ಚಾಮರಾಜನಗರ ಜಿಲ್ಲಾಸ್ಪತ್ರೆಗೆ ತನಿಖಾಧಿಕಾರಿ ಶಿವಯೋಗಿ ಕಳಸದ್ ಭೇಟಿ, ಮಾಹಿತಿ ಸಂಗ್ರಹ

24 ರೋಗಿಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಚಾಮರಾಜನಗರದ  ಜಿಲ್ಲಾಸ್ಪತ್ರೆಗೆ ಸರ್ಕಾರ ನೇಮಿಸಿರುವ ತನಿಖಾಧಿಕಾರಿ ಶಿವಯೋಗಿ ಕಳಸದ್ ಇಂದು ಭೇಟಿ ನೀಡಿದ್ದಾರೆ.
Enquiry officer Kalasad
Enquiry officer Kalasad

ಚಾಮರಾಜನಗರ: 24 ರೋಗಿಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಸರ್ಕಾರ ನೇಮಿಸಿರುವ ತನಿಖಾಧಿಕಾರಿ ಶಿವಯೋಗಿ ಕಳಸದ್ ಇಂದು ಭೇಟಿ ನೀಡಿದ್ದಾರೆ.

ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶಿವಯೋಗಿ ಕಳಸದ್ ಇಂದಿನಿಂದಲೇ ತನಿಖೆ ಪ್ರಾರಂಭಿಸಿದ್ದು, ಜಿಲ್ಲಾಸ್ಪತ್ರೆಯಲ್ಲಿನ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತಿತರರು ಆಸ್ಪತ್ರೆಯಲ್ಲಿ ಹಾಜರಿದ್ದರು.

ಆಕ್ಸಿಜನ್ ಪ್ಲಾಂಟ್ ಆಸ್ಪತ್ರೆಯ ಕೊವಿಡ್ ಸೆಂಟರ್ ಗಳ ಬಗ್ಗೆ ಪರಿಶೀಲನೆ ನಡೆಸಿದ ತನಿಖಾಧಿಕಾರಿ, ಆಸ್ಪತ್ರೆಗೆ ಬಂದಿದ್ದ ಕೆಲ ರೋಗಿಗಳ ಜತೆ ಸಮಾಲೋಚಿಸಿ ಧೈರ್ಯ ಹೇಳಿದರು.

ಆಕ್ಸಿಜನ್ ದುರಂತಕ್ಕೆ ನೈಜ ಕಾರಣವೇನು, ಎಷ್ಟು ಮಂದಿ  ಸೋಂಕಿತರು ಆಮ್ಲಜನಕ ಕೊರತೆಯಿಂದ ಅಸುನೀಗಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಅವಘಡಕ್ಕೆ ಹೊಣೆ ಯಾರು ಹೊರಬೇಕು, ಆಸ್ಪತ್ರೆ ಸಿಬ್ಬಂದಿ ಹಾಗೂ ಜಿಲ್ಲಾಡಳಿತ
ಸಿಬ್ಬಂದಿ ವೈಫಲ್ಯದ ಕುರಿತು ಕಳಸದ್ ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com