ಚಾಮರಾಜನಗರ ಕೊರೋನಾ ರೋಗಿಗಳ ಸಾವಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರತಿಷ್ಠೆ ಕಾರಣ?

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ಕೊರೋನಾ ರೋಗಿಗಳ ಸಾವನ್ನಪ್ಪಿರುವುದಕ್ಕೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರತಿಷ್ಠೆ ಮಾಡಲು ಹೋಗಿ ಕೊರೋನಾ ರೋಗಿಗಳ ಸಾವಿಗೆ ರೋಹಿಣಿ ಸಿಂಧೂರಿ  ಕಾರಣರಾದ್ರಾ ಎಂಬ ಆರೋಪವೂ ಕೇಳಿಬರುತ್ತಿದೆ.
ಮೈಸೂರು ಡಿಸಿ ರೋಹಿಣಿ ಸಿಂಧೂರಿ
ಮೈಸೂರು ಡಿಸಿ ರೋಹಿಣಿ ಸಿಂಧೂರಿ

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ಕೊರೋನಾ ರೋಗಿಗಳ ಸಾವನ್ನಪ್ಪಿರುವುದಕ್ಕೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರತಿಷ್ಠೆ ಮಾಡಲು ಹೋಗಿ ಕೊರೋನಾ ರೋಗಿಗಳ ಸಾವಿಗೆ ರೋಹಿಣಿ ಸಿಂಧೂರಿ  ಕಾರಣರಾದ್ರಾ ಎಂಬ ಆರೋಪವೂ ಕೇಳಿಬರುತ್ತಿದೆ.

ಚಾಮರಾಜನಗರ ಜಿಲ್ಲೆಗೆ ಪ್ರತಿನಿತ್ಯ ಮೈಸೂರಿನ ಸದರನ್ ಗ್ಯಾಸ್ ಏಜೆನ್ಸಿ ಮೂಲಕ ಆಮ್ಲಜನಕ ಪೂರೈಕೆಯಾಗುತಿತ್ತು. ಚಾಮರಾಜನಗರ ಜಿಲ್ಲಾಸ್ಪತ್ರೆಗೆ 280 ಜಂಬೂ ಸಿಲಿಂಡರ್ ಆಮ್ಲಜನಕದ ಅವಶ್ಯಕತೆ ಇದೆ.

ಕಳೆದ ಶುಕ್ರವಾರ ನಡೆದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ನಲ್ಲಿ ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಿಗೆ ಮೈಸೂರಿನಿಂದ ಆಮ್ಲಜನಕ ಪೂರೈಸುವ ಜವಾಬ್ದಾರಿಯವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಿದ್ದರು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸೂಚನೆಗೂ ಕ್ಯಾರೆ ಎನ್ನದ ಮೈಸೂರು ಜಿಲ್ಲಾಧಿಕಾರಿ, ಆಮ್ಲಜನಕ ನೀಡಿದರೆ ಗ್ಯಾಸ್ ಏಜೆನ್ಸಿ ವಿರುದ್ಧ
ಕೇಸ್ ಹಾಕುವ ಎಚ್ಚರಿಕೆ ನೀಡಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮಾತಿಗೆ ಹೆದರಿ ಗ್ಯಾಸ್ ಏಜೆನ್ಸಿಯವರು ಆಮ್ಲಜನಕ ನೀಡಲು ಹಿಂದೇಟು ಹಾಕಿದ್ದಾರೆ. ವಿಷಯ ತಿಳಿದ ಸಂಸದ ಪ್ರತಾಪ್ ಸಿಂಹ, 50 ಜಂಬೂ ಸಿಲಿಂಡರ್ ಆಮ್ಲಜನಕವನ್ನು ಕಳುಹಿಸಿಕೊಟ್ಟಿದ್ದಾರೆ. ಒಂದು ರಾತ್ರಿಗೆ 150 ಜಂಬೂ ಸಿಲಿಂಡರ್ ಗಳ ಅವಶ್ಯಕತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com