ಐಎಎಫ್ ನಿಂದ ಜಾಲಹಳ್ಳಿಯಲ್ಲಿ 100 ಬೆಡ್ ಗಳ ಕೋವಿಡ್-19 ಕೇರ್ ಸೆಂಟರ್ ಸ್ಥಾಪನೆ

ಭಾರತೀಯ ವಾಯುಪಡೆ ( ಐಎಎಫ್) 100 ಬೆಡ್ ಗಳ ಕೋವಿಡ್-19 ಕೇರ್ ಕೇಂದ್ರವನ್ನು ಜಾಲಹಳ್ಳಿಯಲ್ಲಿ ತೆರೆಯುವುದಕ್ಕೆ ನಿರ್ಧರಿಸಿದೆ. 
100 ಬೆಡ್ ಗಳ ಕೋವಿಡ್-19 ಕೇರ್ ಕೇಂದ್ರವನ್ನು ಸ್ಥಾಪಿಸಲಿರುವ ಐಎಎಫ್
100 ಬೆಡ್ ಗಳ ಕೋವಿಡ್-19 ಕೇರ್ ಕೇಂದ್ರವನ್ನು ಸ್ಥಾಪಿಸಲಿರುವ ಐಎಎಫ್

ಬೆಂಗಳೂರು: ಭಾರತೀಯ ವಾಯುಪಡೆ (ಐಎಎಫ್) 100 ಬೆಡ್ ಗಳ ಕೋವಿಡ್-19 ಕೇರ್ ಕೇಂದ್ರವನ್ನು ಜಾಲಹಳ್ಳಿಯಲ್ಲಿ ತೆರೆಯುವುದಕ್ಕೆ ನಿರ್ಧರಿಸಿದೆ. 

ಪ್ರಾರಂಭಿಕ ಹಂತದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಹೊಂದಿರುವ 20 ಬೆಡ್ ಗಳು ಮೇ.6 ರಿಂದ  ಕಾರ್ಯಾರಂಭ ಮಾಡಲಿದ್ದು, ರಾಜ್ಯ ಸರ್ಕಾರದಿಂದ ಆಕ್ಸಿಜನ್ ಲಭ್ಯತೆಯನ್ನು ಖಾತರಿಪಡಿಸಿಕೊಂಡು ಉಳಿದ 80 ಬೆಡ್ ಗಳು ಮೇ.20 ರ ವೇಳೆಗೆ ಕಾರ್ಯನಿರ್ವಹಣೆ ಮಾಡಲಿವೆ.

100 ಬೆಡ್ ಗಳ ಪೈಕಿ 10 ಐಸಿಯು ಬೆಡ್ ಗಳು ಹಾಗೂ 40 ಬೆಡ್ ಗಳು ಪೈಪ್ಡ್ ಆಕ್ಸಿಜನ್ ಗಳನ್ನು ಹೊಂದಿರಲಿದ್ದು, ಉಳಿದ 50 ಬೆಡ್ ಗಳು ಆಕ್ಸಿಜನ್ ಕಾನ್ಸಂಟ್ರೇಟರ್ಸ್ ನ್ನು ಹೊಂದಿರಲಿವೆ ಎಂದು ಬೆಂಗಳೂರಿನಲ್ಲಿರುವ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಕಮಾಂಡ್ ಆಸ್ಪತ್ರೆ ವಾಯುಪಡೆಯಿಂದ ಒದಗಿಸಲಾದ ತಜ್ಞರು, ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಂದ ಈ ಕೇಂದ್ರ ಕಾರ್ಯನಿರ್ವಹಣೆ ಮಾಡಲಿದೆ. 

ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ನೋಡಲ್ ಅಧಿಕಾರಿಗಳ ಮೂಲಕ ಸಮನ್ವಯದ ಮೂಲಕ ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com