ಟೋಕನ್ ವ್ಯವಸ್ಥೆಯಿಂದ ಬೆಡ್ ಬ್ಲಾಕಿಂಗ್ ಅಕ್ರಮ ತಡೆಯಬಹುದು: ತಜ್ಞರ ಅಭಿಪ್ರಾಯ

ಕೋವಿಡ್ ಸೋಂಕಿನಿಂದ ತಲೆದೋರಿರುವ ಹಾಸಿಗೆ ಸಮಸ್ಯೆಯನ್ನು ಬಗೆಹರಿಸಲು ಬೆಂಗಳೂರಿನಲ್ಲಿ ಕ್ಯೂ ವ್ಯವಸ್ಥೆ ಅಥವಾ ಟೋಕನ್ ವ್ಯವಸ್ಥೆಯನ್ನು ಶೀಘ್ರದಲ್ಲೇ   ಪರಿಚಯಿಸಲಾಗುವುದು.
ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್
ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್

ಬೆಂಗಳೂರು: ಕೋವಿಡ್ ಸೋಂಕಿನಿಂದ ತಲೆದೋರಿರುವ ಹಾಸಿಗೆ ಸಮಸ್ಯೆಯನ್ನು ಬಗೆಹರಿಸಲು ಬೆಂಗಳೂರಿನಲ್ಲಿ ಕ್ಯೂ ವ್ಯವಸ್ಥೆ ಅಥವಾ ಟೋಕನ್ ವ್ಯವಸ್ಥೆಯನ್ನು ಶೀಘ್ರದಲ್ಲೇ   ಪರಿಚಯಿಸಲಾಗುವುದು. ಇದು ಎಲ್ಲಾ ಭಾಗಗಳಿಂದಲೂ ದೊಡ್ಡ ಬೇಡಿಕೆಯಾಗಿದ್ದು, ಇದನ್ನು ರಾಜ್ಯ ಸರ್ಕಾರ ಕೂಡ ಅಂಗೀಕರಿಸಲಿದೆ,

ಕೋವಿಡ್ -19 ಗಿಂತ ಸೋಂಕಿತರಿಗೆ ಹಾಸಿಗೆ, ಆಮ್ಲಜನಕ ಮತ್ತು ಐಸಿಯು ಬೆಡ್ ಮುಂತಾದವುಗಳನ್ನು ವ್ಯವಸ್ಥೆ ಮಾಡುವುದೇ ದೊಡ್ಡಸವಾಲಾಗಿದೆ.  ವ್ಯವಸ್ಥೆಯನ್ನು ನಿರ್ಣಯಿಸುವ ಕೆಲವು ಅಧಿಕಾರಿಗಳು ಮತ್ತು ಹಾಸಿಗೆ ಹಂಚಿಕೆ ವೈಪರೀತ್ಯಗಳನ್ನು ಪರಿಶೀಲಿಸುವ ಸಮಿತಿಯ ಭಾಗವಾಗಿರುವ ಸದಸ್ಯರು ಅದನ್ನು ಸರಿಪಡಿಸಲು ಅನೇಕ್ ಸಭೆ ನಡೆಸಿದ್ದಾರೆ,

ಮೊದಲು ಬೆಡ್ ಬುಕ್ ಮಾಡಿದ ವ್ಯಕ್ತಿ ಅದನ್ನು ಬಿಡುತ್ತಾನೆ, ನಂತರ ಕರೆ ಮಾಡುವ ಇನ್ನೊಬ್ಬ ವ್ಯಕ್ತಿಗೆ ಆ ಹಾಸಿಗೆ ಸಿಗುತ್ತದೆ. ಹೀಗಾಗಿ ಬೆಡ್ ಹಂಚಿಕೆಗೆ ಕ್ಯೂ ಸಿಸ್ಟಮ್ ಮಾಡುವ ಪೋರ್ಟಲ್ ಪರಿಚಯಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಎಲ್ಲಾ ಯಂತ್ರಗಳನ್ನು ವೈಟ್ ಲಿಸ್ಟ್ ಮಾಡಲಾಗುವುದು, ಇದಕ್ಕೆ ಬೇರೆ ಐಡಿ, ಪಾಸ್ ವರ್ಡ್ ಯೂಸರ್ ನೇಮ್ ನೀಡಲಾಗುತ್ತದೆ, ಹೀಗೆ ಮಾಡಿದರೇ ನೋಂದಾಯಿತ  ಕಂಪ್ಯೂಟರ್ ಗಳಲ್ಲಿ ಮಾತ್ರ ಬೆಡ್ ಬುಕ್ ಮಾಡಬಹುದಾಗಿದೆ. ಬೇರೆಯವರ ಐಡಿ ಬಳಸಿ ಬೆಡ್ ಬುಕ್ ಮಾಡಲು ಸಾಧ್ಯವಿಲ್ಲ,

ನೋಂದಾಯಿತ ಸಂಖ್ಯೆಗೆ ಓಟಿಪಿ ಬಂದ ನಂತರ ವಷ್ಟೇ ಬೆಡ್ ಬುಕ್ ಆಗಲಿದೆ,  ವೈದ್ಯರು ಅಥವಾ ಬಳಕೆದಾರರ ಹೆಸರಲ್ಲಿ ಬುಕ್ ಆಗಬೇಕಿದೆ ಎಂದು ತಿಳಿಸಿದೆ.

ಇನ್ನೂ ಸಭೆಯಲ್ಲಿ ಡಿಫಾಲ್ಟ್ ಬೆಡ್ ಹಂಚಿಕೆ ಮತ್ತಪ ಕೋವಿಡ್ ಪಾಸಿಟಿವ್ ಬಂದ ಪ್ರತಿ ರೋಗಿ 5ರಿಂದ 10 ಗಂಟೆಗಳ ಕಾಲ ಕಾಯಬೇಕಾಗಿದೆ, ಬಿಯು ಸಂಖ್ಯೆಯನ್ನು ರೋಗಿಗೆ ಕಳುಹಿಸಿ ಬೆಡ್ ಬೇಕೆ ಅಥವಾ ಬೇಡವೇ ಎಂಬುದನ್ನು ಕೇಳಬೇಕು. ರೋಗಿ ತನಗೆ ಬೆಡ್ ಅವಶ್ಯಕತೆ ಇದೆ ಅಥವಾ ಇಲ್ಲ ಎಂದು ಪ್ರಾಮಾಣಿಕವಾಗಿ ಹೇಳಬೇಕಾಗುತ್ತದೆ,  ಅವರಿಗೆ ಬೇಡವಾದರೇ ಅವಶ್ಯಕತೆ ಇರುವವರಿಗೆ ನೀಡಲಾಗುತ್ತದೆ ಎಂದು ಮೂಲಗಳು ವಿವರಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com