ಬೆಂಗಳೂರು: ಆಮ್ಲಜನಕ ಕೊರತೆಯಿಂದ ಆಸ್ಪತ್ರೆಯಲ್ಲಿ ಇಬ್ಬರು ಸಾವು

ನಗರದ ಯಲಹಂಕ ನ್ಯೂಟೌನ್ ಆಸ್ಪತ್ರೆಯಲ್ಲಿ 45 ವರ್ಷದ ಮಹಿಳೆ ಹಾಗೂ 58 ವರ್ಷದ ಕೋವಿಡ್ ರೋಗಿಗಳು ಆಕ್ಜಿಜನ್ ಕೊರತೆಯಿಂದಾಗಿ ಮಂಗಳವಾರ ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ಯಲಹಂಕ ನ್ಯೂಟೌನ್ ಆಸ್ಪತ್ರೆಯಲ್ಲಿ 45 ವರ್ಷದ ಮಹಿಳೆ ಹಾಗೂ 58 ವರ್ಷದ ಕೋವಿಡ್ ರೋಗಿಗಳು ಆಕ್ಜಿಜನ್ ಕೊರತೆಯಿಂದಾಗಿ ಮಂಗಳವಾರ ಸಾವನ್ನಪ್ಪಿದ್ದಾರೆ.

ಸೋಮವಾರ ಸಂಜೆ ಈ ಇಬ್ಬರು ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರು ರೋಗಿಗಳು ಆಸ್ಪತ್ರೆ ತಲುಪುವ ವೇಳೆಗೆ ಅವರ ಸ್ಥಿತಿ ಗಂಭೀರವಾಗಿತ್ತು, ಆಸ್ಪತ್ರೆಗೆ ಸೋಮವಾರ ಆಕ್ಸಿಜನ್ ಬರಬೇಕಿತ್ತು, ಆದರೆ ಬರಲಿಲ್ಲ ಎಂದು ಯಲಹಂಕ ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ಭಾಗ್ಯಲಕ್ಷ್ಮಿ ಹೇಳಿದ್ದಾರೆ.

ಆಸ್ಪತ್ರೆಯ ಮಾರಾಟಗಾರರಾದ ಯೂನಿವರ್ಸಲ್ ಏರ್ ಪ್ರಾಡಕ್ಟ್ಸ್ ಮತ್ತು ಪೈ ಏರ್ ಕಂಪನಿಯು ಆಮ್ಲಜನಕವನ್ನು ಪೂರೈಕೆ ಮಾಡಿರಲಿಲ್ಲ. ಸೋಮವಾರ ಸಂಜೆ ಆಸ್ಪತ್ರೆಗೆ ದಾಖಲಾದ ರೋಗಿಯ ಆಮ್ಲಜನಕದ ಶುದ್ಧತ್ವ ಮಟ್ಟವು 50 ರಷ್ಟಿತ್ತು ಹಾಗೂ ಇನ್ನೊಬ್ಬ ರೋಗಿಯ ಆಮ್ಲಜನಕ ಮಟ್ಟ 40 ಇತ್ತು, ನಂತರ  ನಾವು ಹತ್ತಿರದ ಆಸ್ಪತ್ರೆಗಳಿಂದ ಆಮ್ಲಜನಕವನ್ನು ವ್ಯವಸ್ಥೆಗೊಳಿಸಿದ್ದೇವೆ ಯಲಹಂಕ ವಲಯದ ಜಂಟಿ ಆಯುಕ್ತ ಅಶೋಕ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com