ಕೋವಿಡ್ ಬಿಕ್ಕಟ್ಟು: ಮೈಸೂರಿನಲ್ಲಿಯೂ ಆಮ್ಲಜನಕದ ವ್ಯಾಪಕ ಕೊರತೆ!

ಚಾಮರಾಜನರ ಮತ್ತು ಮಂಡ್ಯದಲ್ಲಿ ಆಮ್ಲಜನಕ ಕೊರತೆ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಎಲ್ಲರ ಗಮನ ಸದ್ಯ ಮೈಸೂರಿನ ಮೇಲೆ ನೆಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು:  ಚಾಮರಾಜನರ ಮತ್ತು ಮಂಡ್ಯದಲ್ಲಿ ಆಮ್ಲಜನಕ ಕೊರತೆ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಎಲ್ಲರ ಗಮನ ಸದ್ಯ ಮೈಸೂರಿನ ಮೇಲೆ ನೆಟ್ಟಿದೆ.

ಮೈಸೂರಿನಲ್ಲಿಯೂ ಸದ್ಯ ಆಮ್ಲಜನಕ ಕೊರತೆ ಸೃಷ್ಟಿಯಾಗಿದೆ. ಪ್ರತಿದಿನ ಸುಮಾರು 2,000 ಕೇಸ್ ಗಳು ಪತ್ತೆಯಾಗುತ್ತಿವೆ,  ಆಮ್ಲಜನಕ ಕೊರತೆ ಉಸಿರಾಟದ ತೊಂದರೆಯಿಂದಾಗಿ ಹೆಚ್ಚಿನ ರೋಗಿಗಲು ಆಕ್ಸಿಜನ್ ಬೆಡ್ ಕೇಳುತ್ತಾರೆ, ಹೀಗಾಗಿ ಅಭಾವ ತಲೆದೋರುತ್ತಿದೆ.

ಚಾಮರಾಜನಗರದಲ್ಲಿ 24 ಗಂಟೆಗಳಲ್ಲಿ 24 ಮಂದಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ಧಾರೆ. ಚಾಮರಾಜನಗರದಿಂದ ಆಕ್ಸಿಜನ್ 180 ಸಿಲಿಂಡರ್‌ಗೆ ಬೇಡಿಕೆ ಬಂದಾಗ ನಾವು ಕೂಡಲೇ 140 ಸಿಲಿಂಡರ್ ಕೊಟ್ಟಿದ್ದೇವೆ. ಮೈಸೂರಿನಿಂದ ನೆರವು ಕೊಟ್ಟಿಲ್ಲ ಎಂಬ ಭಾವನೆ ಬೇಡ. ಕೋವಿಡ್ ಮೊದಲ ಅಲೆ ಬಂದಾಗ ನಾವು ಮೈಸೂರಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡೆವು. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಯಾಕೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ' ಮೈಸೂರು ಸಂಸದ ಪ್ರತಾಪ್ ಸಿಂಹ  ಹೇಳಿದ್ಧಾರೆ.

ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಆಕ್ಸಿಜನ್ ಕೊರತೆ ತಲೆದೋರುತ್ತಿದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಬೇಡಿಕೆ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯಲ್ಲಿ ಆಮ್ಲಜನಕದ ಲಭ್ಯತೆ ಕ್ರಮೇಣ ಕಡಿಮೆಯಾಗುತ್ತಿದೆ. ಏಪ್ರಿಲ್ 30 ರಂದು ಮೈಸೂರು 967 (47 ಲೀಟರ್ ಸಾಮರ್ಥ್ಯದ ಜಂಬೊ ಸಿಲಿಂಡರ್), 409 ( 10 ಲೀಟರ್ ಸಾಮರ್ಥ್ಯ), 30 (1.1 ಲೀಟರ್ ಸಾಮರ್ಥ್ಯ) ಮತ್ತು 57 ಡುರಾ ಸಿಲಿಂಡರ್‌ಗಳು (200 ಲೀಟರ್ ದ್ರವ ವೈದ್ಯಕೀಯ ಆಮ್ಲಜನಕ) ಇದ್ದವು.  ಆದರೆ ಮೇ 2 ರ ಸಂಜೆ 7 ರ ವೇಳೆಗೆ ಈ ಸಂಖ್ಯೆ ಕ್ಕೆ
ಇಳಿದಿದೆ. 689 (47 ಲೀಟರ್  ಸಾಮರ್ಥ್ಯದ ಜಂಬೊ ಸಿಲಿಂಡರ್), 318 (10 ಲೀಟರ್ ಸಾಮರ್ಥ್ಯ), 56 (1.1 ಲೀಟರ್ ಸಾಮರ್ಥ್ಯ) ಮತ್ತು 56 ಡುರಾ ಸಿಲಿಂಡರ್‌ಗಳು (200 ಲೀಟರ್  ದ್ರವ ವೈದ್ಯಕೀಯ ಆಮ್ಲಜನಕ) ಗಳು ಲಭ್ಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com