ಉಡುಪಿಯಲ್ಲಿ ಕಾರು ಅಪಘಾತ: ಮಹಿಳೆ ಸಾವು; ಚಾಲಕ, ನಾಲ್ವರು ಮಕ್ಕಳಿಗೆ ಗಾಯ
ಕುಂದಾಪುರ ಸಮೀಪದ ಹೆಮ್ಮಾಡಿಯರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರಿನ ಚಾಲಕನು ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ನಂತರ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದು ನಾಲ್ವರು ಮಕ್ಕಳಿಗೆ ಸಣ್ಣ ಪುಟ್ತ ಗಾಯಗಳಾಗಿದೆ
Published: 30th March 2021 09:41 AM | Last Updated: 30th March 2021 12:44 PM | A+A A-

ಕಾರು ಅಪಘಾತದ ದೃಶ್ಯ
ಕುಂದಾಪುರ: ಕುಂದಾಪುರ ಸಮೀಪದ ಹೆಮ್ಮಾಡಿಯರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರಿನ ಚಾಲಕನು ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ನಂತರ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದು ನಾಲ್ವರು ಮಕ್ಕಳಿಗೆ ಸಣ್ಣ ಪುಟ್ತ ಗಾಯಗಳಾಗಿದೆ. ಸೋಮವಾರ ಸಂಜೆ ಈ ಅಪಘಾತ ಸಂಬವಿಸಿದೆ.
ಕೆಮ್ಮಣ್ಣು ಹೂಡೆ ಮೂಲದ ಸಿಬ್ಗತ್ ಉಲ್ಲಾ ಅವರ ಪತ್ನಿ ಸುಹಾನಾ (30) ಮೃತ ಮಹಿಳೆ.
ಕಾರು ಚಾಲನೆ ಮಾಡುತ್ತಿದ್ದ ಸಿಬ್ಗತ್ ಉಲ್ಲಾ ಮತ್ತು ಕಾರಿನಲ್ಲಿದ್ದ ಮಕ್ಕಳಾದ ಸಾಹಿಮ್, ಸಿದ್ರಾ, ಮಾನ್ಹಾ ಮತ್ತು ಮರಿಯಮ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಇವರೆಲ್ಲಾ ಒಂದೇ ಕುಟುಂಬದವರಾಗಿದ್ದು ಭಟ್ಕಳದಿಂದ ಅವರ ಊರಿಗೆ ಹಿಂತಿರುಗುತ್ತಿದ್ದರು.ಕಾರು ಪಲ್ಟಿಯಾಗುತ್ತಿದ್ದಂತೆ, ಸುಹಾನಾಗೆ ಗಂಭೀರ ಗಾಯಗಳಾಗಿದ್ದು, ಇದು ಅವರ ಶೀಘ್ರ ಸಾವಿಗೆ ಕಾರಣವಾಗಿದೆ.
ಘಟನೆ ಸಂಬಂಧ ಸ್ಥಳೀಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.