ಸಿಡಿ ಪ್ರಕರಣ: ಯಾರ ಒತ್ತಡ, ಪ್ರಭಾವಕ್ಕೂ ತಲೆಕೆಡಿಸಿಕೊಳ್ಳದೆ ಎಸ್‌ಐಟಿ ತನಿಖೆ ನಡೆಯುತ್ತೆ ಎಂದ ಬಸವರಾಜ ಬೊಮ್ಮಾಯಿ

ರಾಸಲೀಲೆ ಸಿಡಿ ಪ್ರಕರಣದಲ್ಲಿ ಯಾರ ಒತ್ತಡ, ಪ್ರಭಾವಕ್ಕೆ ತಲೆಕೆಡಿಸಿಕೊಳ್ಳದೇ ಎಸ್‌ಐಟಿ ತನಿಖೆ ನಡೆಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

Published: 27th March 2021 11:53 AM  |   Last Updated: 27th March 2021 12:58 PM   |  A+A-


Basavaraj bommai

ಬಸವರಾಜ ಬೊಮ್ಮಾಯಿ

Posted By : Shilpa D
Source : UNI

ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣದಲ್ಲಿ ಯಾರ ಒತ್ತಡ, ಪ್ರಭಾವಕ್ಕೆ ತಲೆಕೆಡಿಸಿಕೊಳ್ಳದೇ ಎಸ್‌ಐಟಿ ತನಿಖೆ ನಡೆಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಣಿಯಾಗಿ ಬಿಡುಗಡೆಗೊಂಡ ವಿಡಿಯೋ, ಆಡಿಯೋ ಹಾಗೂ ಸಿಡಿಗಳನ್ನಿಟ್ಟುಕೊಂಡು ಎಸ್‌ಐಟಿ ಪರಿಶೀಲನೆ ನಡೆಸಲಿದೆ ಎಂದರು‌.

ವೈಜ್ಞಾನಿಕವಾಗಿ ಪರಿಶೀಲಿಸಿ ಸಮಗ್ರವಾಗಿ ತನಿಖೆ ನಡೆಸಲಿದೆ. ಯಾವುದೇ ರೀತಿಯ ಒತ್ತಡ ಪ್ರಭಾವಕ್ಕೆ ಮಣಿದು ದಾರಿ ತಪ್ಪಿಸುವ ಕೆಲಸ ಎಸ್‌ಐಟಿಯಿಂದ ಮಾಡುವುದಿಲ್ಲ. ಕಾನೂನು ಬದ್ಧವಾಗಿ ಎಸ್‌ಐಟಿ ತನಿಖೆ ಮಾಡುತ್ತದೆ. ಸತ್ಯಾಸತ್ಯತೆ ತಿಳಿದುಕೊಂಡು ಈ ಪ್ರಕರಣದ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಧಾರಾವಾಹಿ ರೀತಿಯಲ್ಲಿ ಆಡಿಯೊ, ವಿಡಿಯೊ ಬರುತ್ತಿದೆ.‌ ಯುವತಿ ವಿಡಿಯೊ ಬಿಡುಗಡೆ ಮಾಡಿದ್ದಾಳೆ ಎಂದು ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಪ್ರಕರಣದ ತನಿಖೆಯನ್ನು ನಿಷ್ಠುರವಾಗಿ, ನ್ಯಾಯಸಮ್ಮತವಾಗಿ ಮಾಡುತ್ತೇವೆ. ಯಾರ ಪರ, ಯಾರ ವಿರುದ್ಧ ತನಿಖೆ ಮಾಡುವುದಿಲ್ಲ. ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ’ ಎಂದು ಹೇಳಿದ್ದಾರೆ
 

Stay up to date on all the latest ರಾಜ್ಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp