ಬೆಂಗಳೂರು: ಕೋವಿಡ್ ರೋಗಿ ಸಾವಿನಿಂದ ರೊಚ್ಚಿಗೆದ್ದು ಕುಟುಂಬಸ್ಥರಿಂದ ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ

ಕೋವಿಡ್ ಮೃತ ರೋಗಿಯ ಕುಟುಂಬಸ್ಥರು ವೈದ್ಯರು ಮತ್ತು ದಾದಿಯರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಡಾ.ಬಿ ಆರ್ ಆರ್ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಿಬ್ಬಂದಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಆಸ್ಪತ್ರೆ
ಆಸ್ಪತ್ರೆ

ಬೆಂಗಳೂರು: ಕೋವಿಡ್ ಮೃತ ರೋಗಿಯ ಕುಟುಂಬಸ್ಥರು ವೈದ್ಯರು ಮತ್ತು ದಾದಿಯರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಡಾ.ಬಿ ಆರ್ ಆರ್ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಿಬ್ಬಂದಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ರೋಗಿಯ ಕುಟುಂಬವು ಕೇಸ್ ಶೀಟ್ ನೀಡುವಂತೆ ಒತ್ತಾಯಿಸಿದ್ದು ಅಲ್ಲದೆ ಮೃತನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ದೂಷಿಸಿದ್ದಾರೆ. ರೋಗಿಯ ಸಂಬಂಧಿಕರು ವೈದ್ಯರು, ದಾದಿಯರು ಮತ್ತು ಶುಶ್ರೂಷಾ ವಿದ್ಯಾರ್ಥಿಗಳ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಮುನಿರಾಜು ಹೇಳಿದ್ದಾರೆ. 

ರೋಗಿಯ ಸಂಬಂಧಿಕರಿಗೆ ಕೇಸ್ ಶೀಟ್ ನೀಡುವುದು ನಿಯಮಗಳಿಗೆ ವಿರುದ್ಧವಾಗಿದೆ. ಮೃತನ ಕಾರ್ಯವಿಧಾನಗಳನ್ನು ಮುಗಿಸಿದ ನಂತರ ನಾವು ನಕಲನ್ನು ನೀಡಬಹುದು ಎಂದು ನಾವು ಹೇಳಿದ್ದೇವು ಆದರೆ ಅವರು ಯಾವ ಚುಚ್ಚುಮದ್ದು ಮತ್ತು ಔಷಧಿಗಳನ್ನು ಬಳಸಿದ್ದಾರೆಂದು ಪರಿಶೀಲಿಸಲು ಬಯಸಿದ್ದರು. ಆದರೆ ನಾವು ಕೇಸ್ ನೀಡುವುದಿಲ್ಲ ಎಂದು ಹೇಳಿದ್ದಕ್ಕೆ ಮೃತನ ಸಾವಿಗೆ ಕರ್ತವ್ಯದಲ್ಲಿದ್ದ ವೈದ್ಯರೆ ಕಾರಣ ಎಂದು ದೂಷಿಸಿ ಸಿಬ್ಬಂದಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದರು. 

ಇದರಿಂದ ಬೇಸರಗೊಂಡ ವೈದ್ಯರು, ದಾದಿಯರು ಕರ್ತವ್ಯ ಮುಂದುವರೆಸಲು ನಿರಾಕರಿಸಿದ್ದಾರೆ. ಕೋವಿಡ್ ಸಾವುಗಳು ಹೆಚ್ಚಾಗುವುದರೊಂದಿಗೆ ಇಂತಹ ಘಟನೆ ಮತ್ತೆ ಸಂಭವಿಸಬಹುದು ಎಂದು ಆಸ್ಪತ್ರೆಯ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ಗಂಟೆಗಳ ನಂತರ, ರೋಗಿಗಳಿಗೆ ಚಿಕಿತ್ಸೆ ನೀಡುವ ಸಂಬಂಧ ಪರ್ಯಾಯ ಸಿಬ್ಬಂದಿಯನ್ನು ವ್ಯವಸ್ಥೆಗೊಳಿಸಲಾಯಿತು ಎಂದರು.

ಇನ್ನು ಹಲ್ಲೆ ವೇಳೆ ರೋಗಿಯ ಸಂಬಂಧಿಕರು ಅಸಭ್ಯ ಭಾಷೆ ಬಳಸಿದ್ದು ಅಲ್ಲದೆ ಮಹಿಳಾ ವೈದ್ಯರ ಮೇಲೂ ಹಲ್ಲೆ ನಡೆಸಿದರು. ಇವರು ಯುವ ವೈದ್ಯರು, ಅವರು ಪ್ರಾಣ ಉಳಿಸಲು ಬಂದಿದ್ದಾರೆ. ಆದರೆ ಈಗ ಅವರೇ ಭಯಭೀತರಾಗಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಸಲುವಾಗಿ ಭದ್ರತೆಯನ್ನು ಹೆಚ್ಚಿಸಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com