ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹೆಚ್ಚಳ: 6 ದಿನಗಳಲ್ಲಿ 42 ಸಾವು

ಏಪ್ರಿಲ್ ಕೊನೆಯ ವಾರದಿಂದ ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು ಸಾವಿನ ಸಂಖ್ಯೆಯೂ ಏರುಗತಿಯಲ್ಲಿದೆ. 
ಕರ್ಫ್ಯೂ ನಿರ್ಬಂಧ ಸಡಿಲಗೊಂಡಾಗ ಅಗತ್ಯ ವಸ್ತುಗಳ ಖರೀದಿಸುತ್ತಿರುವ ಕೊಡಗು ಜನತೆ
ಕರ್ಫ್ಯೂ ನಿರ್ಬಂಧ ಸಡಿಲಗೊಂಡಾಗ ಅಗತ್ಯ ವಸ್ತುಗಳ ಖರೀದಿಸುತ್ತಿರುವ ಕೊಡಗು ಜನತೆ

ಮಡಿಕೇರಿ: ಏಪ್ರಿಲ್ ಕೊನೆಯ ವಾರದಿಂದ ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು ಸಾವಿನ ಸಂಖ್ಯೆಯೂ ಏರುಗತಿಯಲ್ಲಿದೆ. 

ಜಿಲ್ಲೆಯ ಪರಿಸ್ಥಿತಿ ಸಾರ್ವಜನಿಕರಲ್ಲಿ ಹಾಗೂ ಅಧಿಕಾರಿಗಳಲ್ಲಿ ಆತಂಕ ಮೂಡಿಸುತ್ತಿದ್ದು ಏಪ್ರಿಲ್ ಮೊದಲ 83 ಸಾವಿನ ಪ್ರಕರಣಗಳು ಇದ್ದವು. ಈಗ ತಿಂಗಳಾಂತ್ಯಕ್ಕೆ ಮತ್ತೆ 69 ಸಾವಿನ ಪ್ರಕರಣಗಳು ವರದಿಯಾಗಿವೆ. ಗುರುವಾರದಂದು ಜಿಲ್ಲೆಯಲ್ಲಿ ಕೋವಿಡ್-19 ನಿಂದ 7 ಸಾವು ಸಂಭವಿಸಿದ್ದು ಸಾವಿನ ಒಟ್ಟು ಸಂಖ್ಯೆ 152 ಕ್ಕೆ ಏರಿಕೆಯಾಗಿದೆ. 

"ರೋಗಿಗಳು ಆಸ್ಪತ್ರೆಗೆ ದಾಖಲಾಗುವುದಕ್ಕೆ ತೋರುತ್ತಿರುವ ವಿಳಂಬ ಇದಕ್ಕೆ ಕಾರಣ" ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಹೇಳಿದ್ದಾರೆ. ಮೇ 1 ರಿಂದ ಜಿಲ್ಲೆಯಲ್ಲಿ 42 ಸಾವು ಸಂಭವಿಸಿದ್ದು, ದಿನವೊಂದಕ್ಕೆ ಸರಾಸರಿ 6 ಸಾವು ವರದಿಯಾಗುತ್ತಿದೆ. 

ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ, ಮಡಿಕೇರಿಯಲ್ಲಿರುವ, ಈಗಾಗಲೇ ಸೀಮಿತ ಸಾಮರ್ಥ್ಯ ಹೊಂದಿರುವ ಚಿತಾಗಾರಗಳಲ್ಲಿ ಸಮಸ್ಯೆ ಉಂಟಾಗುತ್ತಿದೆ. ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿರುವುದರಲ್ಲಿ ತೋರುತ್ತಿರುವ ವಿಳಂಬದ ಜೊತೆಗೆ ಕ್ರಿಟಿಕಲ್ ಕೇರ್ ವಿಭಾಗದಲ್ಲಿ ಸಿಬ್ಬಂದಿಯ ಕೊರತೆಯೂ ರೋಗಿಗಳ ಚಿಕಿತ್ಸೆ ಮೇಲೆ ಪರಿಣಾಮ ಬೀರುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com