, ಪರೀಕ್ಷೆಗಳನ್ನು ಸಾಕಷ್ಟು ಬಾರಿ ನಡೆಸಲಾಗಿತ್ತು. ಆರ್'ಟಿ-ಪಿಸಿಆರ್ ವಿಧಾನದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಎಷ್ಟು ಬಾರಿ ಪರೀಕ್ಷೆ ನಡೆಸಿದರೂ ಕೊರೋನಾ ಪಾಸಿಟಿವ್ ಬರುತ್ತಲೇ ಇತ್ತು. ಕುತೂಹಲಕಾರಿ ವಿಚಾರವೆಂದರೆ, ವ್ಯಕ್ತಿ ಮೂಗಿನ ಸ್ವ್ಯಾಬ್, ಕರುಳು ಮತ್ತು ಯಕೃತ್ತಿನ ಮಾದರಿಯಲ್ಲಿ ಕೊರೋನಾ ಪಾಸಿಟಿವ್ ಬರುತ್ತಿವೆ, ಆದರೆ ಶ್ವಾಸಕೋಶ ಮತ್ತು ಮೂತ್ರಪಿಂಡದಲ್ಲಿ ಸೋಂಕು ಕಂಡು ಬರುತ್ತಿಲ್ಲ. ಮೃತದೇಹ ಕೊಳೆತುಹೋಗಿದೆ. ಅಂತ್ಯಸಂಸ್ಕಾರ ಮಾಡಿ 36 ದಿನಗಳಾದರೂ ಕೊರೋನಾ ಪಾಸಿಟಿವ್ ಬರುತ್ತಿರುವುದು ನಿಜಕ್ಕೂ ಆತಂಕದ ವಿಚಾರ ಎಂದು ಹೇಳಿದ್ದಾರೆ.

ವೈರಸ್ ಎಷ್ಟು ದಿನಗಳ ಕಾಲ ಇರಬಹುದು ಎಂಬುದರ ಕುರಿತು ಮತ್ತಷ್ಟು ಅಧ್ಯಯನಗಳು ನಡೆಯುವ ಅಗತ್ಯವಿದೆ. ಸೋಂಕಿತ ವ್ಯಕ್ತಿ ಸಾವನ್ನಪ್ಪಿದ ಬಳಿಕ ಮೃತದೇಹದಲ್ಲಿ 7 ದಿನಗಳಿಗಿಂತಲೂ ಹೆಚ್ಚು ಕಾಲ ವೈರಸ್ ಜೀವಂತವಾಗಿರುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಈ ಪ್ರಕರಣದಿಂದ ಇದೀಗ ಪ್ರಶ್ನೆಗಳು ಉದ್ಭವವಾಗುಂತೆ ಮಾಡಿದೆ ಎಂದು ತಿಳಿಸಿದ್ದಾರೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp