ಮೈಸೂರಿನಲ್ಲಿ ಹಾಸಿಗೆ ಲಭ್ಯತೆ: ಅಂಕಿ ಅಂಶ ತೋರಿಸೋದೆ ಬೇರೆ; ಸಹಾಯವಾಣಿ ಸಿಬ್ಬಂದಿ ಹೇಳೋದೆ ಬೇರೆ!

ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆ ಬರುತ್ತಿದ್ದಂತೆಯೇ ಮೈಸೂರಿನಲ್ಲಿಯೂ ಅದೇ ರೀತಿಯ ಸಮಸ್ಯೆ ತಲೆದೋರಿದೆ. ಡೇಟಾದಲ್ಲಿ ಹಾಸಿಗೆ ಇದೆ ಎಂದಿದೆ, ಆದರೆ ವಾರ್ ರೂಂ ಸಿಬ್ಬಂದಿಗೆ ಕರೆ ಮಾಡಿದರೇ ಇಲ್ಲ ಎಂಬ ಉತ್ತರ ಸಿದ್ಧವಾಗಿರುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆ ಬರುತ್ತಿದ್ದಂತೆಯೇ ಮೈಸೂರಿನಲ್ಲಿಯೂ ಅದೇ ರೀತಿಯ ಸಮಸ್ಯೆ ತಲೆದೋರಿದೆ. ಡೇಟಾದಲ್ಲಿ ಹಾಸಿಗೆ ಇದೆ ಎಂದಿದೆ, ಆದರೆ ವಾರ್ ರೂಂ ಸಿಬ್ಬಂದಿಗೆ ಕರೆ ಮಾಡಿದರೇ ಇಲ್ಲ ಎಂಬ ಉತ್ತರ ಸಿದ್ಧವಾಗಿರುತ್ತದೆ.

ವಾರ್ ರೂಂ ಸಹಾಯವಾಣಿ 0821-2424111 ಸಂಖ್ಯೆಯನ್ನು ಕಳೆದ ವಾರ ಪ್ರಾರಂಭಿಸಲಾಯಿತು.  ಚಿಕಿತ್ಸೆಯ ಸರದಿ, ಹಾಸಿಗೆ ನಿರ್ವಹಣೆ ಕುರಿತ ಮಾಹಿತಿ ನೀಡುವ ಸಹಾಯವಾಣಿ ಇದಾಗಿದೆ.

ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ರೋಗಿಯ ಸಂಬಂಧಿಕರು ಆಕ್ಸಿಜನ್ ಬೆಡ್ ಬಗ್ಗೆ ಕೇಳಿದರೇ ಯಾವುದೇ ಆಸ್ಪತ್ರೆಯಲ್ಲಿ ಬೆಡ್ ಲಭ್ಯವಿಲ್ಲ ಎಂದು ಸಿಬ್ಬಂದಿ ಹೇಳುತ್ತಾರೆ.

ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಫ್ಯಾಕ್ಟ್ ಚೆಕ್ ಮಾಡಿದೆ, ಆಕ್ಸಿಜನ್ ಬೆಡ್ ಅವಶ್ಯಕತೆಯಿರುವ ರೋಗಿಯ ಮಾಹಿತಿ ತೆಗೆದುಕೊಂಡ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಹಾಯವಾಣಿಗೆ ಕರೆ ಮಾಡಿ, ಹಾಸಿಗೆ ಕೇಳಿದೆ,  ಇದಕ್ಕೆ ಉತ್ತರಿಸಿದ ಸಹಾಯವಾಣಿ ಸಿಬ್ಬಂದಿ ಯಾವುದೇ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿಲ್ಲ ಎಂಬ ಉತ್ತರ ನೀಡಿದೆ. 

ಕೋವಿಡ್ ಕೇರ್ ನಲ್ಲಿದ್ದ ರೋಗಿಯ ಆಮ್ಲಜನಕ ಮಟ್ಟ ಕಡಿಮೆಯಾದ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರು ಆಸ್ಪತ್ರೆಗೆ ಶಿಫ್ಟ್ ಆಗುವಂತೆ ಸೂಚಿಸಿದ್ದಾರೆ, 

ಆದರೆ ಸಹಾಯವಾಣಿ ಸಿಬ್ಬಂದಿ ನೀಡಿದ ಮಾಹಿತಿ ಸುಳ್ಳಾಗಿದೆ, ಡೇಟಾ ಪ್ರಕಾರ ಮಂಗಳವಾರ ಸಂಜೆ 7 ಗಂಟೆವರೆಗೆ 214 ಆಕ್ಸಿಜನ್ ಬೆಡ್ ಗಳು ಖಾಲಿ ಇದ್ದವು ಎಂದು ತೋರಿಸಿದೆ, ಜೊತೆಗೆ 12 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 12 ಎಚ್‌ಎಫ್‌ಎನ್‌ಒ ಹಾಸಿಗೆಗಳು, 12 ಐಸಿಯು ಹಾಸಿಗೆಗಳು ಮತ್ತು ಏಳು ವೆಂಟಿಲೇಟರ್ ಹಾಸಿಗೆಗಳು ಖಾಲಿ ಇವೆ ಎಂದು ತಿಳಿಸಿದೆ.

ಡೇಟಾ ಮಾಹಿತಿ ಆಧರಿಸಿ ಐದು ಖಾಸಿ ಆಸ್ಪತ್ರೆಗೆ ಕರೆ ಮಾಡಿ ಹಾಸಿಗೆ ಬಗ್ಗೆ ವಿಚಾರಿಸಲಾಯಿತು,  ಯಾವ ಆಸ್ಪತ್ರೆಗೆ ಕರೆ ಮಾಡಿದರೂ ಒಂದೇ ಒಂದು ಆಕ್ಸಿಜನ್ ಬೆಡ್ ಇಲ್ಲ ಎಂಬ ಉತ್ತರ ಬಂತು,  ಗಂಟೆಗಳ ಬಳಿಕ ಕಾದ ನಂಚರ ಖಾಸಗಿ ಆಸ್ಪತ್ರೆ ಮೇಲೆ ಒತ್ತಡ ಹಾಕಿದ ನಂತರ ಒಂದು ಹಾಸಿಗೆ ದೊರಕಿತು ಎಂದು ರೋಗಿ ಸಂಬಂಧಿ ಅರುಣ ಎಂಬುವರು ತಿಳಿಸಿದ್ದಾರೆ. 

ಮೈಸೂರಿನಲ್ಲಿಯೂ ಬೆಡ್ ಬ್ಲಾಕಿಂಗ್  ಮಾಫಿಯಾ ನಡೆಯುತ್ತಿದೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ವಿಜಯ್ ಕುಮಾರ್ ತಿಳಿಸಿದ್ದಾರೆ.  ಮೈಸೂರಿನ ಹಲವು ಖಾಸಗಿ ಆಸ್ಪತ್ರೆಗಳು ಸರ್ಕಾರದ ನಿರ್ದೇಶನದಂತೆ ಶೇ, 50 ರಷ್ಟು ಹಾಸಿಗೆ ಮೀಸಲಿರಿಸಿಲ್ಲ  ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com