ನಗರದಲ್ಲಿ ಕೊರೋನಾ ರೋಗಿಗಳ ಸಾವು ಹೆಚ್ಚಳ: ಚಾಮರಾಜಪೇಟೆ ಸ್ಮಶಾನದ ಮುಂದೆ 'ಹೌಸ್'ಫುಲ್' ಬೋರ್ಡ್!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಉಲ್ಬಣಗೊಳ್ಳುತ್ತಿದ್ದು, ಸಾವು ಹೆಚ್ಚಾಗುತ್ತಿದೆ. ಸ್ಮಶಾನದಲ್ಲಿ ಮೃತದೇಹಗಳು ಭರ್ತಿಯಾಗಿರುವ ಹಿನ್ನಲೆಯೆಲ್ಲಿ ಚಾಮರಾಜಪೇಟೆ ಟಿಆರ್ ಮಿಲ್ ಸ್ಮಶಾನದ ಗೇಟಿನ ಮುಂದೆ ಹೌಸ್ ಫುಲ್ ಫಲಕವನ್ನು ಹಾಕಲಾಗಿದೆ. 
ಸ್ಮಶಾನದ ಗೇಟ್ ನಲ್ಲಿ ಹೌಸ್ ಫುಲ್ ಬೋರ್ಡ್ ಹಾಕಿರುವುದು
ಸ್ಮಶಾನದ ಗೇಟ್ ನಲ್ಲಿ ಹೌಸ್ ಫುಲ್ ಬೋರ್ಡ್ ಹಾಕಿರುವುದು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಉಲ್ಬಣಗೊಳ್ಳುತ್ತಿದ್ದು, ಸಾವು ಹೆಚ್ಚಾಗುತ್ತಿದೆ. ಸ್ಮಶಾನದಲ್ಲಿ ಮೃತದೇಹಗಳು ಭರ್ತಿಯಾಗಿರುವ ಹಿನ್ನಲೆಯೆಲ್ಲಿ ಚಾಮರಾಜಪೇಟೆ ಟಿಆರ್ ಮಿಲ್ ಸ್ಮಶಾನದ ಗೇಟಿನ ಮುಂದೆ ಹೌಸ್ ಫುಲ್ ಫಲಕವನ್ನು ಹಾಕಲಾಗಿದೆ. 

ಭಾನುವಾರ ಸಂಜೆ ವೇಳೆ ಕೋವಿಡ್‍ನಿಂದ ಮೃತರಾದ 45 ಮೃತದೇಹಗಳ ಅಂತ್ಯಕ್ರಿಯೆ ನಡೆದಿದೆ. ಈಗಾಗಲೇ 19 ಮೃತದೇಹಗಳು ದಹನಕ್ಕೆ ಬಂದಿವೆ. ದಿನಕ್ಕೆ 20 ಮೃತದೇಹಗಳ ಅಂತ್ಯಕ್ರಿಯೆಗೆ ಇಲ್ಲಿ ಅವಕಾಶವಿದೆ. ಹೀಗಾಗಿ, ಸಿಬ್ಬಂದಿಗಳು ಈ ಫಲಕವನ್ನು ಹಾಕಲೇಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ. 

ಆರಂಭದಲ್ಲಿ ಹೌಸ್ ಫುಲ್ ಫಲಕವನ್ನು ಹಾಕಲಾಗಿತ್ತು. ನಂತರ ಸ್ಥಳೀಯರು ಪ್ರಶ್ನೆ ಮಾಡಲು ಆರಂಭಿಸಿದ ಬಳಿಕ ಫಲಕವನ್ನು ತೆಗೆದು ಹಾಕಲಾಗಿತ್ತು ಎಂದು ಸ್ಥಳೀಯ ನಿವಾಸಿ ಗಣೇಶ್ ಎಂಬುವವರು ಹೇಳಇ್ದದಾರೆ. 

ಮೇಡಿ ಅಗ್ರಹಾರದಲ್ಲಿರುವ ಬಿಬಿಎಂಪಿ ಸ್ಮಶಾನ, ಸುಮನಹಳ್ಳಿ ಸ್ಮಶಾನ, ಚಾಮರಾಜಪೇಟೆ ಸ್ಮಶಾನ, ವಿಲ್ನಸ್ ಗಾರ್ಡನ್ ಸ್ಮಶಾನ, ಹೆಬ್ಬಾಳ ಸ್ಮಶಾನಗಳಲ್ಲಿ ಪ್ರತೀನಿತ್ಯ 20ಕ್ಕೂ ಹೆಚ್ಚು ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com