ಸರ್ಕಾರದ ನಿರ್ಲಕ್ಷ್ಯ, ಅವ್ಯವಸ್ಥೆಯಿಂದ ಕೋವಿಡ್ ಸೋಂಕಿತರು ಸಾವು: ಕಾಂಗ್ರೆಸ್ ಟೀಕೆ

ಸರ್ಕಾರದ ನಿರ್ಲಕ್ಷ್ಯ ಮತ್ತು ಅವ್ಯವಸ್ಥೆಯಿಂದ ಕೋವಿಡ್-19 ಸೋಂಕಿತರು ಸಾವನ್ನಪ್ಪುತ್ತಿರುವುದಾಗಿ ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸರ್ಕಾರದ ನಿರ್ಲಕ್ಷ್ಯ ಮತ್ತು ಅವ್ಯವಸ್ಥೆಯಿಂದ ಕೋವಿಡ್-19 ಸೋಂಕಿತರು ಸಾವನ್ನಪ್ಪುತ್ತಿರುವುದಾಗಿ ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಕೊರೋನಾದ ಪ್ರಭಾವದಿಂದ ಸೋಂಕಿತರು ಸಾಯುತ್ತಿಲ್ಲ. ಬದಲಿಗೆ ಸರ್ಕಾರದ ನಿರ್ಲಕ್ಷ್ಯ ಮತ್ತು ಅವ್ಯವಸ್ಥೆಯಿಂದ ಸಾಯುತ್ತಿದ್ದಾರೆ. ಹಾಗಾಗಿ ಇವೆಲ್ಲವೂ ಬಿಜೆಪಿ ಸರ್ಕಾರ ನಡೆಸುತ್ತಿರುವ ಮಾರಣ ಹೋಮ ಎನ್ನಬಹುದು ಎಂದು ಟೀಕಿಸಿದೆ.

ಈ ಸರ್ಕಾರಕ್ಕೆ ಎಚ್ಚರಿಕೆ ಮಾತುಗಳು ಹಾಗೂ ಸಲಹೆಗಳು, ಕೋಣದ ಮುಂದೆ ಕಿನ್ನೂರಿ ನುಡಿಸಿದಂತೆ, ಅಕ್ಸಿಜನ್ ,ಬೆಡ್, ವೆಂಟಿಲೇಟರ್ ಗಳ ಕೊರತೆಯ ಕೂಗು ಕೇಳಿಬರುತ್ತಾ ಒಂದು ತಿಂಗಳಾಯಿತು ಆದರೂ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳದೆ ಲಾಕ್ ಡೌನ್ ಒಂದೇ ಕೊರೋನಾಗೆ ಮದ್ದು ಎಂದು ನಂಬಿ ಕುಳಿತಂತಿದೆ. ಸರ್ಕಾರಕ್ಕೆ ಜೀವವಿಲ್ಲದ ಕಾರಣ ಜನರ ಜೀವ ಹೋಗುತ್ತಿದೆ ಎಂದು ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com