ಮಾಡೆಲ್ ಮೇಲೆ ಹಲ್ಲೆ ಆರೋಪ: ತಾತ್ಕಾಲಿಕವಾಗಿ ತನಿಖೆಯನ್ನು ನಿಲ್ಲಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು

ಜೊಮ್ಯಾಟೊ ಡೆಲಿವರಿ ಬಾಯ್ ಹಲ್ಲೆ ಆರೋಪ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಧಾರಗಳು ದೊರೆಯದ ಕಾರಣಕ್ಕೆ ತಾತ್ಕಾಲಿಕವಾಗಿ ತನಿಖೆಯನ್ನು ನಿಲ್ಲಿಸಲು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ನಿರ್ಧರಿಸಿದ್ದಾರೆ. 

Published: 21st March 2021 08:15 AM  |   Last Updated: 21st March 2021 08:17 AM   |  A+A-


Hitesha_Chandranee1

ಹಿತೇಶಾ ಚಂದ್ರಾಣಿ

Posted By : Nagaraja AB
Source : The New Indian Express

ಬೆಂಗಳೂರು: ಜೊಮ್ಯಾಟೊ ಡೆಲಿವರಿ ಬಾಯ್ ಹಲ್ಲೆ ಆರೋಪ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಧಾರಗಳು ದೊರೆಯದ ಕಾರಣಕ್ಕೆ ತಾತ್ಕಾಲಿಕವಾಗಿ ತನಿಖೆಯನ್ನು ನಿಲ್ಲಿಸಲು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ನಿರ್ಧರಿಸಿದ್ದಾರೆ. 

ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಸಾಕ್ಷ್ಯಾಧಾರಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಈವರೆಗೂ ಯಾವುದೇ ಸಾಕ್ಷ್ಯಾಧಾರ ಸಿಕಿಲ್ಲ. ಯುವತಿ ತಂಗಿದ್ದ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮರಾ ಇರಲಿಲ್ಲ ಎಂದು ತನಿಖಾಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದ ಮಾತ್ರ ಹೇಳಿಕೆಯನ್ನು ದಾಖಲಿಸಿರುವ ಯುವತಿ, ಡೆಲಿವರಿ ಬಾಯ್ ಕೇಸ್ ದಾಖಲಿಸಿದ ನಂತರ ವಿಚಾರಣೆಗಾಗಿ ಠಾಣೆಗೆ ಬಂದಿಲ್ಲ, ಆದ್ದರಿಂದ ಕೇವಲ ಆರೋಪಿ ಮತ್ತು ಮಹಿಳೆಯ ಆರೋಪಗಳನ್ನು ಆಧರಿಸಿ ತನಿಖೆ ನಡೆಸಲು ಹೆಚ್ಚೇನೂ ಇಲ್ಲ ಎಂದು ಹೇಳಿದ್ದಾರೆ.

ಯುವತಿ ಹಿತೇಶಾ ಚಂದ್ರಾಣಿಯನ್ನು ವಿಚಾರಣೆಗಾಗಿ ಕರೆದಾಗ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಮಹಾರಾಷ್ಟ್ರಕ್ಕೆ ಹೋಗಿರುವುದಾಗಿ ಹೇಳಿದ್ದಾರೆ. ಮಾರನೇ ದಿನ ಆಕೆ ನಗರದಿಂದ ಪಲಾಯನವಾಗಿರುವುದಾಗಿ ಮಾಧ್ಯಮಗಳ ವರದಿ ಮಾಡಿದ್ದವು. ಮತ್ತೆ ಏಲ್ಲಿಯೂ ಹೋಗಿಲ್ಲ ಎಂದು ಆಕೆ ಫೋಸ್ಟ್ ಮಾಡಿದ್ದಳು.

ವಿಚಾರಣೆ ಅಂಗವಾಗಿ ಆಕೆಯ ಫೋನ್ ನೆಟವರ್ಕ್ ಲೋಕೇಷನ್ ಪತ್ತೆ ಹಚ್ಚಲಾಗುತ್ತಿದೆ. ಹಿತೇಶಾ ಚಂದ್ರಾಣಿ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಆಕೆಯ ಸಂಬಂಧಿಕರು ತಿಳಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂಗಿನ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಅಭಿಪ್ರಾಯವನ್ನು ಕೋರಿದ್ದೇವೆ. ಆದಾಗ್ಯೂ, ಅಂತಿಮ ವರದಿಗಾಗಿ ಕಾಯುತ್ತಿರುವುದಾಗಿ ಅವರು ಹೇಳಿದ್ದಾರೆ. 

ಮಾರ್ಚ್ 9 ರಂದು ಫುಡ್ ಡೆಲಿವರಿ ಮಾಡಲು ಕಾಮರಾಜ್ ಚಂದ್ರಾಣಿ ಫ್ಲಾಟ್ ಗೆ ಹೋದಾಗ ವಿಳಂಬದ ಕಾರಣಕ್ಕೆ ಮಾತಿಗೆ ಮಾತು ಬೆಳೆದು, ಕಾಮರಾಜ್, ತನ್ನ ಮೂಗಿನ ಮೇಲೆ ಹಲ್ಲೆ ಮಾಡಿರುವುದಾಗಿ ಆಕೆ ಆರೋಪಿಸಿದ್ದಳು, ಆದರೆ, ನಾನು ಹಲ್ಲೆ ಮಾಡಿಲ್ಲ, ಬದಲಿಗೆ ಆಕೆಯೇ ಚಪ್ಪಲಿಯಿಂದ ಹೊಡೆದಿದ್ದಾರೆ. ವಾಗ್ವಾದ ಸಂದರ್ಭದಲ್ಲಿ ಆಕೆ ಧರಿಸಿದ ಉಂಗುರ ಮೂಗಿಗೆ ತಗುಲಿ ಗಾಯವಾಗಿರುವುದಾಗಿ ಡೆಲಿವರಿ ಬಾಯ್  ಹೇಳಿಕೆ ನೀಡಿದ್ದರು.

ಈ ಘಟನೆ ನಡೆದ ಬಳಿಕ ಚಂದ್ರಾಣಿ ಸೋಶಿಯಲ್ ಮೀಡಿಯಾದಲ್ಲಿ ಮಾಡಿದ್ದ ಫೋಸ್ಟ್ ವೈರಲ್ ಆಗಿತ್ತು. ನಂತರ ಪೊಲೀಸರು ಕಾಮರಾಜ್ ನನ್ನು ಬಂಧಿಸಿ, ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಿದ್ದರು. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp