ಐಪಿಎಲ್ ಪಂದ್ಯಾವಳಿ ರದ್ದು: ಕಾಂಗ್ರೆಸ್ ಎಂಎಲ್ ಸಿ ಪ್ರಕಾಶ್ ರಾಥೋಡ್ ಸಂತಸ

ಐಪಿಎಲ್ ಪಂದ್ಯಾವಳಿಯನ್ನು ರದ್ಧು ಪಡಿಸಿರುವುದು ನ್ಯಾಯ ಸಮ್ಮತವಾಗಿದೆ ಎಂದು ಕಾಂಗ್ರೆಸ್ ಎಂಎಲ್ ಸಿ ಪ್ರಕಾಶ್ ರಾಥೋಡ್ ಸಂತಸ ವ್ಯಕ್ತ ಪಡಿಸಿದ್ದಾರೆ
ಪ್ರಕಾಶ್ ರಾಥೋಡ್
ಪ್ರಕಾಶ್ ರಾಥೋಡ್

ಬೆಂಗಳೂರು: ಐಪಿಎಲ್ ಪಂದ್ಯಾವಳಿಯನ್ನು ರದ್ಧು ಪಡಿಸಿರುವುದು ನ್ಯಾಯ ಸಮ್ಮತವಾಗಿದೆ ಎಂದು ಕಾಂಗ್ರೆಸ್ ಎಂಎಲ್ ಸಿ ಪ್ರಕಾಶ್ ರಾಥೋಡ್ ಸಂತಸ ವ್ಯಕ್ತ ಪಡಿಸಿದ್ದಾರೆ.

ಜಗತ್ತಿನಾದ್ಯಂತ ಕೊರೋನಾ ಸೋಂಕಿನ ರುದ್ರ ನರ್ತನ ನಡೆಯುತ್ತಿದೆ, ಪರಿಸ್ಥಿತಿ ಹೀಗಿರುವಾಗ ಐಪಿಎಲ್ ಪಂದ್ಯದ ಅವಶ್ಯಕತೆಯಿಲ್ಲ, ಐಪಿಎಲ್ ಪಂದ್ಯಾವಳಿಯನ್ನು ರದ್ದುಪಡಿಸುವಂತೆ ಕೋರಿ ಏಪ್ರಿಲ್ 27 ರಂದು ಪ್ರಕಾಶ್ ರಾಥೋಡ್ ಪತ್ರ ಬರೆದಿದ್ದರು.

ಆದರೆ ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರೋಧ ವ್ಯಕ್ತ ಪಡಿಸಿದ್ದರು. ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಉಂಟಾಗುತ್ತದೆ ಎಂದು ಶಿವಕುಮಾರ್ ಹೇಳಿದ್ದರು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಕೂಡ ಏಪ್ರಿಲ್ 26 ರಿಂದ ಐಪಿಎಲ್ ಪಂದ್ಯ ಕುರಿತ ಯಾವುದೇ ಸುದ್ದಿಯನ್ನು ಪ್ರಕಟಿಸದಿರಲು ನಿರ್ಧರಿಸಿತ್ತು.

ಇಡೀ ಜಗತ್ತೆ ಕೊರೋನಾ ಸೋಂಕಿನಿಂದ ನಲುಗುತ್ತಿರುವಾಗ ಐಪಿಎಲ್ ಪಂದ್ಯದ ಅವಶ್ಯಕತೆಯಿದೆಯೇ? ಕ್ರಿಕೆಟ್ ಗಾಗಿ ಸ್ಟೇಡಿಯಂ ಬಿಡುವ ಬದಲು ಅದನ್ನು ಆಸ್ಪತ್ರೆಯಾಗಿ ಪರಿವರ್ತಿಸಿ ಕೋವಿಡ್ ಕೇರ್ ಸೆಂಟರ್ ಮಾಡಬಾರದೇಕೆ ಎಂದು ಪ್ರಕಾಶ್ ರಾಥೋಡ್ ಪ್ರಶ್ನಿಸಿದ್ದರು. ಆದರೆ ನಿನ್ನೆ ಬಿಸಿಸಿಐ ಐಪಿಎಲ್ ಪಂದ್ಯ ರದ್ದುಗೊಳಿಸಿದ್ದಕ್ಕೆ ಪ್ರಕಾಶ್ ರಾಥೋಡ್ ಸಂತಸ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com