ಚಾಮರಾಜನಗರ: ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಸಚಿವ ಸುರೇಶ್ ಕುಮಾರ್ ಭೇಟಿ; ರೋಗಿಗಳ ಆರೋಗ್ಯ ವಿಚಾರಣೆ

ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿದ ಬೆನ್ನಲ್ಲೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್ ವೈಯಕ್ತಿಕ ಆರೋಗ್ಯ ಲೆಕ್ಕಿಸದೇ ತಾವೇ ಸ್ವತಃ ಪಿಪಿಇ ಕಿಟ್ ಧರಿಸಿ  ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡಿನೊಳಗೆಲ್ಲಾ ಓಡಾಡಿದರು.
ಆಸ್ಪತ್ರೆಗೆ ಸುರೇಶ್ ಕುಮಾರ್ ಭೇಟಿ
ಆಸ್ಪತ್ರೆಗೆ ಸುರೇಶ್ ಕುಮಾರ್ ಭೇಟಿ

ಚಾಮರಾಜನಗರ: ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿದ ಬೆನ್ನಲ್ಲೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್ ವೈಯಕ್ತಿಕ ಆರೋಗ್ಯ ಲೆಕ್ಕಿಸದೇ ತಾವೇ ಸ್ವತಃ ಪಿಪಿಇ ಕಿಟ್ ಧರಿಸಿ  ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡಿನೊಳಗೆಲ್ಲಾ ಓಡಾಡಿದರು.

ಜಿಲ್ಲಾಡಳಿತ ಪೂರೈಸಿರುವ ವ್ಯವಸ್ಥೆಯನ್ನು ಖುದ್ದಾಗಿ ಪರಾಮರ್ಶಿಸಿದ ಸಚಿವರು ಎಲ್ಲ‌‌ ಜಾಗರೂಕತಾ‌ ಕ್ರಮಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಹಲವು ವೈದ್ಯರು ಸಚಿವರ ಜೊತೆಗಿದ್ದರು, ರೋಗಿಗಳನ್ನು ಖುದ್ದಾಗಿ ತಾವೇ ಮಾತನಾಡಿಸಿ ಅವರಿಂದ ಮಾಹಿತಿ ಪಡೆದರು, ಬೇಗ ಗುಣಮುಖವಾಗುವಂತೆ ಅವರಿಗೆಲ್ಲಾ ಹಾರೈಸಿದರು.

ಈ ವೇಳೆ ಕೆಲವು ರೋಗಿಗಳು ದುಃಖದಿಂದ ಅಳತೊಡಗಿದರು, ಅವರನ್ನೆಲ್ಲಾ ಸಚಿವರು ಸಮಾಧಾನ ಪಡಿಸಿದರು. ನಾವೆಲ್ಲರು ಧೈರ್ಯದಿಂದ ವೈರಸ್ ಅನ್ನು ಓಡಿಸಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

ಕೋವಿಡ್ ಸಮಯದಲ್ಲೇ ಮಗುವಿಗೆ ಜನ್ಮ ನೀಡಿದ್ದೀರಾ, ಮಗುವಿಗೆ ಸೊಗಸಾದ ಹೆಸರಿಡಿ ಎಂದು ಮಗುವಿಗೆ ಜನ್ಮ ನೀಡಿದ್ದ ತಾಯಿಗೆ ಹೇಳಿದರು. ಇನ್ನೂ ಸಿಬ್ಬಂದಿಗೆ ವಾಶ್ ರೂಂ ಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು.

ಮತ್ತೆ ದುರಂತ ಸಂಭವಿಸಿದಂತೆ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ ಸುರೇಶ್ ಕುಮಾರ್ ವೈರಸ್ ವಿರುದ್ಧ ನೀವು ಸೋಲಲು ಬಿಡುವುದಿಲ್ಲ ಎಂದು ಆತ್ಮ ವಿಶ್ವಾಸ ತುಂಬಿದರು.

ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆಯೋಗ ರಚಿಸಿದೆ, ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com