ಒಂದು ವಾರದಲ್ಲಿ ಸಾರಿಗೆ ನೌಕರರ ವೇತನ ಹೆಚ್ಚಳ ನಿರ್ಧಾರ ಪ್ರಕಟ: ಲಕ್ಷ್ಮಣ್ ಸವದಿ

ಆರನೇ ವೇತನ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ವೇತನ ಹೆಚ್ಚಳ ಮಾಡುವಂತೆ ಸಾರಿಗೆ ನಿಗಮ (ಆರ್‌ಟಿಸಿ) ನೌಕರರ ಬೇಡಿಕೆ ಕುರಿತು ಸರ್ಕಾರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸೋಮವಾರ ಹೇಳಿದ್ದಾರೆ.

Published: 30th March 2021 08:35 AM  |   Last Updated: 30th March 2021 08:35 AM   |  A+A-


ಲಕ್ಷ್ಮಣ್ ಸವದಿ

Posted By : Raghavendra Adiga
Source : The New Indian Express

ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ವೇತನ ಹೆಚ್ಚಳ ಮಾಡುವಂತೆ ಸಾರಿಗೆ ನಿಗಮ (ಆರ್‌ಟಿಸಿ) ನೌಕರರ ಬೇಡಿಕೆ ಕುರಿತು ಸರ್ಕಾರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸೋಮವಾರ ಹೇಳಿದ್ದಾರೆ. ಇದೇ ವೇಳೆ ಏಪ್ರಿಲ್ 7 ರಂದು ತಮ್ಮ ಉದ್ದೇಶಿತ ಮುಷ್ಕರವನ್ನು ರದ್ದುಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.

ಸೋಮವಾರ, ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಉಪ ಮುಖ್ಯಮಂತ್ರಿಯಾಗಿರುವ ಸವದಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೌಕರರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ನೌಕರರು ಮುಷ್ಕರ ನಡೆಸಿದ್ದರೆ ಸಾರ್ವಜನಿಕರಿಗಾಗುವ ಅನಾನುಕೂಲತೆ ತಪ್ಪಿಸಲು ಕ್ರಮ ತೆಗೆದುಕೊಳ್ಲಲಾಗುವುದು, ಮುಷ್ಕರವು ಕೋವಿಡ್ -19 ರ ಕಾರಣದಿಂದಾಗಿ ಈಗಾಗಲೇ ಕಷ್ಟಗಳನ್ನು ಎದುರಿಸುತ್ತಿರುವ ಜನರಿಗೆ ಅನಾನುಕೂಲತೆಯನ್ನುಂಟು ಮಾಡುತ್ತದೆ ಎಂದು ಸಭೆಯ ನಂತರ ಸವದಿ ಹೇಳಿದರು. ಮುಷ್ಕರವು ನಿಗಮಗಳ ಆದಾಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ನಿಗಮಗಳ ಹಿರಿಯ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳೊಂದಿಗೆ ಅವರು ಹಲವಾರು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದ ಸವದಿ . ಹಣಕಾಸಿನ ಕುರಿತ ವಿಶ್ಲೇಷಿಸಿದ ನಂತರ ಒಂದು ವಾರದೊಳಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. "ನಾವು ನೌಕರರ ಕಲ್ಯಾಣಕ್ಕೆ ಬದ್ದವಾಗಿದ್ದೇವೆ.ವೇತನ ಪರಿಷ್ಕರಣೆ ಬಗ್ಗೆ ಸರ್ಕಾರ ನಿರ್ಧರಿಸಿದಾಗಲೆಲ್ಲಾ, ಇದು 2020 ರ ಜನವರಿಯಿಂದ ಹಿಂದಿನ ಅವಧಿಯ ಅಂಶವನ್ನು ಅವಲಂಬಿಸಿದೆಅದರ ಆಧಾರದ ಮೇಲೆ ನೌಕರರಿಗೆ ಬಾಕಿ ವೇತನ ಲಭಿಸಲಿದೆ." ಎಂದು ಅವರು ಹೇಳಿದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಒಂಬತ್ತು ಬೇಡಿಕೆಗಳಲ್ಲಿ ಎಂಟನ್ನು ರಾಜ್ಯ ಸರ್ಕಾರ ಈಡೇರಿಸಿದೆ ಎಂದು ಸವದಿ ಹೇಳಿದರು. ಮತ್ತೆ ಮುಷ್ಕರ ನಡೆಸದಂತೆ ನೌಕರರನ್ನು ಮನವೊಲಿಸುವ ಪ್ರಯತ್ನಗಳನ್ನು ಮಾಡುತ್ತಿರುವಂತೆಯೇ, ಸರ್ಕಾರವು ಇತರ ಪರ್ಯಾಯ ವ್ಯವಸ್ಥೆಗಳನ್ನು ಸಹ ಮಾಡುತ್ತಿದೆ. "1,500 ಖಾಸಗಿ ಬಸ್ಸುಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಟೆಂಡರ್ ಕರೆಯಲಾಗಿದೆ. ಲಾಕ್ ಡೌನ್ ಸಮಯದಲ್ಲಿ ಅನೇಕ ಖಾಸಗಿ ನಿರ್ವಾಹಕರು ತಮ್ಮ ಪರವಾನಗಿಗಳನ್ನು ಒಪ್ಪಿಸಿದ್ದರು. ಈಗ, ನೌಕರರು ಮುಷ್ಕರ ನಡೆಸಿದರೆ , ಆ ದಿನಗಳಲ್ಲಿ ಸೇವೆಗಳನ್ನು ನೀಡಲು ಖಾಸಗಿ ನಿರ್ವಾಹಕರಿಗೆ ಉಚಿತ ಪರವಾನಗಿ ನೀಡಲಾಗುವುದು, ”ಎಂದು ಅವರು ಹೇಳಿದರು.


Stay up to date on all the latest ರಾಜ್ಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp