ನಿಂಬೆ ರಸದ ಬಗ್ಗೆ ವದಂತಿ: ಉದ್ಯಮಿ ವಿಜಯ ಸಂಕೇಶ್ವರ ವಿರುದ್ಧ ದೂರು

ಮೂಗಿಗೆ ನಿಂಬೆ ರಸ ಬಿಟ್ಟುಕೊಳ್ಳುವ ಮೂಲಕ ದೇಹದ ಆಮ್ಲಜನಕ ಪ್ರಮಾಣ ಹೆಚ್ಚುತದೆ, ಉಸಿರಾಟ ಸರಾಗವಾಗುತ್ತದೆ  ಎಂಬ ಉದ್ಯಮಿ ವಿಜಯ ಸಂಕೇಶ್ವರ ಅವರ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ.  ರಾಯಚೂರಿನಲ್ಲಿ ಓರ್ವ ಶಿಕ್ಷಕ ಮೂಗಿಗೆ ಲಿಂಬೆ ರಸ ಬಿಟ್ಟುಕೊಂಡ ನಂತರ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಇದರ ಹಿನ್ನೆಲೆ ಸಧ್ಯ ವಿಜಯ ಸಂಕೇಶ್ವರ ಅವರ ವಿರುದ್ಧ ದೂರು ದಾಖಲಾಗಿದೆ.
ವಿಜಯ ಸಂಕೇಶ್ವರ
ವಿಜಯ ಸಂಕೇಶ್ವರ

ಬೆಳಗಾವಿ: ಮೂಗಿಗೆ ನಿಂಬೆ ರಸ ಬಿಟ್ಟುಕೊಳ್ಳುವ ಮೂಲಕ ದೇಹದ ಆಮ್ಲಜನಕ ಪ್ರಮಾಣ ಹೆಚ್ಚುತದೆ, ಉಸಿರಾಟ ಸರಾಗವಾಗುತ್ತದೆ  ಎಂಬ ಉದ್ಯಮಿ ವಿಜಯ ಸಂಕೇಶ್ವರ ಅವರ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ.  ರಾಯಚೂರಿನಲ್ಲಿ ಓರ್ವ ಶಿಕ್ಷಕ ಮೂಗಿಗೆ ನಿಂಬೆ ರಸ ಬಿಟ್ಟುಕೊಂಡ ನಂತರ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಇದರ ಹಿನ್ನೆಲೆ ಸಧ್ಯ ವಿಜಯ ಸಂಕೇಶ್ವರ ಅವರ ವಿರುದ್ಧ ದೂರು ದಾಖಲಾಗಿದೆ.

ಬೆಳಗಾವಿ ಅಥಣಿಯ ಆರ್.ಟಿ.ಐ ಕಾರ್ಯಕರ್ತ, ವಕೀಲ ಭೀಮನಗೌಡ ಜಿ ಪರಗೋಡ  ವಿಜಯ ಸಂಕೇಶ್ವರ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಕುಮಾರ್, ಧಾರವಾಡ ಜಿಲ್ಲಾಧಿಕಾರಿ ಮತ್ತು ರಾಯಚೂರು ಜಿಲ್ಲಾಧಿಕಾರಿ, ಸಿಂಧನೂರು ತಾಲೂಕು ದಂಡಾಧಿಕಾರಿಗಳಲ್ಲಿ ದೂರು ದಾಖಲು ಮಾಡಲಾಗಿದೆ.

ಕೋವಿಡ್ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಹೇಳಿಕೆ ನೀಡಿದ್ದ ಉದ್ಯಮಿ, ವಿ.ಆರ್.ಎಲ್. ಸಂಸ್ಥೆಯ ಸಿ.ಎಮ್.ಡಿ ವಿಜಯ ಸಂಕೇಶ್ವರ ಅವರ ವಿರುದ್ಧ ದೂರು ನೀಡಿರುವುದಾಗಿ ಭೀಮನಗೌಡ ಹೇಳಿದ್ದಾರೆ.

