ಡಿಕೆಶಿ, ಸಿಡಿ ಗ್ಯಾಂಗ್ ನಮ್ಮ ಮಗಳಿಂದ ಒತ್ತಾಯ ಪೂರ್ವಕ ಹೇಳಿಕೆ ಕೊಡಿಸುತ್ತಿದೆ: ಸಿಡಿ ಯುವತಿಯ ಪೋಷಕರು

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿಡಿ ಗ್ಯಾಂಗ್ ನಮ್ಮ ಮಗಳಿಂದ ಒತ್ತಾಯ ಪೂರ್ವಕವಾಗಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಎಂದು ಸಿಡಿ ಯುವತಿಯ ಪೋಷಕರು ಆರೋಪಿಸಿದ್ದಾರೆ.

Published: 29th March 2021 03:54 PM  |   Last Updated: 29th March 2021 03:54 PM   |  A+A-


CD Lady Parents

ಸಿಡಿ ಯುವತಿ ಪೋಷಕರು

Online Desk

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿಡಿ ಗ್ಯಾಂಗ್ ನಮ್ಮ ಮಗಳಿಂದ ಒತ್ತಾಯ ಪೂರ್ವಕವಾಗಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಎಂದು ಸಿಡಿ ಯುವತಿಯ ಪೋಷಕರು ಆರೋಪಿಸಿದ್ದಾರೆ. 

ಇಂದು ಸಿಡಿ ಯುವತಿ ಪ್ರತ್ಯಕ್ಷ ಆಗುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಡಿ ಯುವತಿ ಪೋಷಕರು, ನಮ್ಮ ಮಗಳು ಒತ್ತಡಲ್ಲಿದ್ದು, ಈ ಸಂದರ್ಭದಲ್ಲಿ ಆಕೆಯ ಹೇಳಿಕೆಗಳನ್ನು ಪರಿಗಣಿಸಬಾರದು. ಮಗಳಿಗೆ ಕೌನ್ಸಲಿಂಗ್ ಅಗತ್ಯವಿದೆ. ಕೌನ್ಸಲಿಂಗ್ ನಂತರವೇ ಆಕೆಯ ಹೇಳಿಕೆಯನ್ನು ಪೊಲೀಸರು ಮತ್ತು ನ್ಯಾಯಧೀಶರು ದಾಖಲಿಸಿಕೊಳ್ಳಬೇಕು ಎಂದು ಯುವತಿ ತಂದೆ ಮನವಿ ಮಾಡಿದ್ದಾರೆ. 

ನಮ್ಮ ಮಗಳು ಯಾವ ಪರಿಸ್ಥಿತಿಯಲ್ಲಿದ್ದಾಳೋ ಎಂಬುದು ನಮಗೆ ತಿಳಿಯುತ್ತಿಲ್ಲ. ಹೀಗಾಗಿ ಮಗಳನ್ನು ನಮ್ಮ ವಶಕ್ಕೆ ನೀಡಬೇಕು ಎಂದು ಕೇಳಿಕೊಂಡರು. ಅಲ್ಲದೆ ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ಡಿವೈಎಸ್ ಪಿ ಕಟ್ಟಮನಿ ನಮಗೆ ಒತ್ತಡ ಹಾಕಿಲ್ಲ. ನಾವು ಮನಃಪೂರ್ವಕವಾಗಿ ಎಸ್ಐಟಿ ಮುಂದೆ ಹೇಳಿಕೆ ದಾಖಲಿಸಿದ್ದೇವೆ ಎಂದರು. 

ಇದೇ ವೇಳೆ ಮಾತನಾಡಿದ ಸಿಡಿ ಯುವತಿಯ ತಾಯಿ, ನಮ್ಮ ಮಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಜೊತೆ ಇರುವುದಕ್ಕೆ ಇಚ್ಛಿಸಿದ್ರೆ ಆಕೆಯನ್ನು ಕರೆದುಕೊಳ್ಳುತ್ತೇವೆ. ಏನೇ ಆದರೂ ಆಕೆ ನನ್ನ ಮಗಳು . ಆಕೆಯ ಕೈಯಲ್ಲಿ ಬಲವಂತವಾಗಿ ಹೇಳಿಕೆಗಳನ್ನು ಕೊಡಿಸಲಾಗುತ್ತಿದೆ ಎಂದು ಹೇಳಿದರು. 

ಇನ್ನು ಸಿಡಿ ಯುವತಿ ಸಹೋದರ ಸಹ ಮಾತನಾಡಿ, ಲೀಕ್ ಆಗಿರುವ ಆಡಿಯೋ ಕ್ಲಿಪ್ ನಿಜ. ಅದು ಹೇಗೆ ಹೊರ ಬಂತು ಗೊತ್ತಿಲ್ಲ. ಪ್ರಸ್ತುತ ನಾವು ಪೊಲೀಸರ ಭದ್ರತೆಯಲ್ಲಿ ಸುರಕ್ಷವಾಗಿದ್ದೇವೆ. ಇದಕ್ಕೆಲ್ಲಾ ಡಿಕೆ ಶಿವಕುಮಾರ್ ನೇರ ಕಾರಣ. ಅವರ ಕೊಟ್ಟ ಹಣದಿಂದಲೇ ನನ್ನ ಸೋದರಿ ಗೋವಾದತ್ತ ಹೋಗುತ್ತಿರುವುದಾಗಿ ಹೇಳಿದ್ದಳು. ಇದೆಲ್ಲಾ ಆಡಿಯೋದಲ್ಲಿ ಎಂದರು.


Stay up to date on all the latest ರಾಜ್ಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp