ಕೋವಿಡ್ ಪೋರ್ಟಲ್ ವ್ಯವಸ್ಥೆ ಇಷ್ಟವಾಗದಿದ್ದರೆ ಮುಂದಿನ ಪರಿಸ್ಥಿತಿ ನೀವೇ ನಿಭಾಯಿಸಿ: ರಾಜಕೀಯ ನಾಯಕರಿಗೆ ಅಧಿಕಾರಿಗಳು

ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಹೆಚ್'ಬಿಎಂಎಸ್, ವಾರ್ ರೂಮ್, ಎಸ್ಎಎಸ್'ಟಿ ಹಾಗೂ ಇತರೆ ಕೋವಿಡ್ ಪೋರ್ಟಲ್ ವ್ಯವಸ್ಥೆಗಳು ಇಷ್ಟವಾಗದಿದ್ದರೆ, ಅವುಗಳನ್ನು ರದ್ದುಪಡಿಸುತ್ತೇವೆ. ಮುಂದಿನ ಪರಿಸ್ಥಿತಿಯನ್ನು ನೀವೇ ನಿಭಾಯಿಸಿಕೊಳ್ಳಿ ಎಂದು ರಾಜ್ಯ ಸರ್ಕಾರ ಹಾಗೂ ರಾಜಕೀಯ ನಾಯಕರಿಗೆ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಹೆಚ್'ಬಿಎಂಎಸ್, ವಾರ್ ರೂಮ್, ಎಸ್ಎಎಸ್'ಟಿ ಹಾಗೂ ಇತರೆ ಕೋವಿಡ್ ಪೋರ್ಟಲ್ ವ್ಯವಸ್ಥೆಗಳು ಎಂದಿನಂತೆ ಮುಂದುವರೆಯಲಿವೆ. ಈ ವ್ಯವಸ್ಥೆ ಇಷ್ಟವಾಗದಿದ್ದರೆ, ಅವುಗಳನ್ನು ರದ್ದುಪಡಿಸುತ್ತೇವೆ. ಮುಂದಿನ ಪರಿಸ್ಥಿತಿಯನ್ನು ನೀವೇ ನಿಭಾಯಿಸಿಕೊಳ್ಳಿ ಎಂದು ರಾಜ್ಯ ಸರ್ಕಾರ ಹಾಗೂ ರಾಜಕೀಯ ನಾಯಕರಿಗೆ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ. 

ಹೊಸ ಪೋರ್ಟಲ್ ಸೃಷ್ಟಿಸುವುದು ಅಷ್ಟು ಸುಲಭದ ಕೆಲಸವಲ್ಲ. ನಮಗೆ ಮೂರು ತಿಂಗಳಾದರೂ ಕಾಲಾವಕಾಶ ಬೇಕು. ಈಗಾಗಲೇ ಹೊಸ ಪೋರ್ಟಲ್ ಸ್ಥಾಪನೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಚಾಲನೆಯಲ್ಲಿರುವ ಪೋರ್ಟಲ್ ನಿಂದ ಮಾಹಿತಿಗಳನ್ನು ಹೊಸ ಪೋರ್ಟಲ್'ಗೆ ರವಾನಿಸಬೇಕು. ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಹೊಸ ಪೋರ್ಟಲ್ 3ನೇ ಅಲೆ ಆರಂಭವಾಗುವಷ್ಟರಲ್ಲಿ ಸಿದ್ಧಗೊಳ್ಳಲಿದೆ. ಇದಕ್ಕೆ ಕನಿಷ್ಟವೆಂದರೂ 3 ತಿಂಗಳು ಸಮಯಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ರಾಜಕೀಯ ನಾಯಕರಿಗೆ ಪ್ರಸ್ತುತ ಇರುವ ಪೋರ್ಟಲ್ ಇಷ್ಟವಾಗದಿದ್ದರೆ, ನಾವು ಅದನ್ನು ಸ್ಥಗಿತಗೊಳಿಸುತ್ತೇವೆ. ಅವರೇ ಮುಂದಿನ ನಿರ್ಧಾರಗಳನ್ನು, ಪರಿಸ್ಥಿತಿಗಳನ್ನು ನೋಡಿಕೊಳ್ಳಲಿ. ಈಗಾಗಲೇ ಖಾಸಗಿ ಆಸ್ಪತ್ರೆಗಳು ಶೇ.60 ರಷ್ಟು ಹಾಸಿಗೆ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಕೆಲವನ್ನು ರಾಜಕೀಯ ನಾಯಕರು ನಿರ್ವಹಿಸುತ್ತಿದ್ದಾರೆ. ಪರಿಸ್ಥಿತಿ ಕಠಿಣಗೊಂಡಿದ್ದೇ ಆದರೆ, ಇದು ಶೇ.100ಕ್ಕೂ ತಲುಪಬಹುದು ಎಂದು ಎಚ್ಚರಿಸಿದ್ದಾರೆ. 

ವೃತ್ತಿಪರರು, ಐಐಎಸ್ಸಿ ತಜ್ಞರು ಮತ್ತು ಇ-ಆಡಳಿತ ಅಧಿಕಾರಿಗಳ ಸಹಾಯದಿಂದ 2020 ರ ಜುಲೈನಲ್ಲಿ ಹಾಸಿಗೆ ಹಂಚಿಕೆ ಪೋರ್ಟಲ್ ಅನ್ನು ರಚಿಸಲಾಗಿತ್ತು. ಕೆಲವು ದೋಷಗಳು ಕಂಡು ಬಂದ ಕೂಡಲೇ ಸಾಂಕ್ರಾಮಿಕ ರೋಗ ಇರುವ ಈ ಪರಿಸ್ಥಿತಿಯಲ್ಲಿ ಪೋರ್ಟಲ್ ಬದಲಾವಣೆ ಮಾಡುವುದು ಅಷ್ಟು ಸುಲಭವಲ್ಲ. ನಾಗರೀಕರಿಗೆ ಅಗತ್ಯವಿರುವುದರಿಂದ ಪೋರ್ಟಲ್ ಸೇವೆ ಎಂದಿನಂತೆ ಮುಂದುವರೆಯಲಿವೆ. ರಾಜ್ಯ ಸರ್ಕಾರ ಹಾಗೂ ರಾಜಕೀಯ ನಾಯಕರಿಗೆ ಅದು ಇಷ್ಟವಾಗದಿದ್ದರೆ, ಅವರೇ ಮುಂದಿನ ನಿರ್ಧಾರ ಕೈಗೊಳ್ಳಲಿ ಎಂದು ಹೇಳಿದ್ದಾರೆ. 

ಈ ನಡುವೆ ಸರ್ಕಾರದ ಅಧಿಕಾರಿಗಳು ಹೊಸ ಸಾಫ್ಟ್ ವೇರ್ ಹಾಗೂ ಪೋರ್ಟಲ್ ಗಳ ಕುರಿತು ಇನ್ಫೋಸಿಸ್ ಫೌಂಡೇಷನ್ ಜೊತೆಗೆ ಮಾತುಕತೆ ನಡೆಸುತ್ತಿದ್ದು, ಸರ್ಕಾರ ಕೂಡ ಕೊಚ್ಚಿ ಮಾದರಿ ಕುರಿತು ಅಧ್ಯಯನ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com