9291 ಕೋಟಿ ರೂ. ಮೊತ್ತದ ಬಿಬಿಎಂಪಿ ಬಜೆಟ್ ಮಂಡನೆ: ಶಿಕ್ಷಣ, ಪರಿಸರ ರಕ್ಷಣೆ, ಆರೋಗ್ಯಕ್ಕೆ ಆದ್ಯತೆ

ಆರೋಗ್ಯ, ಶಿಕ್ಷಣ, ಪರಿಸರ, ಮೂಲ ಸೌಕರ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಬೆಂಗಳೂರು ಮಹಾನಗರ ಪಾಲಿಕೆಯ 2021-22ನೇ ಸಾಲಿನ 9291.33 ಕೋಟಿ ಮೊತ್ತದ ಬಜೆಟ್‌ನ್ನು ಮಂಡಿಸಲಾಗಿದೆ.

Published: 27th March 2021 06:15 PM  |   Last Updated: 27th March 2021 06:15 PM   |  A+A-


BBMP

ಬಿಬಿಎಂಪಿ

Posted By : Vishwanath S
Source : UNI

ಬೆಂಗಳೂರು: ಆರೋಗ್ಯ, ಶಿಕ್ಷಣ, ಪರಿಸರ, ಮೂಲ ಸೌಕರ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಬೆಂಗಳೂರು ಮಹಾನಗರ ಪಾಲಿಕೆಯ 2021-22ನೇ ಸಾಲಿನ 9291.33 ಕೋಟಿ ಮೊತ್ತದ ಬಜೆಟ್‌ನ್ನು ಮಂಡಿಸಲಾಗಿದೆ.
 
ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ನೇತೃತ್ವದಲ್ಲಿ ಬಜೆಟ್ ಮಂಡಿಸಲಾಗಿದೆ. ಬೆಂಗಳೂರು ನಗರದಲ್ಲಿರುವ ಒಂದು ಸಾವಿರದ 200 ಉದ್ಯಾನವನಗಳ ಅಭಿವೃದ್ಧಿಗೆ 214 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದರ ಜೊತೆಗೆ ರಸ್ತೆಗಳು, ರಾಜಕಾಲುವೆ ಅಭಿವೃದ್ಧಿ, ನಗರದ ಮೂಲಭೂತ ಸೌಕರ್ಯ ಹೆಚ್ಚಿಸಲು ಒತ್ತುಕೊಡಲಾಗಿದೆ.

ಗೌರವ್ ಗುಪ್ತಾ ಮಾಹಿತಿ ನೀಡಿ, ಆಡಳಿತಾತ್ಮಕ ಅಧಿಕಾರ ವಿಕೇಂದ್ರಿಕರಣಕ್ಕೆ 2000 ಕೋಟಿ ಮೀಸಲಿಟ್ಟಿದ್ದು, ಆಸ್ತಿ ತೆರಿಗೆಯ ಶೇಕಡ 1% ನಷ್ಟು ವಾಡ್೯ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದು, ಇ ಆಸ್ತಿ ತಂತ್ರಾಂಶ ಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಬಿ ಖಾತೆಗಳನ್ನು ಎ ಖಾತೆ ಯಾಗಿ ಬದಲಾವಣೆ ಮಾಡುವ ಜತೆಗೆ ಪಾಲಿಕೆ ಆಸ್ತಿಗಳ ಬಾಡಿಗೆ ಹೆಚ್ಚಳ ಮಾಡದಿರಲು ತೀರ್ಮಾನಿಸಲಾಗಿದೆ ಎಂದರು.

ಒಸಿ ಮತ್ತು ಸಿಸಿ ಪಡೆಯಲು ಹೊಸ ತಂತ್ರಜ್ಞಾನ ಅಳವಡಿಕೆ, ಕಸ ವಿಲೇವಾರಿ ಹಾಗೂ ಘನತ್ಯಾಜ್ಜಕ್ಕಾಗಿ 1622 ಕೋಟಿ ರೂ, 67 ಹೊಸ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಇಂದಿರಾ ಕ್ಯಾಂಟೀನ್‌ಗಳ ಚಟುವಟಿಕೆಗಾಗಿ ೮೦ ಕೋಟಿ ರೂ ಮೀಸಲಿಡಲಾಗಿದೆ. ಪರಿಶಿಷ್ಠ ಜಾತಿ, ಪಂಗಡಕ್ಕೆ ಮೀಸಲಿಟ್ಟ ಹಣ ವ್ಯರ್ಥವಾಗುವುದಿಲ್ಲ. ಅದನ್ನು ಮುಂದಿನ ಸಾಲಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಬಿಬಿಎಂಪಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಶೇ 85 ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ 25 ಸಾವಿರ ಪ್ರೋತ್ಸಾಹ ಧನ, ಕೋವಿಡ್ ನಿಯಂತ್ರಣಕ್ಕಾಗಿ 337 ಕೋಟಿ ಮೀಸಲು, ಬೀದಿ ನಾಯಿಗಳ ಹಾವಳಿಗೆ ತಪ್ಪಿಸಲು 5 ಕೋಟಿ ಮೀಸಲಿಡಲಾಗಿದೆ ಎಂದರು.


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp