ಬೆಳಗಾವಿ: ಸತ್ತನೆಂದು ಘೋಷಿಸಿ ಮೃತದೇಹ ಕೊಟ್ಟ ಆಸ್ಪತ್ರೆ, ಅಂತ್ಯಸಂಸ್ಕಾರ ನಂತರ ಬಯಲಾಯ್ತು ಸತ್ಯ!

ಇನ್ನೂ ಬದುಕಿದ್ದ ಕೋವಿಡ್ -19 ರೋಗಿಯೊಬ್ಬನನ್ನು ಮೃತಪಟ್ಟರೆಂದು ಘೋಷಿಸಿದ್ದಲ್ಲದೆ ಇನ್ನೊಬ್ಬ ವ್ಯಕ್ತಿಯ ಶವವನ್ನು ಅವರ ಸಂಬಂಧಿಗಳಿಗೆ ಹಸ್ತಾಂತರಿಸುವ ಮೂಲಕ ಬೆಳಗಾವಿ ಖಾಸಗಿ ಆಸ್ಪತ್ರೆಯೊಂದು ದೊಡ್ಡ ಎಡವಟ್ಟಿಗೆ ಸಾಕ್ಷಿಯಾಗಿದೆ.
ಖಾಸಗಿ ಆಸ್ಪತ್ರೆಯ ವೈದ್ಯರು ತಪ್ಪಿಗೆ ರೋಗಿಯ ಸಂಬಂಧಿಕರ ಬಳಿ ಕ್ಷಮೆಯಾಚಿಸಿದ್ದಾರೆ
ಖಾಸಗಿ ಆಸ್ಪತ್ರೆಯ ವೈದ್ಯರು ತಪ್ಪಿಗೆ ರೋಗಿಯ ಸಂಬಂಧಿಕರ ಬಳಿ ಕ್ಷಮೆಯಾಚಿಸಿದ್ದಾರೆ

ಬೆಳಗಾವಿ: ಇನ್ನೂ ಬದುಕಿದ್ದ ಕೋವಿಡ್ -19 ರೋಗಿಯೊಬ್ಬನನ್ನು ಮೃತಪಟ್ಟರೆಂದು ಘೋಷಿಸಿದ್ದಲ್ಲದೆ ಇನ್ನೊಬ್ಬ ವ್ಯಕ್ತಿಯ ಶವವನ್ನು ಅವರ ಸಂಬಂಧಿಗಳಿಗೆ ಹಸ್ತಾಂತರಿಸುವ ಮೂಲಕ ಬೆಳಗಾವಿ ಖಾಸಗಿ ಆಸ್ಪತ್ರೆಯೊಂದು ದೊಡ್ಡ ಎಡವಟ್ಟಿಗೆ ಸಾಕ್ಷಿಯಾಗಿದೆ.

ಅಥಣಿ ತಾಲ್ಲೂಕಿನ ಮೋಲೆ ಗ್ರಾಮದ ಪಯಪ್ಪ ಸತ್ಯಪ್ಪ ಹಲಗಲಿ ಅವರನ್ನು ಕೋವಿಡ್ -19 ಚಿಕಿತ್ಸೆಗಾಗಿ ಮೇ 1 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಬೆಳಿಗ್ಗೆ ಆಸ್ಪತ್ರೆಯು ಅವರು ಮೃತಪಟ್ಟರೆಂದು ಘೋಷಿಸಿದೆ. ಅಲ್ಲದೆ ಸೀಲ್ ಮಾಡಿದ್ದ ಮೃತದೇಹವನ್ನು ಅಲ್ಲಿಗೆ ಆಗಮಿಸಿದ್ದ ರಕ್ತಸಂಬಂಧಿಗಳಿಗೆ ಹಸ್ತಾಂತರಿಸಿತು.

ದೇಹವನ್ನು ಸುತ್ತಿದ್ದ ಬಟ್ಟೆಯನ್ನೇ ತೆರೆಯದೆ ಮತ್ತು ಸತ್ತವರ ಗುರುತನ್ನು ದೃಢಪಡಿಸಿಕೊಳ್ಳದೆ ಶೋಕತಪ್ತ ಕುಟುಂಬ ಸದಸ್ಯರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸರ್ಕಾರ ಸೂಚಿಸಿದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಶವವನ್ನು ಅಂತ್ಯಸಂಸ್ಕಾರ ಮಾಡಿದೆ.

ಭಾನುವಾರ ಸಂಜೆ ದಹನ ಮಾಡಿದ ಕೆಲವು ಗಂಟೆಗಳ ನಂತರ, ಅವರ ಕುಟುಂಬಕ್ಕೆ ರೋಗಿಯಿಂದ ಅಚ್ಚರಿಯೆಂಬಂತೆ ಕರೆ ಬಂದಿದೆ. ಇದೀಗ ಗ್ರಾಮಸ್ಥರಿಂದ ಇದು ಟೀಕೆಗೆ ಗುರಿಯಾಗಿದೆ. ಆಸ್ಪತ್ರೆಯ ಸಿಬ್ಬಂದಿಗಳು ತಪ್ಪಾಗಿ ಬೇರೆ ವ್ಯಕ್ತಿಯ ಶವವನ್ನು ನೀಡುವ ಮೂಲಕ ಕುಟುಂಬಗಳ ಭಾವನೆಗಳೊಂದಿಗೆ ಆಟವಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನಂತರ, ಮೃತನ ಮಗ ಗ್ರಾಮಕ್ಕೆ ಭೇಟಿ ನೀಡಿ ಚಿತಾಭಸ್ಮದಂತಾ ಅವಶೇಷಗಳನ್ನು ಪಡೆಯಲು ಆಗಮಿಸಿದ್ದಾಗ ಕಾಗವಾಡದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಅಥಣಿಯ ತಹಶೀಲ್ದಾರ್ ಡಿಎಸ್ಪಿ ಎಸ್.ಜಿ.ಗಿರೀಶ್ ಅವರ ಸಮ್ಮುಖದಲ್ಲಿ ಮೃತರ ಅವಶೇಷಗಳನ್ನು ನಿಜವಾದ ರಕ್ತಸಂಬಂಧಿಗಳಿಗೆ ಹಸ್ತಾಂತರಿಸಲಾಯಿತು’.

ಇಬ್ಬರೂ ರೋಗಿಗಳು ಒಂದೇ ಹೆಸರಿನವರಾಗಿದ್ದರಿಂದ ಅವರನ್ನು ಒಂದೇ ದಿನಾಂಕದಂದು ದಾಖಲಿಸಿದ್ದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ವರದಿಯಾಗಿದೆ. ಮೃತರು ಬೆಳಗಾವಿಯ ಹಿರಿಯ ಪತ್ರಕರ್ತರೆಂದು ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com