ಸಿಟಿ-ಸ್ಕ್ಯಾನಿಂಗ್ ದರ ನಿಗದಿಪಡಿಸಿದ ಸರ್ಕಾರ, ದಂಧೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ: ಸಚಿವ ಸುಧಾಕರ್ 

ಕೋವಿಡ್-19 ಸೋಂಕನ್ನು ಪತ್ತೆಹಚ್ಚಲು ಸಿಟಿ-ಸ್ಕ್ಯಾನ್ ಅಥವಾ ಎಕ್ಸ್-ರೇ ಅಗತ್ಯವಾಗಿರುವುದರಿಂದ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ಪ್ರಯೋಗಾಲಯಗಳಲ್ಲಿ ದರವನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.
ಡಾ ಕೆ ಸುಧಾಕರ್
ಡಾ ಕೆ ಸುಧಾಕರ್

ಬೆಂಗಳೂರು: ಕೋವಿಡ್-19 ಸೋಂಕನ್ನು ಪತ್ತೆಹಚ್ಚಲು ಸಿಟಿ-ಸ್ಕ್ಯಾನ್ ಅಥವಾ ಎಕ್ಸ್-ರೇ ಅಗತ್ಯವಾಗಿರುವುದರಿಂದ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ಪ್ರಯೋಗಾಲಯಗಳಲ್ಲಿ ದರವನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.

ಇನ್ನು ಮುಂದೆ ಸಿಟಿ-ಸ್ಕ್ಯಾನ್ ಮತ್ತು ಡಿಜಿಟಲ್ ಎಕ್ಸ್-ರೇಗೆ ಅನುಕ್ರಮವಾಗಿ ಖಾಸಗಿ ಆಸ್ಪತ್ರೆಗಳಲ್ಲಿ 1,500 ರೂಪಾಯಿ ಮತ್ತು 250 ರೂಪಾಯಿಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

ಈ ಮೂಲಕ ಕೊರೋನಾ ಸೋಂಕಿತರ ಪರೀಕ್ಷೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ದುಪ್ಪಟ್ಟು ಹಣ ವಸೂಲಿ ಮಾಡಿ ದಂಧೆ ಮಾಡಲು ಮುಂದಾಗಿರುವುದಕ್ಕೆ ಸರ್ಕಾರ ಬ್ರೇಕ್ ಹಾಕಿದಂತಾಗಿದೆ. ಈ ಮೂಲಕ ಖಾಸಗಿ ಆಸ್ಪತ್ರೆಗಳ ದಂಧೆಗೆ ಕಡಿವಾಣ ಬೀಳುತ್ತದೆಯೇ ಎಂದು ಕಾದುನೋಡಬೇಕಿದೆ.

ರೋಗಿಗಳಿಂದ ಸಿಟಿ ಸ್ಕ್ಯಾನ್ ಗೆ ಹೆಚ್ಚು ಹಣ ವಸೂಲಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ನ್ನು ಉಚಿತವಾಗಿ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳುವಂತೆಯೂ ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com