ಕೊರೋನಾ ಸೋಂಕಿತ ವೈದ್ಯರಿಗಾಗಿ ಹಾಸಿಗೆ ಮೀಸಲಿಡಿ: ಭಾರತೀಯ ವೈದ್ಯ ಸಂಘ

ಕೊರೋನಾ ವಿರುದ್ಧ ಹಗಲಿರುಳು ಹೋರಾಟ ನಡೆಸುತ್ತಿರುವ ಕೋವಿಡ್ ವಾರಿಯರ್ಸ್ ಗೆ ಅಗತ್ಯವಾದ ವೈದ್ಯಕೀಯ ಸೌಲಭ್ಯ ನೀಡಬೇಕು ಎಂದು ಐಎಂಎ ಕೋರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ವಿರುದ್ಧ ಹಗಲಿರುಳು ಹೋರಾಟ ನಡೆಸುತ್ತಿರುವ ಕೋವಿಡ್ ವಾರಿಯರ್ಸ್ ಗೆ ಅಗತ್ಯವಾದ ವೈದ್ಯಕೀಯ ಸೌಲಭ್ಯ ನೀಡಬೇಕು ಎಂದು ಐಎಂಎ ಕೋರಿದೆ.

ನಗರದ ವಕೀಲರು ಮತ್ತು ಅವರ ಕುಟುಂಬಗಳಿಗೆ ಅಗತ್ಯ ವೈದ್ಯಕೀ ಸೌಲಭ್ಯ ಸಿಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಬಿಬಿಎಂಪಿ ನೋಡಲ್ ಅಧಿಕಾರಿ ನೇಮಿಸಿದೆ, ಆದರೆ ವೈದ್ಯರು ಮತ್ತು ನರ್ಸ್ ಗಳು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಈ ಸೌಲಭ್ಯ ನೀಡಿಲ್ಲ .

ಹಾಗಾಗಿ ಕೋರೋನಾ ಪಾಸಿಟಿವ್ ತಗುಲಿರುವ ವೈದ್ಯರಿಗೆ ಹಾಸಿಗೆ ಮೀಸಲಿಡಬೇಕು ಐಎಂಎ ಕರ್ನಾಟಕ ಶಾಖೆ ಬಿಬಿಎಂಪಿಗೆ ಮನವಿ ಮಾಡಿದ.

ಕೊರೋನಾ ಸಮಯದಲ್ಲಿ ವೈದ್ಯರ ಜೀವನ ಅಪಾಯದಲ್ಲಿದೆ.ಅವರಿಗೆ ಕೋವಿಡ್ ಪಾಸಿಟಿವ್ ಬಂದಾಗ ಅವರೆಲ್ಲಾ ಹಾಸಿಗೆಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಐಎಂಎ ಬೆಂಗಳೂರು ಸಾರ್ವಜನಿಕ  ಸಂಪರ್ಕ ಅಧಿಕಾರಿ ಡಾ. ಶ್ರೀನಿವಾಸ್ ಹೇಳಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯು ವೈದ್ಯರಿಗಾಗಿ 10 ಹಾಸಿಗೆ ಮೀಸಲಿಡಬೇಕು ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಐಎಂಎ ರಾಜ್ಯ ಕಾರ್ಯ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ. ಐಎಂಎ ಅಂದಾಜಿನ ಪ್ರಕಾರ, ಮೊದಲ ಅಲೆಯಲ್ಲಿ ರಾಜ್ಯಾದ್ಯಂತ ವೈದ್ಯರ 60 ಕೋವಿಡ್ ಸಾವುಗಳು ಮತ್ತು ಎರಡನೇ ಅಲೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ.

ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಹಾಸಿಗೆಗಳು ಸಿಗದ ಕಾರಣ ನಾವು ಕೆಲವು ವೈದ್ಯರನ್ನು ಕೋವಿಡ್‌ಗೆ ಕಳೆದುಕೊಂಡಿದ್ದೇವೆ. ಇತ್ತೀಚೆಗೆ, ರಾಜ್ಯ ರಾಜಧಾನಿಯಲ್ಲಿ ಮೂವರು ಸಾವನ್ನಪ್ಪಿದರು, ಅದರಲ್ಲಿ ಒಬ್ಬ ವೈದ್ಯರು ಕೆಲವು ದಿನಗಳಿಂದ ಹಾಸಿಗೆಯನ್ನು ಹುಡುಕುತ್ತಿದ್ದರು. ಸಮಯಕ್ಕೆ ಹಾಸಿಗೆಗಳು ಮತ್ತು ಆಮ್ಲಜನಕವನ್ನು ಕಂಡುಕೊಂಡರೆ ಅನೇಕ ಆರೋಗ್ಯ ಕಾರ್ಯಕರ್ತರು ಬದುಕುಳಿಯಬಹುದಿತ್ತು ಎಂದು ಐಎಂಎ ಉಪಾಧ್ಯಕ್ಷೆ ಅನುರಾಧ ಪರಮೇಶ್ ತಿಳಿಸಿದ್ದಾರೆ.

ಏಪ್ರಿಲ್ 28 ರಂದು ಡಾ. ಶ್ರೀನಿವಾಸ ಅವರು ಸಾಗರ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಮತ್ತು ಬೆಂಗಳೂರಿನ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಗೆ ಪತ್ರ ಬರೆದು ವೈದ್ಯರಿಗೆ ಹಾಸಿಗೆಗಳನ್ನು ಕಾಯ್ದಿರಿಸುವಂತೆ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com