ರಾಜ್ಯದ 5 ಸರ್ಕಾರಿ ಶಾಲೆಗಳಿಗೆ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಹೊಸ ರೂಪ!

ಅಕ್ಷರ ಯೋಜನೆ ಅಡಿಯಲ್ಲಿ ದತ್ತು ಪಡೆದುಕೊಂಡಿದ್ದ ರಾಜ್ಯದ 5 ಶಾಲೆಗಳಿಗೆ ಮೌಂಟ್ ಕಾರ್ಮೆಲ್ ಕಾಲೇಜು ಹೊಸ ರೂಪ ನೀಡಲಿದೆ.

Published: 31st March 2021 01:19 PM  |   Last Updated: 31st March 2021 01:25 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ಅಕ್ಷರ ಯೋಜನೆ ಅಡಿಯಲ್ಲಿ ದತ್ತು ಪಡೆದುಕೊಂಡಿದ್ದ ರಾಜ್ಯದ 5 ಶಾಲೆಗಳಿಗೆ ಮೌಂಟ್ ಕಾರ್ಮೆಲ್ ಕಾಲೇಜು ಹೊಸ ರೂಪ ನೀಡಲಿದೆ.

ಕಳೆದ ಜನವರಿ ತಿಂಗಳಿನಲ್ಲಿ ರಾಜ್ಯದ ಎಂಎಸ್ಆರ್ ಪಾಳ್ಯ, ಗಂಧನಹಳ್ಳಿ, ಒಪಿಹೆಚ್ ರಸ್ತೆ, ಜೀವನಹಳ್ಳಿ ಮತ್ತು ರಾಮಸ್ವಾಮಿಪಾಳ್ಯದಲ್ಲಿನ ಸರ್ಕಾರಿ ಶಾಲೆಗಳನ್ನು ಮೌಂಟ್ ಕಾರ್ಮೆಲ್ ಕಾಲೇಜು (ಎಂಸಿಸಿ) ದತ್ತು ಪಡೆದುಕೊಂಡಿತ್ತು.

ಇದರಂತೆ ಐದು ಶಾಲೆಗಳಿಗೆ ಹೊಸ ರೂಪ ನೀಡಲು ಮುಂದಾಗಿರುವ ಎಂಸಿಸಿ ಅಧಿಕಾರಿಗಳು ನಿನ್ನೆಯಷ್ಟೇ ಎಂಎಸ್ಆರ್ ಪಾಳ್ಯದಲ್ಲಿರುವ ಸರ್ಕಾರಿ ಶಾಲೆಗೆ, ನೀರಿನ ವ್ಯವಸ್ಥೆ, ಕಂಪ್ಯೂಟಲ್ ಲ್ಯಾಬ್, ಗ್ರಂಥಾಲಯ ಹಾಗೂ ಕ್ರೀಡಾ ಕೊಠಡಿಯನ್ನು ಸ್ಥಾಪಿಸಿ್ದಾರೆ. ಇದಲ್ಲದೆ ಶಾಲಾ ಕಟ್ಟಡ ಕೆಲ ಭಾಗಗಳನ್ನು ಪುನರ್ ನಿರ್ಮಾಣ ಮಾಡುವ ಕಾರ್ಯವನ್ನೂ ಆರಂಭಿಸಿದ್ದಾರೆ.

ಇನ್ನುಳಿದ ನಾಲ್ಕು ಶಾಲೆಗಳಲ್ಲೂ ಇದೇ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸುವ, ಹೊಸ ರೂಪ ನೀಡುವ ಕೆಲಸ ಮಾಡಲಾಗುತ್ತಿದೆ. ಆಧರೆ, ಪ್ರಸ್ತುತ ನಾವು ಶಾಲೆಯಲ್ಲಿನ ಶಿಕ್ಷಕರು ಹಾಗೂ ಮಕ್ಕಳಲ್ಲಿ ಕೌಶಲ್ಯ ಹೆಚ್ಚಿಸುವ ಕೆಲಸ ಮಾಡುತ್ತಿದ್ದೇವೆಂದು ಕಾಲೇಜಿನ ಸಾಮಾಜಿಕ ಜವಾಬ್ದಾರಿ ವಿಭಾಗ ಸಂಯೋಜಕರಾದ ರಜನಿ ಕೊರಾಹ್ ಅವರು ಹೇಳಿದ್ದಾರೆ.

ಶಾಲೆಯಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಕೆಲಸವನ್ನೂ ಮಾಡಲಾಗುತ್ತಿದೆ. 7ನೇ ತರಗತಿ ಮಕ್ಕಳ ಐಕ್ಯೂ ಪರೀಕ್ಷೆ ಮಾಡಲು ಚಿಂತನೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp