ಸಚಿವ ಸುಧಾಕರ್ ಸಿಬ್ಬಂದಿ ನಡುವೆ ಮಾರಾಮಾರಿ: ದೂರು ದಾಖಲು

 ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರ ನಿವಾಸದ ಎದುರು ನಡೆದಿದ್ದ ಸಿಬ್ಬಂದಿಗಳ ಮಧ್ಯೆದ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Published: 23rd March 2021 04:48 PM  |   Last Updated: 23rd March 2021 04:48 PM   |  A+A-


udhakargunmananddriver1

ಸಚಿವ ಸುಧಾಕರ್ ಗನ್ ಮ್ಯಾನ್, ಕಾರು ಚಾಲಕನ ನಡುವಿನ ಮಾರಾಮಾರಿಯ ಫೋಟೋ

Posted By : Nagaraja AB
Source : UNI

ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ನಿವಾಸದ ಎದುರು ನಡೆದಿದ್ದ ಸಿಬ್ಬಂದಿಗಳ ಮಧ್ಯೆದ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದೇ ಫೆ.19ರಂದು ಸಚಿವರ ಗನ್ ಮ್ಯಾನ್ ತಿಮ್ಮಯ್ಯ ಹಾಗೂ ಖಾಸಗಿ ವಾಹನ ಚಾಲಕ ಸೋಮಶೇಖರ್ ಪರಸ್ಪರ ಬಡಿದಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗನ್ ಮ್ಯಾನ್ ತಿಮ್ಮಯ್ಯ ವಿರುದ್ಧ ಚಾಲಕನ ಪತ್ನಿ ರತ್ನಮ್ಮ ದೂರು ದಾಖಲಿಸಿದ್ದಾರೆ.

ಫೆ.19ರಂದು ಬೆಳಿಗ್ಗೆ ನನ್ನ ಪತಿ ಕೆಲಸಕ್ಕೆ ಹೋಗಿದ್ದಾಗ ಅವರನ್ನು ತಡೆದ ಗನ್ ಮ್ಯಾನ್ ತಿಮ್ಮಯ್ಯ, ಸಚಿವರ ಬಳಿ ಹಾಗೂ ಅವರ ಪತ್ನಿ ಬಳಿ ನನ್ನ ಬಗ್ಗೆ ಇಲ್ಲ ಸಲ್ಲದನ್ನು ಹೇಳುತ್ತೀಯಾ ಎಂದು ಆಕ್ರೋಶವ್ಯಕ್ತಪಡಿಸಿ ಹಲ್ಲೆ ಮಾಡಿದ್ದಾರೆ ಎಂದು ರತ್ನಮ್ಮ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp