ಎಸ್​ಐಟಿ ತನಿಖೆ ಮೇಲೆ ಸಿಡಿ ಯುವತಿಗೆ ನಂಬಿಕೆ ಇಲ್ಲ: ವಕೀಲ ಜಗದೀಶ್

ಎಸ್​ಐಟಿ ತನಿಖೆ ಮೇಲೆ ಸಿಡಿಯಲ್ಲಿರುವ ಯುವತಿಗೆ ನಂಬಿಕೆ ಇಲ್ಲ ಎಂದು ಆಕೆಯ ಪರ ವಕೀಲ ಜಗದೀಶ್ ಹೇಳಿದರು.

Published: 26th March 2021 04:30 PM  |   Last Updated: 26th March 2021 04:45 PM   |  A+A-


Jagadish

ಜಗದೀಶ್

Posted By : Vishwanath S
Source : UNI

ಬೆಂಗಳೂರು: ಎಸ್​ಐಟಿ ತನಿಖೆ ಮೇಲೆ ಸಿಡಿಯಲ್ಲಿರುವ ಯುವತಿಗೆ ನಂಬಿಕೆ ಇಲ್ಲ ಎಂದು ಆಕೆಯ ಪರ ವಕೀಲ ಜಗದೀಶ್ ಹೇಳಿದರು.

ರಮೇಶ್​ ಜಾರಕಿಹೊಳಿ ವಿರುದ್ಧ ದೂರು ನೀಡಿದ ಬಳಿಕ ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಸಂತ್ರಸ್ತ ಯುವತಿಗೆ ಭಯ ಇರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಬೆಂಬಲ ನೀಡುವುದಾಗಿ ಹೇಳಿದ್ದೇವು. ಹೀಗಾಗಿ ಯುವತಿ ಲಿಖಿತ ರೂಪದಲ್ಲಿ ದೂರು ಕಳುಹಿಸಿದ್ದಾರೆ‌‌ ಎಂದರು.

ಪೊಲೀಸ್ ಆಯುಕ್ತ ರಿಗೆ ಸುಮಟೋ ಕೇಸ್ ದಾಖಲಿಸಲು ಮನವಿ ಮಾಡಿದ್ದೇವೆ. ಸದ್ಯ ಆಯುಕ್ತರು ದೂರನ್ನು ಪರಿಶೀಲಿಸಿ ಕಬ್ಬನ್ ಪಾರ್ಕ್ ಠಾಣೆಗೆ ಹೋಗಲು ತಿಳಿಸಿದ್ದಾರೆ‌‌‌ ಎಂದರು.

ಯುವತಿಗೆ ಭದ್ರತೆ ಮುಖ್ಯವಾಗಿದೆ. ಅಲ್ಲದೇ, ಎಸ್​ಐಟಿ ತನಿಖೆ ಮೇಲೆ ಮೇಲೆ ಆಕೆಗೆ ನಂಬಿಕೆ ಇಲ್ಲ. ಆಕೆ ಆರೋಪ ಮಾಡುತ್ತಿರುವುದು ರಾಜ್ಯದ ಪ್ರಭಾವಿ ವ್ಯಕ್ತಿ ಮೇಲೆ. ಆದ್ದರಿಂದ ಸಂತ್ರಸ್ತ ಯುವತಿಗೆ ಭಯ ಇದೆ ಎಂದು ಅವರು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ವಿಷಯವನ್ನು ಮಾಧ್ಯಮದ ಎದುರು ಬಿಚ್ಚಿಡಲು ಆಗುವುದಿಲ್ಲ ಎಂದು ತಿಳಿಸಿದರು.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp