
ರೇಪ್
ಹಾಸನ: ಹಾಸನದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ.
ಶನಿವಾರ ಅವೇಳೆಯಲ್ಲಿ ಈ ಘಟನೆ ನಡೆದಿದೆ. ಬಸ್ ನಿಲ್ದಾಣದಲ್ಲಿ ತನ್ನ ಪೋಷಕರೊಂದಿಗೆ ಮೈಸೂರಿಗೆ ತೆರಳುವುದಕ್ಕಾಗಿ ಬೆಳಿಗ್ಗಿನ ಬಸ್ ಕಾಯುತ್ತಿದ್ದಾಗ, ಪೋಷಕರು ನಿದ್ರೆಗೆ ಜಾರಿದ್ದಾರೆ. ಇದೇ ಸಮಯದಲ್ಲಿ ವ್ಯಕ್ತಿಯೋರ್ವ ಬಾಲಕಿಯನ್ನು ಯಾರೂ ಇಲ್ಲದ ಪ್ರದೇಶಕ್ಕೆ ಹೊತ್ತೊಯ್ದು ಅತ್ಯಾಚಾರವೆಸಗಿ ಹತ್ತಿರದಲ್ಲೇ ಇದ್ದ ಪೊದೆಯಲ್ಲಿ ಎಸೆದು ಹೋಗಿದ್ದಾನೆ.
ಪೊಲೀಸ್ ಠಾಣೆಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಘಟನೆಗೂ ಮುನ್ನ ಈ ಕುಟುಂಬವನ್ನು ವ್ಯಕ್ತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಎಂದು ತಿಳಿದುಬಂದಿದೆ.
ಸ್ಥಳೀಯರು ಪೊದೆಯಿಂದ ಧ್ವನಿ ಕೇಳಿಬರುತ್ತಿದ್ದನ್ನು ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರು ಸಂಸ್ರಸ್ತೆಯನ್ನು ಚಿಕಿತ್ಸೆಗಾಗಿ ಹಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅತ್ಯಾಚಾರದ ಘಟನೆ ಸರ್ಕ್ಯೂಟ್ ಕ್ಯಾಮರಾದಲ್ಲಿ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಶೀಘ್ರವೇ ತಪ್ಪಿತಸ್ಥನನ್ನು ಬಂಂಧಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.