ರಕ್ತಹೀನತೆಯಿಂದ ಆಶಾ ಕಾರ್ಯಕರ್ತೆ ಸಾವು, ಚಿಕಿತ್ಸೆ ಕುರಿತು ಆರೋಗ್ಯ ಇಲಾಖೆ ನಿರ್ಲಕ್ಷಿಸಿತ್ತು: ಕುಟುಂಬಸ್ಥರು
ಮೈಸೂರಿನ ಹುಲ್ಲಹಳ್ಳಿಯ ನಲವತ್ತಮೂರು ವರ್ಷದ ಚೆಲುವಮ್ಮ ಸಾಂಕ್ರಾಮಿಕ ರೋಗ ಕೋವಿಡ್ ಮಾಹಿತಿ ಸಂಗ್ರಹಣೆಗಾಗಿ ಮನೆ ಮನೆ ಬಾಗಿಲು ಬಡಿಯುತ್ತಿದ್ದರು. ದುರದೃಷ್ಟವಶಾತ್, ಆಶಾ ಕಾರ್ಯಕರ್ತೆ ರಕ್ತಹೀನತೆ ಮತ್ತು ಗರ್ಭಾಶಯಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಬಲಿಯಾದರು ಎಂದು ಕುಟುಂಬಸ್ಥರು ಹೇಳಿದ್ದಾರೆ.
Published: 29th March 2021 03:21 PM | Last Updated: 29th March 2021 03:21 PM | A+A A-

ಆಶಾ ಕಾರ್ಯಕರ್ತೆಯರು
ಮೈಸೂರು: ಮೈಸೂರಿನ ಹುಲ್ಲಹಳ್ಳಿಯ ನಲವತ್ತಮೂರು ವರ್ಷದ ಚೆಲುವಮ್ಮ ಸಾಂಕ್ರಾಮಿಕ ರೋಗ ಕೋವಿಡ್ ಮಾಹಿತಿ ಸಂಗ್ರಹಣೆಗಾಗಿ ಮನೆ ಮನೆ ಬಾಗಿಲು ಬಡಿಯುತ್ತಿದ್ದರು. ದುರದೃಷ್ಟವಶಾತ್, ಆಶಾ ಕಾರ್ಯಕರ್ತೆ ರಕ್ತಹೀನತೆ ಮತ್ತು ಗರ್ಭಾಶಯಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಬಲಿಯಾದರು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಚೆಲುವಮ್ಮ ಅವರ ನಿಧನವು ಮಹಿಳೆಯರು ಮತ್ತು ಆಶಾ ಕಾರ್ಮಿಕರ ದುಃಸ್ಥಿತಿಯನ್ನು ಬಹಿರಂಗ ಪಡಿಸುತ್ತದೆ. ಅವರ ಸಾವು ಆಶಾ ಕಾರ್ಯಕರ್ತೆಯ ಸಾವಿನ ಅಂಕಿ ಅಂಶಗಳೊಳಗೆ ಸೇರಿಕೊಳ್ಳುತ್ತದೆ ಹೊರತು ಮತ್ತೇನು ಆಗುವುದಿಲ್ಲ. ಅತಿಯಾದ ಕೆಲಸ ಮತ್ತು ಅಲ್ಪ ವೇತನದ ದೂರುಗಳು ಸರ್ಕಾರದ ಕಿವಿಗೆ ಕೇಳಿಸುವುದಿಲ್ಲ.
ಗರ್ಭಾಶಯವನ್ನು ತೆಗೆದುಹಾಕಿದ ನಂತರ ಉಲ್ಬಣಗೊಂಡಿದ್ದ ರಕ್ತಹೀನತೆಯಿಂದಾಗಿ ಚೆಲುವಮ್ಮ ಕಳೆದ ಒಂದು ವಾರದ ಹಿಂದೆ ನಿಧನರಾಗಿದ್ದರು. ಚೆಲುವಮ್ಮ ಚಿಕಿತ್ಸೆ ಕುರಿತಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷಿಸಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
'ನನ್ನ ತಾಯಿ ಇಲಾಖೆಯಿಂದ ಸಹಾಯವನ್ನು ಕೋರಿದ್ದರು ಆದರೆ ವ್ಯರ್ಥವಾಯಿತು. ನಮಗೆ ಹಣಕಾಸಿನ ತೊಂದರೆಯಾಗಿ ಕೊನೆಗೆ ಅವರಿಗೆ ಚಿಕಿತ್ಸೆ ಮತ್ತು ಔಷಧಿಗಳನ್ನು ನಿಲ್ಲಿಸಬೇಕಾಗಿತ್ತು ಎಂದು ಚೆಲುವಮ್ಮ ಅವರ ಪುತ್ರಿ ಲಕ್ಷ್ಮಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಗ್ ತಿಳಿಸಿದ್ದಾರೆ.
ಹಣದ ಕೊರತೆಯಿಂದಾಗಿ ಚೆಲುವಮ್ಮನನ್ನು ಖಾಸಗಿ ಆಸ್ಪತ್ರೆಯಿಂದ ಸರ್ಕಾರಿ ಸ್ಥಳಾಂತರಿಸಲಾಗಿತ್ತು. ಆದರೆ ವಿಧಿ ಮಾರನೇ ದಿನವೇ ಅವರು ಮೃತಪಟ್ಟಿದ್ದಾರೆ. ನಮ್ಮ ನೆರೆಹೊರೆಯ ಮಹಿಳೆಯರು ಇಂತಹ ಆರೋಗ್ಯ ಸಮಸ್ಯೆಗಳಿಗಾಗಿ ನಮ್ಮ ತಾಯಿ ಮೇಲೆ ಅವಲಂಬಿತರಾಗಿದ್ದರು. ಆದರೆ ಕೊನೆಗೆ ನನ್ನ ತಾಯಿ ಅದರಿಂದಾಗಿ ಸತ್ತರು ಎಂದು ಲಕ್ಷ್ಮಿ ಹೇಳುತ್ತಾರೆ.
ನಮ್ಮ ತಾಯಿಯ ದುಡಿಮೆ ಮೇಲೆ ಕುಟುಂಬವು ನಿಂತಿತ್ತು. ಆದರೆ ಈಗ ಅವರ ಮೃತಪಟ್ಟಿರುವುದು ಕುಟಂಬಕ್ಕೆ ದೊಡ್ಡ ಸಂಕಷ್ಟ ತಂದಿಟ್ಟಿದೆ.