ಪಬ್ಲಿಕ್ ಟಿವಿ ಆ್ಯಂಕರ್ ಅರುಣ್ ಬಡಿಗೇರ ತಂದೆ-ತಾಯಿ ಕೊರೋನಾಗೆ ಬಲಿ!
ದೇಶದಲ್ಲಿ ಕೊರೋನಾ ಎರಡನೇ ಅಲೆ ತನ್ನ ರೌದ್ರನರ್ತನ ಮುಂದುವರೆಸಿದೆ. ಇನ್ನು ದಿನಕ್ಕೆ 3500ಕ್ಕೂ ಹೆಚ್ಚು ಜನರು ಮೃತಪಡುತ್ತಿದ್ದಾರೆ. ಈ ಮಧ್ಯೆ ಪಬ್ಲಿಕ್ ಟಿವಿ ಆ್ಯಂಕರ್ ಅರುಣ್ ಬಡಿಗೇರ ಅವರ ತಂದೆ ಮತ್ತು ತಾಯಿ ಇಬ್ಬರೂ ಸೋಂಕಿಗೆ ಬಲಿಯಾಗಿದ್ದಾರೆ.
Published: 01st May 2021 03:20 PM | Last Updated: 01st May 2021 03:20 PM | A+A A-

ಅರುಣ್ ಬಡಿಗೇರ ಪೋಷಕರು
ಧಾರವಾಡ: ದೇಶದಲ್ಲಿ ಕೊರೋನಾ ಎರಡನೇ ಅಲೆ ತನ್ನ ರೌದ್ರನರ್ತನ ಮುಂದುವರೆಸಿದೆ. ಇನ್ನು ದಿನಕ್ಕೆ 3500ಕ್ಕೂ ಹೆಚ್ಚು ಜನರು ಮೃತಪಡುತ್ತಿದ್ದಾರೆ. ಈ ಮಧ್ಯೆ ಪಬ್ಲಿಕ್ ಟಿವಿ ಆ್ಯಂಕರ್ ಅರುಣ್ ಬಡಿಗೇರ ಅವರ ತಂದೆ ಮತ್ತು ತಾಯಿ ಇಬ್ಬರೂ ಸೋಂಕಿಗೆ ಬಲಿಯಾಗಿದ್ದಾರೆ.
ಅರುಣ್ ಬಡಿಗೇರ ಅವರ ತಾಯಿ ಕಸ್ತೂರಮ್ಮ ಬಡಿಗೇರ ಅವರು ಮೂರು ದಿನಗಳ ಹಿಂದೆ ಕೊರೋನಾಗೆ ಬಲಿಯಾಗಿದ್ದರು. ಇದೀಗ ಅವರ ತಂದೆ 68 ವರ್ಷದ ಚಂದ್ರಶೇಖರ ಬಡಿಗೇರ ಅವರು ನಿನ್ನೆ ಕೊರೋನಾಗೆ ಬಲಿಯಾಗಿದ್ದಾರೆ.
ಕೊರೋನಾಗೆ ತುತ್ತಾಗಿದ್ದ ಚಂದ್ರಶೇಖರ್ ಬಡಿಗೇರ ಅವರನ್ನು ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ.
ರಾಜ್ಯದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ನಿನ್ನೆ ಬರೋಬ್ಬರಿ 48 ಸಾವಿರಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ಬಂದಿತ್ತು. ಅಲ್ಲದೆ 24 ಗಂಟೆಯಲ್ಲಿ 217 ಮಂದಿ ಸೋಂಕಿಗೆ ಬಲಿಯಾಗಿದ್ದರು.