<strong>ದೂರಿನ ಪ್ರತಿ</strong>
ದೂರಿನ ಪ್ರತಿ

ಮೂರು ಪುಟಗಳ ಸುದೀರ್ಘ ದೂರು ದಾಖಲಿಸಲಾಗಿದ್ದು "ದಿನಾಂಕ: 28-01-2021ರಂದು ವಿಜಯ ಸಂಕೇಶ್ವರ ಅವರು ಕೋವಿಡ್ ನಿಯಂತ್ರಣದ  ಸುಲಭ ಉಪಾಯವೆಂದರೆ ನಿಂಬೆ ಹಣ್ಣಿನ ರಸವನ್ನು ಮೂಗಿನ ಎರಡು ಹೊಳ್ಳೆಗಳಲ್ಲಿ ಹಾಕಿಕೊಳ್ಳುವುದು, ಇದರಿಂದ ಬೇಗನೇ ಗುಣಮುಖವಾಗಲಿದ್ದೀರಿ, ಆಸ್ಪತ್ರೆಗೆ ಅಲೆದಾತ ತಪ್ಪಲಿದೆ ಎಂದು ಸಲಹೆ ನೀಡಿದ್ದರು. ಈ ಹೇಳಿಕೆ ಶೀಘ್ರದಲ್ಲೇ ವೈರಲ್ ಆಗಿತ್ತು. ಈ ಹೇಳಿಕೆಯ ಬಳಿಕ ರಾಯಚೂರ ಜಿಲ್ಲೆಯ ಸಿಂದನೂರ ಪಟ್ಟಣದ ನಟರಾಜ ಕಾಲನಿಯ ಶಿಕ್ಷಕ ಬಸವರಾಜ ಎನ್ನುವವರು ಸಂಕೇಶ್ವರ ಅವರ ಸಲಹೆ ಪಾಲಿಸಿನಿಂಬೆ ಹಣ್ಣಿನ ರಸ ತಮ್ಮ ಎರಡು ಮೂಗಿನ ಹೊಳ್ಳೆಗಳಲ್ಲಿ ಹಾಕಿಕೊಂಡಿದ್ದರಿಂದ ಎರಡು ಬಾರಿ ವಾಂತಿ ಮಾಡಿಕೊಂಡಿದ್ದಾರೆ ಬಳಿಕ ನೆಲಕ್ಕೆ ಕುಸಿದು ಬಿದ್ದು ಆಸ್ಪತ್ರೆಗೆ ಕರೆದೊಯ್ದರೂ  ಬದುಕುಳಿಯಲಿಲ್ಲ" ಎಂದಿದೆ.

ಇನ್ನು ಮೃತ ಶಿಕ್ಷಕ ಬಸವರಾಜ ಅವರಿಗೆ  ರೂ. 50,00,000/- ರೂ.ಗಳ ಪರಿಹಾರಧನ ನೀಡಬೇಕು ಮತ್ತು ಈ ಘಟನೆಯನ್ನು ಕೊಲೆಗೆ ಪ್ರಚೋದನೆ ಎಂದು ಪರಿಗಣಿಸಿ ಮಾನ್ಯ ಸಂಕೇಶ್ವರ ಅವರ ಮೇಲೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ.  ಐ.ಪಿ.ಸಿ ಕಲಂ 306 ಮತ್ತು ಕೋವಿಡ್-19 ಸಾಂಕ್ರಮಿಕ ರೋಗ ತಡೆಗಟ್ಟುವ ಅಧಿನಿಯಮದ ಅನ್ವಯ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬೇಕು , ಈ ಕೂಡಲೆ ತಾವುಗಳು (ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ, ತಾಲೂಕು ದಂಡಾಧಿಕಾರಿಗಳು) ಕಾರ್ಯತತ್ಪರರಾಗಿ ಜನರನ್ನು ದಿಕ್ಕು ತಪ್ಪಿಸುವ, ಕೋವಿಡ್-19 ಸಾಂಕ್ರಮಿಕ ಉಲ್ಬಣಕ್ಕೆ ಕಾರಣವಾಗುವ ಇಂತವರ (ವಿಜಯ ಸಂಕೇಶ‍್ವರ) ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.  ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com